ಕೆ.ವಿ. ತಿರುಮಲೇಶ್ ಅನುವಾದಿಸಿದ ಜಾರ್ಜ್ ಲೂಯಿಸ್ ಬೋರ್ಹೆಸ್ ನ ಆತ್ಮಕಥಾ ರೂಪದ ಒಂದು ಪ್ರಬಂಧ
“ಈಗ ನಾನು ಇಂಗ್ಲಿಷ್ ಕವಿತೆಯನ್ನು ವಾಚಿಸುವಾಗ, ನನ್ನ ಅಮ್ಮ ಅನ್ನುತ್ತಾಳೆ ನನ್ನ ಧ್ವನಿ ತಂದೆಯ ಧ್ವನಿಯಂತೆಯೇ ಇರುತ್ತದೆ ಎಂದು. ತಂದೆಯೇ ನನಗೆ ನನ್ನ ಅರಿವಿಲ್ಲದೆಯೇ ತತ್ವಜ್ಞಾನದ ಮೊದಲ ಪಾಠಗಳನ್ನು ಕಲಿಸಿದುದು ಕೂಡ. ನಾನಿನ್ನೂ ಚಿಕ್ಕವನಿದ್ದಾಗ, ಝೀನೋನ ವಿರೋಧಾಭಾಸಗಳನ್ನು ಚದುರಂಗದ ಮಣೆಯ ಸಹಾಯದಿಂದ ತೋರಿಸಿಕೊಟ್ಟುದು – ಎಖಿಲಸ್ ಮತ್ತು ಆಮೆ, ಬಾಣದ ನಿಶ್ಚಲ ಹಾರಾಟ, ಚಲನೆಯ ಅಸಾಧ್ಯತೆ.”
Read More