ಭಾರತದ ಕ್ರಿಕೆಟ್‍ನ ಸ್ಪಿನ್ನರ್ಸ್‌ಗಳು – 2
ನಿಧಾನವಾಗಿ ನಡೆದು ಬಂದು ಬೋಲಿಂಗ್ ಮಾಡುತ್ತಿದ್ದ ಬೇಡಿ ಅವರ ಬೋಲಿಂಗ್‌ನಲ್ಲಿ ಬಹಳ ಚಾಣಾಕ್ಷರಾಗಿದ್ದರು ಮತ್ತು ನಿಸ್ಸೀಮರು. ಒಂದು ಬಾಲು ನಿಧಾನವಾಗಿ ಬಂದರೆ ಮತ್ತೊಂದು ರಭಸದಿಂದ ಬಂದು ವಿಕೆಟ್ ಉರುಳಿಸಿ ಹೋಗುವುದು! ಇಷ್ಟಾಗಿ ಅವರ ಬೋಲಿಂಗ್ ಶೈಲಿಯಲ್ಲಿ ಕಿಂಚಿತ್ತೂ ವ್ಯತ್ಯಾಸವಿರುತ್ತಿರಲಿಲ್ಲ! ಒಂದು ಓವರ್‌ನಲ್ಲಿ 6 ವಿಧವಾಗಿ ಬಾಲು ಮಾಡುವ ಪ್ರತಿಭೆ ಹೊಂದಿದ್ದ ಬೇಡಿಯವರ ಬೋಲಿಂಗ್‌ಅನ್ನು ಹೇಗೆ ಆಡುವುದಪ್ಪ ಎಂದು ಬ್ಯಾಟ್ಮನ್‌ರನ್ನು ಕಾಡುತ್ತಿತ್ತು, ಯಾಕೆಂದರೆ ಏನು ಮಾಡಿದರೂ ಅವರು ನಡೆಯುವ ಶೈಲಿ, ರೀತಿ, ಹಾವಭಾವ ಯಾವುದರಲ್ಲೂ ಬದಲಾವಣೆ ಇರುತ್ತಿರಲಿಲ್ಲ.
ಇ.ಆರ್. ರಾಮಚಂದ್ರನ್ ಬರೆಯುವ ಅಂಕಣ