Advertisement

Category: ಅಂಕಣ

ಹೆಣ್ಮನಗಳ ಕಾವ್ಯದ ಜಾಡು ಹಿಡಿದು: ಆಶಾ ಜಗದೀಶ್ ಅಂಕಣ

“ಹೆಣ್ಣು ತನ್ನ ಸಂಪರ್ಕಕ್ಕೆ ಬರುವ ಎಲ್ಲರನ್ನೂ ತೆಕ್ಕೆಗೆಳೆದುಕೊಳ್ಳುತ್ತಾಳೆ. ಸೂಕ್ಷ್ಮವಾಗಿ ಅರ್ಥೈಸಿಕೊಳ್ಳುತ್ತಾಳೆ ಎನ್ನುವುದಕ್ಕೆ ನಿದರ್ಶನ. ಆ ಅವನ ಕೋಪವನ್ನು ಅವ ಹೇಳದೆಯೇ ಅವಳು ಗ್ರಹಿಸುತ್ತಾಳೆ. ಮೊದಲಿಗೆ ಹೆಣ್ಣೊಬ್ಬಳು ಗಂಡನ್ನು ಬಯಸುವುದು ಒಂದು ರೀತಿ ಬಂಡಾಯದ ದನಿ ಎನಿಸುತ್ತದೆಯಾದರೂ ಪದ್ಯ ಮಧ್ಯಭಾಗದಿಂದ ಬೇರೊಂದು ಮಜಲಿಗೆ ಹೊರಳಿಕೊಳ್ಳುತ್ತದೆ. ಗಂಡನ್ನು ವರ್ಣಿಸುತ್ತಾ ಸಾಗುವ ಕವಿತೆ, ಅದನ್ನು ಲೋಕ ಗ್ರಹಿಸುವ ರೀತಿಯನ್ನು ವಿಡಂಬನೆ ಮಾಡುತ್ತದೆ.”

Read More

ವ್ಯವಸ್ಥೆಯನ್ನೊಮ್ಮೆ ರೀಬೂಟ್ ಮಾಡಬಹುದೆ?: ಮಧುಸೂದನ್ ವೈ.ಎನ್ ಅಂಕಣ

“ಒಂದು ಮೊಬೈಲೋ ಲ್ಯಾಪ್ ಟಾಪೋ ಆದರೆ ರೀಬೂಟ್ ಮಾಡಿ ಸರಿಮಾಡಿಕೊಳ್ಳುವುದು ಸುಲಭ. ಅದೇ ಒಂದು ಸೈನ್ಯದ, ಸ್ಪೇಸ್ ಸ್ಟೇಷನ್ನಿನ, ಅಥವಾ ಪೇಮೆಂಟ್ ಕಂಪನಿಯ ಸಿಸ್ಟಂಗಳನ್ನು ರೀಬೂಟ್ ಮಾಡಬೇಕೆಂದರೆ ತೆರಬೇಕಾದ ಬೆಲೆ ದುಬಾರಿ! ಆ ಕ್ಷಣವನ್ನೆ ಹೊಂಚು ಹಾಕಿ ವೈರಿ ಕ್ಷಿಪಣಿ ಹಾರಿಸಬಹುದು, ಬಹುಮುಖ್ಯ ಆಸ್ಟರಾಯ್ಡ್ ಕಣ್ತಪ್ಪಿಸಿಕೊಳ್ಳಬಹುದು…”

Read More

ರಾಣಿರಾಜ್ಯದಲ್ಲಿ ಬೆಂಕಿ ವಿಕೋಪ, ಪ್ರವಾಹ ತಾಪ: ವಿನತೆ ಶರ್ಮ ಅಂಕಣ

“ಬೆಂಕಿ ಬಂದಾಗ ಮನೆ ತೊರೆಯುವುದಿಲ್ಲ, ಸತ್ತರೆ ಇಲ್ಲೇ ಎನ್ನುತ್ತಾ ಹಠಹಿಡಿದು ಕುರ್ಚಿ ಹಾಕಿಕೊಂಡು ಮನೆಮುಂದೆ ಕುಳಿತು ಬೆಂದುಹೋದ ಪತ್ನಿಯ ಬಗ್ಗೆ ರೋಧಿಸುತ್ತಿದ್ದ ವೃದ್ಧ, ತನ್ನ ಪುಟ್ಟ ನಾಯಿಯನ್ನ ಕಳೆದುಕೊಂಡ ಬಾಲಕಿಯ ಆಕ್ರಂದನ, ಮನೆ, ಆಸ್ತಿಪಾಸ್ತಿ, ಕುದುರೆಗಳನ್ನು ಕಳೆದುಕೊಂಡ ನಿರ್ಗತಿಕರಾದ ಆರು ಜನರಿದ್ದ ಕುಟುಂಬ, ಪ್ರವಾಹ ಬಂದಾಗ ತನ್ನ ಕಾರಿನ ಮೇಲೇರಿ ನಿಂತು ಫೋಟೋ ಹಿಡಿಯುತ್ತಾ ರೋಮಾಂಚಿತನಾದ ಯುವಕ, ಬೇರೆ ದೇಶದಿಂದ ಬಂದು ಇಲ್ಲಿ ಬದುಕುತ್ತಾ ಬಾಳುತ್ತಿದ್ದರೂ ಕೂಡ ನೆರೆ ಬಂದಾಗ ಸಹಾಯ ಮಾಡದೆ….”

Read More

ತೊರೆದು ಜೀವಿಸಬಹುದೇ ನಿಮ್ಮ ಚರಣಗಳ: ಕೃಷ್ಣ ದೇವಾಂಗಮಠ ಅಂಕಣ

“ದೇಹವೇ ಮಣ್ಣು ಹಾಗಾಗಿಯೇ ಮಣ್ಣಿಂದ ಕಾಯ ಮಣ್ಣಿಂದ ಅಂತ ದಾಸರು ಹಾಡಿದ್ದು. ಅಕ್ಕಿ ಬೆಂದು ಹೇಗೆ ತನ್ನ ರೂಪ ಬದಲಿಸುತ್ತದೋ ಹಾಗೆಯೇ ಅನ್ನ ದೇಹವಾಗಿ ಮಾರ್ಪಾಡಾಗುತ್ತದೆ ಅದೇ ಪೃಥ್ವೀ ತತ್ವ. ಇನ್ನು ನಮ್ಮೊಳಗಿರುವ ನೀರು, ಹೊರಬರುವ ಮೂತ್ರ, ವೀರ್ಯ ಎಲ್ಲವೂ ಜಲ ಸ್ವರೂಪವೇ ಆಗಿದ್ದು ಅದನ್ನೇ ಜಲತತ್ವ ಅಂತಾರೆ. ಅಗ್ನಿಯಿಲ್ಲದೆ ನಾವು ತಿಂದ ಅನ್ನ ಹೊಟ್ಟೆಯಲ್ಲಿ ಅರಗುವುದಿಲ್ಲ. ನಮ್ಮೊಳಗಿನ ಜಠರಾಗ್ನಿಯೇ ತಿಂದದ್ದನ್ನು ಕರಗಿಸುವುದು. ಅದೇ ಅಗ್ನಿ ತತ್ವ. “

Read More

ಭೂತದ ತೋಟದಲ್ಲಿ ಬಾಯಿಬಡುಕ ಹಕ್ಕಿ: ಮುನವ್ವರ್ ಜೋಗಿಬೆಟ್ಟು ಕಥನ

“ಅವುಗಳ ತಹತಹಿಕೆ ನೋಡುವಾಗಲೇ ಅಲ್ಲೆಲ್ಲೋ ಗೂಡಿರುವ ಸಂಶಯ ಇನ್ನಷ್ಟು ದಟ್ಟವಾಯಿತು. ಮುಳ್ಳುಗಳೇ ತುಂಬಿ ಹೋಗಿದ್ದ ಆ ಪೊದೆಯಲ್ಲಿ ಗೂಡು ಹುಡುಕುವುದು ಸುಲಭವಿರಲಿಲ್ಲ. ಅಷ್ಟರಲ್ಲೇ ತಾಯಿ ಹಕ್ಕಿಯೊಂದು ಮುಳ್ಳುಗಳೆಡೆಯಿಂದ ಹೊರಬಂತು. ಸಣ್ಣ ರೆಂಬೆಯೊಂದು ಕವಲೊಡೆಯುವ ಮಧ್ಯಕ್ಕೆ ಆಧಾರವಾಗಿ ಕಟ್ಟಿದ ಗೂಡೊಂದು ಕಂಡಿತು. ಅದಾಗಲೇ ಸಣ್ಣ ಕಡಲೆಯಾಕೃತಿಯ ಸಣ್ಣ ಮೊಟ್ಟೆಗಳಿದ್ದವು.”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ