ಲೋಕಾಂತ ಕವಿಯ ಏಕಾಂತ ಬದುಕಿನ ಅನಾವರಣ: ಡಾ. ಎ. ರಘುರಾಂ ಬರಹ
ಲೆಕ್ಕದಲ್ಲಿ ತಾನು ಅಷ್ಟೊಂದು ಪಂಡಿತನಲ್ಲ ಎನ್ನುವ ಕಾರಣಕ್ಕೆ ತಿಂಗಳಿಗೆ ಮೂವತ್ತೈದು ರೂಪಾಯಿ ಸಂಬಳದ ಪವರ್‌ಹೌಸ್‌ನ ನೌಕರಿಯನ್ನು ಬಿಟ್ಟು ಇಪ್ಪತ್ತೊಂದು ರೂಪಾಯಿಯ ಶಿಕ್ಷಕ ವೃತ್ತಿಯನ್ನು ಆಯ್ಕೆಮಾಡಿಕೊಳ್ಳುತ್ತಾರೆ. ಲೆಕ್ಕ ಬರದೇ ಇರುವ ಕಾರಣದಿಂದ ಈ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆಯೇ ಹೊರತು ಶಿಕ್ಷಕ ವೃತ್ತಿಯ ಕಾರಣದಿಂದಲ್ಲ. ಒಮ್ಮೆ ಮಗಳು ‘ಗಣಿತ ಕಲಿಸುವುದನ್ನು ಹೇಗೆ ನಿಭಾಯಿಸಿದೆ? ಗಣಿತ ನಿನಗೆ ಬರುವುದೇ ಇಲ್ಲವಲ್ಲ’ ಎಂದು ಕೇಳಿದ್ದಕ್ಕೆ ‘ವಿದ್ಯಾರ್ಥಿಗಳಿಗೆ ನಾನು, ನೀವು ಇಬ್ಬರೂ ಕೂಡಿಯೇ ಗಣಿತವನ್ನು ಬಗೆಹರಿಸಿಕೊಳ್ಳೋಣ..’ ಎಂದು ಹೇಳಿದೆ ಎಂದು ಗಹಗಹಿಸಿ ನಕ್ಕನು.
ತಮ್ಮ ತಂದೆ ಶಾಂತರಸರೊಂದಿಗಿನ ಒಡನಾಟದ ಕುರಿತು ಎಚ್.ಎಸ್. ಮುಕ್ತಾಯಕ್ಕ ಬರೆದ “ಅಪ್ಪ ನಾನು ಕಂಡಂತೆ” ಕೃತಿಯ ಕುರಿತು ಡಾ. ಎ. ರಘುರಾಂ ಬರಹ ನಿಮ್ಮ ಓದಿಗೆ
