ಸಿಹಿ ಕೊಟ್ಟರೆ ಅಳುತ್ತಿದ್ದ ಮಂದಿ…
ಸುತ್ತ ಎತ್ತ ನೋಡಿದರೂ ರಾಕ್ಷಸಾಕಾರದ ಗುಡ್ಡಗಳು, ತುಂಬಿ ಹರಿಯುತ್ತಿದ್ದ ನದಿಗಳು. ಅಲ್ಲಿ ನಮ್ಮಂತೆ ಗುಂಪು ಗುಂಪು ಮನೆಗಳಾಗಲಿ ಹಳ್ಳಿಗಳಾಗಲಿ ಇಲ್ಲ. ಗುಡ್ಡಗಳಲ್ಲಿಯೇ ಹಳ್ಳಿಗಳು. ಅರ್ಧ ಕಿಲೋಮೀಟರ್ ಒಂದು, ಕಿಲೋಮೀಟರ್ ಅಂತರದಲ್ಲಿ ಒಂದೊಂದು ಮನೆಗಳು. ವಾಹನಗಳಿಗಿಂತ ಕುದುರೆಗಳೆ ಸಂಚಾರಕ್ಕೆ ಆಸರೆಗಳು. ನಮ್ಮ ತಂಡ ಮೊದಲೆ ತಯಾರಿಸಿ ಇಟ್ಟ ಅಡುಗೆ ಸಾಮಗ್ರಿಗಳ, ಬಟ್ಟೆ, ಹಾಸಿಗೆ ಹೊದಿಕೆಗಳ ಕಿಟ್ಟನ್ನು ಪ್ರತಿ ಮನೆಗೂ ತಲುಪಿಸಿ ಅವರಿಗೊಂದಿಷ್ಟು ಸಾಂತ್ವಾನ ಹೇಳಿ ಬರುತ್ತಿತ್ತು. ಶಾಲೆಗೆ, ದುಡಿಯಲು, ಕೊಂಡಕೊಳ್ಳಲು ಹೊರಗೆ ಹೋದವರು ಮರಳಿ ಹೆಣವಾಗಿ ಸಿಗುತ್ತಿದ್ದರು.
ಇಸ್ಮಾಯಿಲ್ ತಳಕಲ್ ಬರೆಯುವ ‘ತಳಕಲ್ ಡೈರಿ’ಯಲ್ಲಿ ಹೊಸ ಬರಹ ನಿಮ್ಮ ಓದಿಗೆ