Advertisement

Category: ದಿನದ ಪುಸ್ತಕ

ಡಾ. ಪುರುಷೋತ್ತಮ ಬಿಳಿಮಲೆಯವರ ಪುಸ್ತಕಕ್ಕೆ ಪ್ರೊ.ಅಶೋಕ ಶೆಟ್ಟರ್ ಬರೆದ ಮುನ್ನುಡಿ

“ಬ್ರಿಟೀಷರ ಭೂಕಂದಾಯವನ್ನು ವಿರೋಧಿಸಿ ನಡೆದ ಹೋರಾಟಗಳು ಅಸಂಖ್ಯ. ದಕ್ಷಿಣ ಕನ್ನಡ ಮತ್ತು ಕೊಡಗು ಪ್ರದೇಶಗಳಲ್ಲಿ ಬ್ರಿಟೀಷರು ಭೂಸ್ವಾಮ್ಯ ಮತ್ತು ಭೂಕಂದಾಯಕ್ಕೆ ಸಂಬಂಧಿಸಿ ಜಾರಿಗೆ ತಂದ ಕಾನೂನುಗಳನ್ನು ವಿರೋಧಿಸಿ ರೈತರು ನಡೆಸಿದ ಹೋರಾಟದ ಕತೆ ಮೈನವಿರೇಳಿಸುವಂತಹುದು. ರೈತರ ಕೆಚ್ಚು, ವಿಶ್ವಾಸ, ಹೇಗಾದರೂ ಮಾಡಿ ಬ್ರಿಟೀಷರ ಕಂದಾಯ ಹೊರೆಯಿಂದ ಮುಕ್ತವಾಗಬೇಕು ಎಂಬ ಅವರ ಪ್ರಯತ್ನವನ್ನು ಸಾರುವ  ಘಟನೆಯ  ಮೇಲೆ ಬೆಳಕು ಚೆಲ್ಲುವ ಕೆಲಸವನ್ನು ಡಾ. ಪುರುಷೋತ್ತಮ ಬಿಳಿಮಲೆ ಮಾಡಿದ್ದಾರೆ. ” 
‘ಅಮರ ಸುಳ್ಯದ ರೈತ ಹೋರಾಟ’  ಪುಸ್ತಕಕ್ಕೆ ಪ್ರೊ.ಅಶೋಕ ಶೆಟ್ಟರ್ ಬರೆದ ಮುನ್ನುಡಿ ಇಲ್ಲಿದೆ.

Read More

ಸಿದ್ರಾಮ್ ಪಾಟೀಲ ಕಥಾ ಸಂಕಲನದ ಕುರಿತು ಪ್ರಿಯಾ ಭಟ್‌ ಬರೆದ ಬರಹ

“ಕಥೆಗಳಲ್ಲಿ ಭಾಷೆಯದೇ ಒಂದು ತೂಕ. ಉತ್ತರ ಕರ್ನಾಟಕ ದ ಬದುಕಿನ ಸೊಗಡು ಭಾಷೆಯನ್ನು ಸಶಕ್ತವಾಗಿ ಬಳಸುವುದರೊಂದಿಗೆ ಪ್ರಾದೇಶಿಕತೆಯನ್ನು ತುಂಬಿಕೊಟ್ಟಿದ್ದಾರೆ ಲೇಖಕರು. ಸಣ್ಣಕತೆಗಳಲ್ಲಿ ಪ್ರಾದೇಶಿಕ ಭಾಷೆಯನ್ನು ಬಳಸಿಕೊಂಡೂ ಓದುಗರ ಕತೆಯ ಕುತೂಹಲಕ್ಕೆ ಓದಿಸಿಕೊಳ್ಳುವಿಕೆಗೆ ತೊಡಕಾಗದಂತೆ ಬರೆಯುವುದು ಕೂಡ ಲೇಖಕರ ಪ್ರತಿಭೆ. ಮಿಸೆಸ್ ಕೆಂಪೆ ಮತ್ತು ಅಶೋಕ, ಇಂಜೆಕ್ಷನ್ ಮೊದಲಾದ ಕಥೆಗಳಲ್ಲಿ ಭಾಷೆಯೆ ಮನುಷ್ಯ ಭಾವಗಳ ಹೃದ್ಯವಾಗಿಸಿವೆ.”
ಸಿದ್ರಾಮ್‌ ಪಾಟೀಲ ಬರೆದ ‘ಜಂಗಮಕ್ಕಳಿವಿಲ್ಲʼ ಹೊಸ ಕಥಾ ಸಂಕಲನದ ಕುರಿತು ಪ್ರಿಯಾ ಭಟ್‌ ಕಲ್ಲಬ್ಬೆ ಬರೆದ ಲೇಖನ

Read More

ಇದ್ದಲ್ಲೇ ಅದೃಶ್ಯವಾದವರು ಉಳಿಸಿ ಹೋಗುವ ಬೇನೆ

“ಇನ್ನು ನಿಮ್ಮನ್ನ ಓದಿಸೋಕಾಗಲ್ಲ. ಈ ವರ್ಷದಿಂದ ನೀವು ಶಾಲೆಗೆ ಹೋಗೋದು ಬೇಡ. ಪಕ್ಕದೂರಿನ ಒಂದು ಮನೆಯಲ್ಲಿ ಕೆಲಸಕ್ಕೆ ಜನ ಹುಡುಕುತ್ತಿದ್ದರು. ನಾಳೆಯಿಂದ ನೀವಿಬ್ಬರೂ ಬರುತ್ತೀರಿ ಅಂತ ಆ ಮನೆಯ ಮಾಲಿಕರಿಗೆ ಹೇಳಿ ಬಂದಿದ್ದೇನೆ” ಎಂದು ಒಂದು ದಿನ ತಾಯಿ ಹೇಳಿದಾಗ ಡೆಸರೆ ಆ ಸುದ್ದಿಯನ್ನು ತಣ್ಣಗೆ ಸ್ವೀಕರಿಸುತ್ತಾಳೆ. ಆದರೆ ಸ್ಟೆಲ್ಲಾಳಿಗೆ ಮಾತ್ರ..ʼ

Read More

ಪೂರ್ಣಿಮಾ ಮಾಳಗಿಮನಿ ಕಾದಂಬರಿಗೆ ಕೇಶವ ಮಳಗಿ ಬರೆದ ಮುನ್ನುಡಿ

“ಬಾಲ್ಯದಲಿ ಕಂಡ ಹೊಂಗನಸು, ಕಿವಿ ತುಂಬಿದ ಶುದ್ಧಗಾಳಿ, ಷೋಷಕರ ನಿಸ್ವಾರ್ಥ ಪ್ರೀತಿ, ತಾನು ಏನೆಲ್ಲ ಆಗಿ ಬದುಕಬೇಕೆಂಬ ಅವಳ ಒಳಗಣ್ಣಿನ ಆಶೋತ್ತರಗಳು ಆಕೆಯ ಮನಸೋ-ಎದೆಯೋ ಎಂಥದ್ದೋ ಒಂದರಲಿ ಸಿಲುಕಿ ಉಸಿರುಗಟ್ಟಿದಂತೆ ಬದುಕುತ್ತಿರುವವಳು. ಒಂದು ಮುಕ್ತ, ನಿರಪೇಕ್ಷಿತ ನಿರ್ವಾಜ್ಯ ಪ್ರೇಮ ಬಯಸಿದವಳಿಗೆ ದೊರಕುತ್ತಿರುವುದು ಕಣ್ಗಾವಲಿನ, ನಿರೀಕ್ಷೆಗಳಿಂದ ತುಂಬಿದ ಪ್ರೀತಿ.”

Read More

ಸುಬ್ರಾಯ ಚೊಕ್ಕಾಡಿಯವರ ಆತ್ಮಕಥನಕ್ಕೆ ಹರೀಶ್‌ ಕೇರ ಬರೆದ ಮುನ್ನುಡಿ

“ಸಾಹಿತ್ಯ ಲೋಕದ ನೂರಾರು ಐತಿಹಾಸಿಕ ಘಟನೆಗಳಿಗೆ ಇಲ್ಲಿ ಮರುಜೀವ ಬಂದಿದೆ. ಹಾಗಾಗಿ ಇದು ‘ಮತ್ತೊಂದು ಸಾಹಿತ್ಯ ಚರಿತ್ರೆ’ಯೂ ಆಗಿದೆ. ಹಾಗೇ ಇಲ್ಲಿ ನಾವರಿಯದ, ಆದರೆ ಸ್ವಾರಸ್ಯಕರ ವ್ಯಕ್ತಿಗಳೂ ಹಲವರಿದ್ದಾರೆ. ಹಾಗೇ ಅವರಿದ್ದ ವಲಯಗಳೂ ಹಲವು- ಕಾವ್ಯ ನಾಟಕ ಯಕ್ಷಗಾನ ಹರಿಕಥೆ ಸಂಘಟನೆ ಶಿಕ್ಷಣ ಸಾಮಾಜಿಕ ಹೋರಾಟ ಪ್ರಕಾಶನ ಕೃಷಿ ಇತ್ಯಾದಿ.”
ಇದೇ ಭಾನುವಾರ ಬಿಡುಗಡೆಯಾಗಲಿರುವ…

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ