ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಚಿಂತಾಮಣಿ ಕೊಡ್ಲೆಕೆರೆ ಕತೆ

ನನ್ನೊಳಗೆ ಉಷಾ ಜೀವಂತವಾಗಿಯೇ ಇದ್ದಳು. ಕೆಲವೊಮ್ಮೆ ಕನಸುಗಳಲ್ಲಿ ಬಂದು ತನ್ನ ದುಃಖದ ಕಥೆಗಳನ್ನು ಹೇಳಿಕೊಂಡಳು. ಇನ್ನು ಕೆಲವೊಮ್ಮೆ ಅವಳೊಬ್ಬ ಸದ್ಗೃಹಿಣಿಯಾಗಿ ತಲೆಗೆ ಮಿಂದು, ಕೂದಲು ಕಟ್ಟಿಕೊಂಡು, ಬಟ್ಟೆ ತುರುಬು ಹಾಕಿ, ಮಂಗಲ ಕುಂಕುಮವನ್ನಿಟ್ಟುಕೊಂಡು ನಂದಿನಿ ಹಾಲಿನ ಪ್ಯಾಕೆಟ್ ಮನೆಯೊಳಗೆ ತರುತ್ತಿರುವಂತೆ ಕನಸಾಗುತ್ತಿತ್ತು. ‘ಸದಾಶಿವಯ್ಯನವರ ಮಾತನ್ನು ಎಂದಿಗೂ ನಂಬಬೇಡ’ ಎಂದು ಒಂದು ಸಲ ಹೇಳಿ ಹೋದಳು. ‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ಚಿಂತಾಮಣಿ ಕೊಡ್ಲೆಕೆರೆ

Read More