Advertisement

Category: ಅಂಕಣ

ಗೆಟ್ ಅಪ್, ಸ್ಟಾಂಡ್ ಅಪ್, ಶೋ ಅಪ್….

ಆಸ್ಟ್ರೇಲಿಯಾ ದೇಶದ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೇಟ್ ದ್ವೀಪವಾಸಿ ಜನಪಂಗಡಗಳು ಎಷ್ಟೋ ಸಾವಿರ ವರ್ಷಗಳಿಂದ ಈ ನಾಡಿನಲ್ಲಿ ಬದುಕಿ ಬಾಳಿ, ನೆಲ-ಜಲ-ಪ್ರಕೃತಿಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಸುಮಾರು ಅರವತ್ತು ಸಾವಿರ ವರ್ಷಗಳಿಗೂ ಹೆಚ್ಚಿನ ಕಾಲದಿಂದ ಈ ಖಂಡದಲ್ಲಿ ಅಬೊರಿಜಿನಲ್ ಜನರ ಇರುವಿಕೆಯ ಬಗ್ಗೆ ಅಧಿಕೃತ ಪುರಾವೆಗಳಿವೆ. ಬ್ರಿಟಿಷರ ವಸಾಹತು ಸ್ಥಾಪನೆಯಿಂದ ಆರಂಭವಾಗಿ ಇಲ್ಲಿನ ಮೂಲನಿವಾಸಿಗಳ ನಿರ್ಮೂಲನೆಗೆ ನಡೆದ ಪ್ರಯತ್ನಗಳು, ಅವರ ಅತ್ಯಂತ ಕ್ರೂರ ಆಡಳಿತದೊಡನೆ ಮುಂದುವರೆದು ಅನ್ಯಾಯಗಳ ನಡುವೆಯೂ ಬದುಕುಳಿದ ಅಬೊರಿಜಿನಲ್ ಜನರ ಜೀವನಗಾಥೆ ಇನ್ನೂ ಜ್ವಲಂತವಾಗಿದೆ.
ಡಾ. ವಿನತೆ ಶರ್ಮಾ ಅಂಕಣ

Read More

ಎರಡು ಕಣ್ಣುಗಳು… ಆರು ಕೈಗಳು…!

ಈ ಲಿಸ್ಟ್ ನಲ್ಲಿದ್ದ ಕೆಲವು ಪ್ರಶ್ನೆಗಳನ್ನು ನೋಡಿ ಗಾಬರಿಯಾಗಿದ್ದು ಹೌದು. ಈ ಹುಡುಗರನ್ನು ಕರೆದುಕೊಂಡು ಹೋಗಿ ಅಲ್ಲಿ ಇರುವುದು ಸಾಧ್ಯವೇ ಎಂಬ ಸಂಶಯ ನನ್ನಲ್ಲಿ ಮೂಡಲು ಶುರುವಾಯಿತು. ಇಲ್ಲಿನ ನಗರ ಜೀವನಕ್ಕೆ ಹೊಂದಿಕೊಂಡಿರುವ ಹುಡುಗರು (ನಾನೂ ಸೇರಿ!) ಹಳ್ಳಿಯಲ್ಲಿ ಹೊಂದಿಕೊಳ್ಳುವುದು ತುಸು ಕಷ್ಟಸಾಧ್ಯ ಅನಿಸಿತಾದರೂ ಈ ಎರಡು ಹುಡುಗರು ಬರಲು ತಯಾರಾಗಿದ್ದು ನನ್ನಲ್ಲಿ ಒಂದು ಹೊಸ ಹುರುಪು ಮೂಡಿಸಿತ್ತು. ಅದರಲ್ಲಿ ವಿನೋದ ಅವರು ಇನ್ನೂ ನೌಕರಿ ಮಾಡಿಕೊಂಡಿದ್ದರು.
ಗುರುಪ್ರಸಾದ ಕುರ್ತಕೋಟಿ ಬರೆಯುವ ಗ್ರಾಮ ಡ್ರಾಯಾಯಣ ಅಂಕಣ

Read More

ಕಬೂಲ್…..

ನಿಶ್ಚಿತಾರ್ಥಕ್ಕೆ ಮೂರು ದಿನ ಉಳಿದಿತ್ತು. ಅದೇನಾಯಿತೋ ಕಾಣೆ. ರಾತ್ರಿ ಮನೆಯಲ್ಲಿ ಮಲಗಿದ್ದವಳು ಬೆಳಗ್ಗಿಗೆ ಕಾಣಲಿಲ್ಲ. ಊರೆಲ್ಲಾ ಹುಡುಕಾಯಿತು. ಸುಳಿವಿಲ್ಲ, ಸುದ್ದಿಲ್ಲ. ಅಮ್ಮ ಪಕ್ಕದೂರಿನ ದರ್ಗಾಕ್ಕೆ ಹೋಗಿ ”ಎಲ್ಲಾರ ಇರ್ಲಿ ಸುಖವಾಗಿರ್ಲಿ” ಅಂತ ದುವಾ ಕೇಳಿಕೊಂಡು ಬಂದ್ಲು. ಬಾಬಾ ‘ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ’ ಅನ್ನೊ ಗಾದೆ ನಿಜವಾಗಬಾರದೆಂದು ಉಳಿದ ನಾವು ನಾಲ್ಕು ಹೆಣ್ಣು ಮಕ್ಕಳನ್ನ ಹೆಚ್ಚು ಹೆಚ್ಚು ಕಾಯಲು ಶುರುಮಾಡಿದ. ಸಹಜವಾಗಿಯೇ ಪಾತಿ ಮತ್ತು ಸಯೀದನ ಮದುವೆ ಮುರಿದುಬಿದ್ದಿತ್ತು. ದಾದಾಪೀರ್‌ ಜೈಮನ್‌ ಬರಹ

Read More

ಆಸ್ಟ್ರೇಲಿಯಾದ ಪ್ರವಾಸಿಗರ ಕನಸು-ಕನವರಿಕೆಗಳು

 ಪ್ರವಾಸಿಗರಿಗೆ, ಕ್ಯಾಂಪಿಗರಿಗೆ, ಹೇಳಿ ಮಾಡಿಸಿದ ಚಳಿಗಾಲವಿದು. ಕಳೆದ ಕೆಲ ವರ್ಷಗಳಿಗಿಂತಲೂ ಈ ಬಾರಿ ಅಧಿಕ ಚಳಿಯಿದೆ. ಹಾಗಾಗಿ ಸಮುದ್ರತಟದಲ್ಲಿರಲು ಜನ ಹಾತೊರೆಯುತ್ತಾರೆ. ಅದು ನಿಜವೆಂಬಂತೆ ರಾಣಿರಾಜ್ಯದ ದಕ್ಷಿಣ-ಪೂರ್ವ ಭಾಗದ ಪ್ರತಿಯೊಂದು ನಗರಪಾಲಿಕೆಯೂ ತಮ್ಮಲ್ಲಿನ ಪ್ರವಾಸಿ ಸ್ಥಳಗಳನ್ನು ಪ್ರಚಾರ ಪಡಿಸಲು ಬಲು ಆಕರ್ಷಕವಾದ ಜಾಹಿರಾತುಗಳನ್ನು ಹಾಕುತ್ತಿದ್ದಾರೆ. ಶಾಲೆಗಳಿಗೆ ಟರ್ಮ್ ೨ ನಂತರದ ಎರಡು ವಾರಗಳ ರಜೆ ಆರಂಭವಾಗಿದೆ.
ಡಾ. ವಿನತೆ ಶರ್ಮ ಬರೆಯುವ ಆಸ್ಟ್ರೇಲಿಯಾ ಪತ್ರ

Read More

ಗುರುಪ್ರಸಾದ ಕುರ್ತಕೋಟಿ ಹೊಸ ಅಂಕಣ ‘ಗ್ರಾಮಡ್ರಾಮಾಯಣ’

ಸಾಕಷ್ಟು ಸಂಬಳ ಒದಗುವ ಐಟಿ ವಲಯದಲ್ಲಿ ಉದ್ಯೋಗ ನಿರ್ವಹಿಸುವಾಗ, ಕಂಪ್ಯೂಟರ್ ಗಳ ಪರದೆ ಕಣ್ಣು ಕೀಲಿಸಿ ಕುಳಿತು ದಣಿವಾದಾಗ ಹಳ್ಳಿ ಮನೆಯ, ಹೊಲಗದ್ದೆಗಳ ಕಂಪು ಮನಸ್ಸನ್ನು ಕಾಡುವುದುಂಟು. ಹಾಗೆಯೇ ತಾನೂ ಕೃಷಿ ಮಾಡುವ ಅವಕಾಶವಿದ್ದಿದ್ದರೆ ಎಷ್ಟು ಚೆನ್ನಾಗಿತ್ತು ಎಂಬ ಕನಸೂ ಮೊಳಕೆಯೊಡೆಯುವುದು. ಹೀಗೆ ಕನಸುಗಳ ಬೆನ್ನತ್ತಿ ಕೃಷಿ ಕ್ಷೇತ್ರದತ್ತ ಮುಖ ಮಾಡಿದವರು ಗುರುಪ್ರಸಾದ ಕುರ್ತಕೋಟಿ. ತಮ್ಮ ಕನಸಿನ ಹಾದಿಯಲ್ಲಿ ಕಂಡ ವಿಚಾರಗಳನ್ನು, ತಮ್ಮ ಅನುಭವಗಳನ್ನು ಅವರು ‘ಗ್ರಾಮ ಡ್ರಾಮಾಯಣ’  ಎಂಬ ಈ ಅಂಕಣದಲ್ಲಿ ಬರೆಯಲಿದ್ದಾರೆ.  ಅವರ ಮೊದಲ ಬರಹ  ಇಲ್ಲಿದೆ. 

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ