ರಾಗಿಕಾಳು ಕವನ ಸಂಕಲನ ಕುರಿತು ತಾರಿಣಿ ಶುಭದಾಯಿನಿ ಮಾತುಗಳು
ರಮೇಶಬಾಬು ಕವನಗಳಲ್ಲಿ ಬರುವ ಪಾದದ ಬಳಕೆಯನ್ನು ಗಮನಿಸಬೇಕು. ಪಯಣಕ್ಕೆ ಪಾದಗಳು ಬೇಕು ಎನ್ನುವ ಹಾಗೆ ಅವು connect ಆಗುತ್ತವೆ. ನಾನು ಗಮನಿಸಿದಂತೆ ರಮೇಶಬಾಬು ಒಂದು ವಿಲೋಮ ಕ್ರಮ ಬಳಸಿ ಸಂಗತಿಗಳನ್ನು ನೋಡುತ್ತಾರೆ; ಅದಲು ಬದಲು ಜಾಗಗಳಲ್ಲಿ ದೃಷ್ಟಿಕೋನಗಳು ಬದಲಾಗುತ್ತವೆ ಅಲ್ಲವೆ? ಅದರಂತೆ ಪಾದಗಳು ತಲೆಯ ಇನ್ನೊಂದು ತುದಿಗಳು. ಶಿರವು ಉತ್ತರವಾದರೆ ಪಾದ ದಕ್ಷಿಣದಂತೆ. ಶಿರದಿಂದ ಇಳಿಯುವುದು, ಪಾದದಿಂದ ಹತ್ತಬೇಕಾಗುತ್ತದೆ. ಈ ಅರಿವಿನೊಂದಿಗೆ ರಮೇಶಬಾಬು ಆಟವಾಡುತ್ತಾರೆ. ಪಾದಗಳೆಂದರೆ ದಾರಿ ಅಳೆಯುವ ಮಾಪಕಗಳಲ್ಲ ಅಥವಾ ದೇಹ ಹೊತ್ತ ಭಾರಧಾರಕಗಳಲ್ಲ. ಪಾದದರಿವನ್ನು ಕವಿ ಇಲ್ಲಿ ವಿವರಿಸುವ ರೀತಿಯನ್ನು ಗಮನಿಸಬೇಕು.
ಚೀಮನಹಳ್ಳಿ ರಮೇಶಬಾಬು ಬರೆದ ‘ರಾಗಿಕಾಳು’ ಹೊಸ ಕವನ ಸಂಕಲನಕ್ಕೆ ಆರ್.ತಾರಿಣಿ ಶುಭದಾಯಿನಿ ಬರೆದ ಮಾತುಗಳು