Advertisement

Category: ದಿನದ ಪುಸ್ತಕ

ಆಶಾ ಜಗದೀಶ್ ಕಥಾಸಂಕಲನಕ್ಕೆ ಮಾಲಿನಿ ಗುರುಪ್ರಸನ್ನ ಬರೆದ ಮಾತುಗಳು

“ಶೋಷಣೆಗಳಿಗೆ ಹತ್ತುಹಲವು ಮುಖಗಳಿವೆ. ಅವುಗಳಿಂದ ಪಾರಾಗಲೂ ಹತ್ತುಹಲವು ದಾರಿಗಳನ್ನು ಹುಡುಕುತ್ತೇವೆ. ಆ ಶೋಷಣೆಗಳ ವಿರುದ್ಧ ಹೋರಾಡಲು ಯತ್ನಿಸುತ್ತೇವೆ. ಹಾಗಿರುವ ಅನೇಕ ಕಥೆಗಳು ಆಶಾ ಜಗದೀಶ್ ಹೊರತರುತ್ತಿರುವ ಈ ಸಂಕಲನದಲ್ಲಿವೆ. ಸಮಾಜದ ಶ್ರೇಣೀಕೃತ ವ್ಯವಸ್ಥೆ, ಹೆಣ್ಣು ಎಂಬ ಕಾರಣಕ್ಕೆ ಅವಳಿಗೆ ದಕ್ಕಿರುವ…”

Read More

ಪ್ರಸಾದ್ ಶೆಣೈ ಪುಸ್ತಕಕ್ಕೆ ಡಾ. ನಾ. ಡಿಸೋಜ ಬರೆದ ಮಾತುಗಳು

“ಮಾಳ ಎಂಬುದು ನಕ್ಷೆಯಲ್ಲಿ ನೀವು ಗುರುತಿಸಲಾಗದ ಒಂದು ಪುಟ್ಟ ಹಳ್ಳಿ. ಲೇಖಕರು ಹೇಳುವ ಹಾಗೆ ಈ ಮಾಳ “ಪಶ್ಚಿಮ ಘಟ್ಟದ ಕೆಳಗಿನ ಹಸಿರು ತೊಟ್ಟಿಲು”. ಅಷ್ಟೇ ಅಲ್ಲ ಈ ಮಾಳವನ್ನೇ ಬಳಸಿ ಸಹ್ಯಾದ್ರಿ ತಟದ ಊರುಗಳಾದ ಕುದುರೆ ಮುಖ, ಹೊರನಾಡು, ಕಳಸ, ಶೃಂಗೇರಿಗಳ ದಾರಿ ಹಿಡಿದರಂತೂ ಇಷ್ಟು ದಿನ ಕಳೆದುಕೊಂಡ ಹೊಸ ಜಗತ್ತೊಂದು ದುತ್ತನೆ ಎದಿರು ಬಂದು ಮೂಡುತ್ತದೆ.”

Read More

ಅಕ್ಷತಾ ಕೃಷ್ಣಮೂರ್ತಿ ಪುಸ್ತಕಕ್ಕೆ ಡಾ. ಸರಜೂ ಕಾಟ್ಕರ್ ಬರೆದ ಮಾತುಗಳು

“ಅಕ್ಷತಾ ನದಿ ಹಾಗೂ ಸಮುದ್ರ ಎರಡನ್ನು ಕಂಡವರು. ಕಾಳಿ ನದಿಯಲ್ಲಿ ಈಜಾಡಿದವರು. ಅರಬ್ಬೀ ಸಮುದ್ರವನ್ನು ಅಪ್ಪಿಕೊಂಡಿದ್ದವರು. ಕಾಳಿ ಅಣೆಕಟ್ಟು ಒಡೆದಿದೆ ಎಂಬ ಗಾಳಿ ಸುದ್ದಿ ಹರಡಿದಾಗ ಜನರಲ್ಲಿ ಎದ್ದ ಕೋಲಾಹಲವನ್ನು ಬಹಳ ಸಮರ್ಥವಾಗಿ ಕವಿತೆಯೊಂದರಲ್ಲಿ ಕಟ್ಟಿಕೊಟ್ಟಿದ್ದಾರೆ. ಅದೇ ಕಾಳಿಯನ್ನು ಅಣೆಕಟ್ಟಿನಲ್ಲಿ ಬಂಧಿಸಿ ಖೈದಿ ಮಾಡಿದ್ದನ್ನು ಅವರು ಇನ್ನೊಂದು ಕವಿತೆಯಲ್ಲಿ ಚಿತ್ರಿಸಿದ್ದಾರೆ.”

Read More

ಜಿ. ಎಸ್ ಅವಧಾನಿಯವರ ಪುಸ್ತಕದ ಕುರಿತು ಸುಧಾ ಆಡುಕಳ ಬರೆದ ಲೇಖನ

“ವರ್ತಮಾನದ ಸಂಗತಿಗಳಿಗೆ ಸದಾ ತುಡಿಯುವ ಅವಧಾನಿಯವರು ಸಾಕ್ಷರತಾ ಆಂದೋಲನ, ವಿಜ್ಞಾನ ಚಳುವಳಿಗಳ ಮುಂಚೂಣಿಯಲ್ಲಿದ್ದವರು. ಅನೇಕ ವಾದ, ವಿವಾದಗಳಿಗೆ ಮುಖಾಮುಖಿಯಾಗುತ್ತಲೇ ಮೌಢ್ಯ ಮತ್ತು ಕಂದಾಚಾರಗಳನ್ನು ಸದಾ ತಮ್ಮ ಮೊನಚು ಮಾತುಗಳಿಂದ ಟೀಕಿಸುತ್ತಿದ್ದರು. ಪ್ರಖರ ವೈಚಾರಿಕತೆಯನ್ನು ತಮ್ಮ ಶಿಷ್ಯವರ್ಗದಲ್ಲಿ ಬೆಳೆಸಲು ಅನೇಕ ಸೃಜನಶೀಲ…”

Read More

ಮಂಜುಳ ಡಿ ಪುಸ್ತಕದ ಕುರಿತು ಎಂ.ಎನ್. ಸುಂದರ್ ರಾಜ್ ಲೇಖನ

“ಅಂಕಣ ಬರೆಯುವುದೆಂದರೆ, ಒಂದು ವಿಶಾಲಾರ್ಥವನ್ನು ನೀಡುವ ವಸ್ತುವನ್ನು ಕೆಲವೇ ಮಾತುಗಳಲ್ಲಿ ಹುದುಗಿಡುವಂತಹುದು. ಅಂದರೆ ಸಮುದ್ರವನ್ನು ಸಾಸಿವೆ ಕಾಳಲ್ಲಿ ತುಂಬಿದಂತೆ. ಏಕೆಂದರೆ ಒಂದೊಂದೂ ವಸ್ತುಗಳೂ ಸಹ ಕಾದಂಬರಿ ಬರೆಯುವಷ್ಟು ವಿಷಯಗಳನ್ನು ಹೊಂದಿರುತ್ತದೆ. ಉದಾಹರಣೆಗೆ ‘ಕಾಶ್ಮೀರದ ಕರಾಳತೆಯ ಹುದುಲಿನಲ್ಲಿ……’ ನಿಜಕ್ಕೂ ಇಂದಿನ ಕಾಶ್ಮೀರದ ಸ್ಥಿತಿಗೆ ಹಿಡಿದ ಕೈಗನ್ನಡಿ.”

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ