`ಎಲ್ಲೆಲ್ಲಿ ಮಲಗಿ ಎದ್ದೆನೋ ಗೊತ್ತಿಲ್ಲ……..’
ನಾನು ಎಲ್ಲಿ ಮಲಗಿದ್ದೀನಿ? ನನ್ನ ಸುತ್ತಮುತ್ತಲೂ ಏನೇನಿದೆ? ಯಾರ್‍ಯಾರಿದ್ದಾರೆ? ಹಗಲೋ-ರಾತ್ರಿಯೋ, ಕತ್ತಲೋ-ಬೆಳಕೋ, ಆಕಾಶವೋ-ಭೂಮಿಯೋ, ಅತಿಥಿಗೃಹವೊ, ಬಯಲುಟೆಂಟೋ ಒಂದೂ ಗೊತ್ತಾಗುವುದಿಲ್ಲ. ಏಳಲು ಪ್ರಯತಿಸುತ್ತೇನೆ, ಎದ್ದು ಕುಳಿತುಕೊಳ್ಳಲು ಬಹಳ ಕಾಲವಾಗಬಹುದು. ಆದರೂ ಪ್ರಯತ್ನಿಸುತ್ತೇನೆ. ಯಾವತ್ತಾದರೂ ಒಂದು ದಿನ ಗ್ಯಾರಂಟಿಯಾಗಿ ಎದ್ದು ಕುಳಿತುಕೊಳ್ಳುತ್ತೇನೆ. ಅಕ್ಕಪಕ್ಕ ನಿಶಬ್ದವಾಗಿದ್ದರೆ ಚನ್ನಾಗಿರುತ್ತದೆ. ನನ್ನ ಕನಸುಗಳಲ್ಲಿ ಕಾಣಿಸಿಕೊಂಡ ಎಲ್ಲಾ ಕತೆ ಕವನ, ಕಾಲ ದೇಶ, ಕೆರೆ ಕುಂಟೆ, ಜನರು ಕೊನೆಗೆ ಪ್ರಾಣಿಗಳು ಎಲ್ಲದರ ಬಗ್ಗೆ ಬರೆದುಬಿಡಬೇಕು. ಹಾಸಿಗೆ ಪಕ್ಕದಲ್ಲಿಯೇ ಪೋಲ್ಡಿಂಗ್ ಟೇಬಲ್ ಇಟ್ಟಿದ್ದೀನಿ.
Read More