Advertisement

Category: ಅಂಕಣ

‘ಅವಧೇಶ್ವರಿ’ ನನ್ನ ಸೆಳೆದ ಕಥೆಯೂ…

ಕಥಾನಾಯಕಿಯಾದ ನರ್ಮದಾ ಪುರುಕುತ್ಸಾನಿಯ ಪಾತ್ರ ಅತ್ಯಂತ ಸಶಕ್ತವಾಗಿದೆ. ಕನ್ನಡ ಕಾದಂಬರಿ ಲೋಕದಲ್ಲಿ ಶಕ್ತಿಯುತವಾದ ನಾಯಕಿ ಮುಖ್ಯ ಪಾತ್ರದಲ್ಲಿರುವುದು ಸ್ವಲ್ಪ ಅಪರೂಪವೇ. ಪುರುಕುತ್ಸಾನಿಯ ಪಾತ್ರವನ್ನು ಪುಣೇಕರ್ ಅವರು ಕಟ್ಟಿಕೊಟ್ಟಿರುವ ಬಗೆ ಬಹಳ ಚನ್ನಾಗಿದೆ. ಸುತ್ತಮುತ್ತಲಿನ ರಾಜರಂತೆ ವಿಸ್ತರಣಾ ದಾಹವನ್ನು ಹೊಂದದೇ ತನ್ನ ರಾಜ್ಯವನ್ನು ಇರುವಷ್ಟು ಉಳಿಸಿಕೊಂಡು ಅಲ್ಲೇ ದಕ್ಷವಾಗಿ ಆಡಳಿತವನ್ನು ಮಾಡುತ್ತಾಳೆ. ಓದುವ ಸುಖ ಅಂಕಣದಲ್ಲಿ ಗಿರಿಧರ್‌ ಗುಂಜಗೋಡು ಬರಹ

Read More

ಭಾರತದ ಕ್ರಿಕೆಟ್‌ನ ಸ್ಪಿನ್ನರ್ಸಗಳು – 1

ಪ್ರಸನ್ನ ಬೋಲಿಂಗ್‌ನಲ್ಲಿ ಎಷ್ಟು ಪ್ರಭಾವಶಾಲಿಯಾಗಿದ್ದರೆಂದರೆ ಅವರು ಬೋಲರ್‌ಗಿಂತ ಒಬ್ಬ ಬಾಲ್ ಹಿಡಿದ ಚೆಸ್ ಆಟಗಾರ ಎಂದು ಆಫ್ ಸ್ಪಿನ್ನರ್ ಮ್ಯಾಲೆಟ್ ಹೇಳುತ್ತಾರೆ. ಅವರ ಎದುರಿಗೆ ಆಡಿದ ಮಾಜಿ ಆಸ್ಟ್ರೇಲಿಯಾದ ನಾಯಕ ಇಯನ್ ಛಾಪೆಲ್ ಪ್ರಸನ್ನರನ್ನು ಪ್ರಪಂಚದ ಅತ್ಯಂತ ಸುಪ್ರಸಿದ್ಧಿ ನಂಬರ್ 1 ಬೋಲರ್ ಎಂದು ಘೋಷಿಸಿದರು. ಬಹಳ ಆಟಗಾರರು ಅವರನ್ನು ಮಾಂತ್ರಿಕ ಎಂದೂ ಕರೆದಿದ್ದಾರೆ. ಬಹಳ ಆಟಗಾರರು ಅವರನ್ನು ಮಾಂತ್ರಿಕ ಎಂದೂ ಕರೆದಿದ್ದಾರೆ.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣ ಬರಹ ನಿಮ್ಮ ಓದಿಗೆ

Read More

ಬಿಸಿಲು ಮೂಡುವ ಹೊತ್ತಿಗೆ, ಕೈಯಲ್ಲೊಂದು ಹೊತ್ತಿಗೆಯಿರಲಿ

ಇತ್ತೀಚೆಗೆ ಇತ್ತ ನಾಟಕವೂ ಅಲ್ಲದ, ಅತ್ತ ಸರಳ ಓದುವಿಕೆಯೂ ಅಲ್ಲದ ಮಧ್ಯಮಾರ್ಗದಲ್ಲಿ ನಿಂತ ಆಡಿಯೋ ಪುಸ್ತಕಗಳ ಭರಾಟೆಯೂ ಹೆಚ್ಚಿದೆ. ಕೆಲಸ ಮಾಡುತ್ತಲೇ ಕೇಳಿಸಿಕೊಳ್ಳಬಹುದು. ವಿಚಾರ ತಿಳಿಯಬಹುದು ಎಂಬ ಸಕಾರಾತ್ಮಕ ಅಂಶಗಳ ಬೆಂಬಲವಿದ್ದರೂ, ಏಕಾಂತದಲ್ಲಿ ಈ ಜಗದ ಪರಿವೆ ಇಲ್ಲದೆ, ಮನೋಲೋಕದಲ್ಲಿ ಪಾತ್ರವೇ ನಾವಾಗಿ ವಿಹರಿಸುವ ‘ಓದಿ’ನ ಆನಂದವನ್ನು ಎಂದಿಗೂ ಅವು ನೀಡಲಾರವು. ನಮ್ಮ ಕಲ್ಪನೆಯಲ್ಲಿ ಪಾತ್ರಗಳಿಗೆ ರೂಪ, ಬಣ್ಣ, ನಿಲುವು ಸಿಕ್ಕಂತೆಯೇ ಅವುಗಳಿಗೆ ಧ್ವನಿಯೂ ಲಭಿಸಿರುತ್ತದೆ.
ಎಸ್. ನಾಗಶ್ರೀ ಅಜಯ್ ಬರೆಯುವ ಲೋಕ ಏಕಾಂತ ಅಂಕಣ

Read More

ದೇವಾಲಯಗಳಲ್ಲಿ ಮಿಥುನ ಶಿಲ್ಪಗಳು

ಇನ್ನೊಂದು ಕುತೂಹಲಕರ ವಿಷಯ ಅಂದರೆ, ಆ ಕಾಲದ ಸಾಮಾಜಿಕ ಜೀವನದ ಮೇಲೆ ಬೆಳಕು ಚೆಲ್ಲುವ ಕೃತಿಗಳನ್ನು ರಚಿಸಿರುವ, ತಮ್ಮ ಪ್ರವಾಸದ ಕಥೆ ಹೇಳುತ್ತ ಅಂದಿನ ಜೀವನದ ಬಗ್ಗೆ ತಿಳಿಸುವ ಕಲಣ, ಬಿಲ್ಲಣ ಮುಂತಾದವರ ಕೃತಿಗಳಲ್ಲೂ ಕೂಡ ಯಾವ ಕಾರಣಕ್ಕೆ ದೇವಾಲಯಗಳಲ್ಲಿ ಮಿಥುನ ಶಿಲ್ಪಗಳನ್ನು ಕೆತ್ತುತ್ತಾರೆ ಎನ್ನುವುದರ ಬಗ್ಗೆ ಏನೂ ಮಾಹಿತಿ ಸಿಗುವುದಿಲ್ಲ. ಹಾಗಾಗಿ ಇದು ಅಂದಿನ ಸಾಮಾಜಿಕ ಜೀವನದಲ್ಲಿ ತುಂಬಾ ಸಹಜವಾದ ಭಾಗವಾಗಿರಬಹುದು.
‘ದೇವಸನ್ನಿಧಿ’ ಅಂಕಣದಲ್ಲಿ ಪುರಾತನ ದೇವಸ್ಥಾನಗಳಲ್ಲಿ ಕಾಣಸಿಗುವ ಮಿಥುನ ಶಿಲ್ಪಗಳ ಕುರಿತು ಬರೆದಿದ್ದಾರೆ ಗಿರಿಜಾ ರೈಕ್ವ

Read More

ಸಮಕಾಲೀನ ತಲ್ಲಣಗಳಿಗೆ ಹೆಗಲುಕೊಡುವ ಕವಿತೆಗಳು

ಮನುಷ್ಯ ಮಾಗಿದಷ್ಟೂ ಅವನ ಬರಹ ಪಕ್ವವಾಗುತ್ತದೆ ಎಂಬ ಮಾತು ಕೆಲವರಿಗೆ ಅಪವಾದವಾಗುತ್ತದೆ. ಸಮಾಜದ ತಲ್ಲಣಗಳಿಗೆ ಸ್ಪಂದಿಸುವ ಕವಿ ಮತ್ತು ಆತನ ಬರವಣಿಗೆಗಳು ಇಂಥ ದುರಿತ ಕಾಲಕ್ಕೆ ಖಂಡಿತ ಅವಶ್ಯಕತೆ ಇದೆ. ವಿಶಾಲ್ ಅವರ ಬರಹದ ನಡಿಗೆಯೂ ಸಮಸಮಾಜದ ನಿರ್ಮಿತಿಯ ಕಡೆಗೇ ಇದೆ. ಒಂದೊಂದು ಕವಿತೆಯಲ್ಲೂ ಅವರೇ ಕಂಡು, ಅನುಭವಿಸಿದ ನೋವುಗಳನ್ನು ಕಾವ್ಯದ ಮೂಲಕ ಹೊರಹಾಕಿದ್ದಾರೆ.
ಅಭಿಷೇಕ್‌ ವೈ.ಎಸ್. ಬರೆಯುವ “ಕಾವ್ಯದ ಹೊಸ ಕಾಲ” ಅಂಕಣದಲ್ಲಿ ವಿಶಾಲ್‌ ಮ್ಯಾಸರ್‌ ಕವನ ಸಂಕಲನ ‘ಬಟ್ಟೆಗಂಟಿದ ಬೆಂಕಿ’ಯ ಕುರಿತ ಬರಹ ಇಲ್ಲಿದೆ

Read More

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ