ಏ.ಕೆ. ಕುಕ್ಕಿಲ ಪುಸ್ತಕಕ್ಕೆ ಪ್ರೊ. ಪುರುಷೋತ್ತಮ ಬಿಳಿಮಲೆ ಬರೆದ ಮುನ್ನುಡಿ
“ಇಂಥ ತೀವ್ರತರವಾದ ಕಷ್ಟದ ದಿನಗಳಲ್ಲಿ ಕೆಲವರು ತಮ್ಮ ಗುಪ್ತ ಕಾರ್ಯಸೂಚಿಗಳನ್ನು ಮುನ್ನೆಲೆಗೆ ತರಲು ಪ್ರಯತ್ನಿಸಿದ ಘಟನೆಗಳೂ ನಡೆದುವು. ಕೊರೋನಾ ಓಡಿಸಲು ಶಂಖ ಜಾಗಟೆಗಳನ್ನು ಬಳಸಲು ಸೂಚಿಸಿದಲ್ಲಿಂದ ಆರಂಭವಾದ ಅದು ದೆಹಲಿಯ ತಬ್ಲೀಗ್ ಜಮಾಅತ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರಿಂದ ಕೊರೋನಾ ಹರಡಿದೆ ಎಂದು ಹೇಳುತ್ತಾ ಮಹಾಮಾರಿಗೂ ಕೋಮುವಾದದ ಸೋಂಕು ತಗಲಿಸುವವರೆಗೆ ಮುಂದುವರೆಯಿತು. ಆದರೆ ಕೊರೋನಾಕ್ಕೆ ಹಿಂದು ಮುಸ್ಲಿಂ ವ್ಯತ್ಯಾಸ ಗೊತ್ತಾಗದೆ, ಎಲ್ಲರನ್ನೂ ಬಲಿ ತೆಗೆದುಕೊಳ್ಳಲಾರಂಭಿಸಿದ ಮೇಲೆ ಚಿತ್ರ ಸ್ವಲ್ಪ ಬದಲಾಯಿತು.”
ಏ.ಕೆ. ಕುಕ್ಕಿಲ ಬರೆದ ‘ವೈರಸ್ʼ ಕಾದಂಬರಿಗೆ ಪ್ರೊ. ಪುರುಷೋತ್ತಮ ಬಿಳಿಮಲೆ ಬರೆದ ಮುನ್ನುಡಿ