ಚಂದಿರನ ಕುವರಿಯರು ಕತೆಯೋದುವ ಮೊದಲು..
ಜಗತ್ತಿನ ಎಲ್ಲ ಭಾಷೆಗಳ ಉತ್ಕೃಷ್ಟ ಕೃತಿಗಳೂ ಪರಸ್ಪರ ಅನುವಾದಗೊಂಡಿವೆ. ಸ್ವತಂತ್ರಕೃತಿಗಳಿಗೆ ಇರುವಷ್ಟೇ ಮರ್ಯಾದೆ ಅನುವಾದ ಕೃತಿಗಳಿಗೂ ಇದೆ. ವಿಶ್ವಸಂಸ್ಕೃತಿಯ ವಿಕಾಸದಲ್ಲಿ ಭಾಷಾಂತರವೂ ನಿರ್ಮಾತೃಶಕ್ತಿ ಆಗಿರುವುದರಿಂದ ಅದರ ಅಗತ್ಯ ನಮ್ಮೆಲ್ಲ ಭಾಷೆಗಳಿಗೂ ಇದೆ. ಈ ದಿಸೆಯಲ್ಲಿ ಆರ್ ವಿಜಯರಾಘವನ್ ಅವರ ‘ಚಂದಿರನ ಕುವರಿಯರು’ ಕಥಾಸಂಕಲನದ ಕಥೆಗಳು ಕನ್ನಡದ ಸಂದರ್ಭದಲ್ಲಿ ಬಹಳ ಮುಖ್ಯವೆನಿಸುತ್ತವೆ. ಭಾಷೆ ಮತ್ತು ಸಂಸ್ಕೃತಿಗಳು ನಾಗರಿಕತೆಯ ಹೆಸರಿನಲ್ಲಿ ಜಾಗತೀಕರಣಕ್ಕೆ ಒಳಗಾಗಿರುವ ಈ ಸನ್ನಿವೇಶದಲ್ಲಿ ಅನುವಾದಗಳಿಗೆ ಮಡಿ-ಮೈಲಿಗೆಯ ಸೋಂಕು ಹತ್ತಿಸಬೇಕಿಲ್ಲ.
ಆರ್ ವಿಜಯರಾಘವನ್ ಅನುವಾದಿತ ಕತೆಗಳ ಸಂಕಲನ ‘ಚಂದಿರನ ಕುವರಿಯರು’ ಪುಸ್ತಕಕ್ಕೆ ಎನ್. ನರಹರಿ ಬರೆದ ಮುನ್ನುಡಿ