Advertisement

Tag: ಡಾ. ಎಂ. ವೆಂಕಟಸ್ವಾಮಿ

ಕೆನ್ನೆಮೇಲೆ…. ಕೆಂಪು ಬಾಸುಂಡೆ: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಸ್ವಲ್ಪ ಹೊತ್ತಾದ ಮೇಲೆ ಏನೋ ಜ್ಞಾಪಕ ಬಂದಂತೆ ಎದೆಯ ಮೇಲಿನ ಶರ್ಟ್ ನೋಡಿಕೊಂಡ. ಶರ್ಟ್ ಮೇಲೆ ಎರಡು ತೊಟ್ಟ ರಕ್ತ ಬಿದ್ದಿರುವುದು ಕಾಣಿಸಿತು. ಈಗ ಏನು ಮಾಡುವುದು? ಮನೆಗೋದರೆ ಅಮ್ಮ ಇಲ್ಲ ಸುಮತಿ ನೋಡೇನೋಡುತ್ತಾರೆ. ಮೂಗು ಊದಿಕೊಂಡಿದೆಯೇನೊ ಎನ್ನುವ ಅನುಮಾನ ಬಂದು, ಗುಡಿಯ ಒಳಗಡೆ ಹೋಗಿ ಕನ್ನಡಿಯಲ್ಲಿ ನೋಡಿದರೆ ಹೇಗೆ ಎನ್ನುವ ಆಲೋಚನೆ ಬಂದರೂ ಗುಡಿಯಲ್ಲಿ ಸಾಕಷ್ಟು ಜನರಿದ್ದು ಹೋಗುವುದು ಸರಿಇಲ್ಲ ಎಂದು ಅಲ್ಲೇ ಕುಳಿತುಕೊಂಡ.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿ

Read More

ದುಬೈನ ಬುರ್ಜ್ ಖಲೀಫಾ ಎಂಬ ಸ್ಕೈಸ್ಕ್ರಾಪರ್: ಡಾ. ಎಂ. ವೆಂಕಟಸ್ವಾಮಿ ಬರಹ

ವಾಸ್ತುಶಿಲ್ಪ ಮತ್ತು ಎಂಜಿನಿಯರಿಂಗ್ ಪ್ರಕ್ರಿಯೆಯ ಒಂದು ನಿರ್ದಿಷ್ಟ ಹಂತದಲ್ಲಿ, ಮೂಲ ಎಮಾರ್ ಡೆವಲಪರ್‌ಗಳಿಗೆ ಹಣಕಾಸಿನ ಸಮಸ್ಯೆ ಎದುರಾಗಿ ಹೆಚ್ಚಿನ ಹಣದ ಅಗತ್ಯಬಿದ್ದಾಗ ಆಗಿನ ಯುಎಇ’ಯ ಆಡಳಿತಗಾರ ಶೇಖ್ ಖಲೀಫಾ ಅವರು ಹಣದ ನೆರವು ನೀಡಿದರು. ಆದ್ದರಿಂದ ಕಟ್ಟಡದ ಮೊದಲ `ಬುರ್ಜ್ ದುಬೈ’ ಹೆಸರನ್ನು `ಬುರ್ಜ್ ಖಲೀಫಾ’ ಎಂದು ಬದಲಾಯಿಸಲಾಯಿತು.
ದುಬೈ ಪ್ರವಾಸದ ಕುರಿತು ಡಾ. ಎಂ. ವೆಂಕಟಸ್ವಾಮಿ ಬರಹ ನಿಮ್ಮ ಓದಿಗೆ

Read More

ಕಪ್ಪು ನೆಲದಲ್ಲಿ ಹುಟ್ಟಿಕೊಂಡಿತು ಚಿನ್ನದ ನಗರ: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಎಲ್ಲರೂ ಅವರನ್ನೇ ನೋಡುತ್ತಿದ್ದರು. ಸೆಲ್ವಿಗೆ ಬೇರೆ ದಾರಿ ಕಾಣದೇ ಇನ್ನೊಂದು ಕೈಯಲ್ಲಿದ್ದ ಪುಸ್ತಕಗಳನ್ನು ನೆಲಕ್ಕೆ ಹಾಕಿ ಮಣಿ ಕೆನ್ನೆಗೆ ಜೋರಾಗಿ ಬಾರಿಸಿದಳು. ಬಾರಿಸಿದ ಏಟಿಗೆ ಆ ಮರದಲ್ಲಿದ್ದ ಹಕ್ಕಿಗಳೆಲ್ಲ ಹಾರಿಹೋದವು. ಸುತ್ತಲೂ ನಿಂತು ನೋಡುತ್ತಿದ್ದ ಹುಡುಗರಲ್ಲಿ ಕೆಲವರು ತಮ್ಮ ಕೆನ್ನೆಗಳನ್ನು ಮುಟ್ಟಿನೋಡಿಕೊಂಡು ಕಣ್ಣುಕಣ್ಣುಬಿಟ್ಟರು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಮೂರನೆಯ ಕಂತು ನಿಮ್ಮ ಓದಿಗೆ

Read More

ಮಣಿ…: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ನೂರು ವರ್ಷಗಳಿಂದ ಗಣಿ ಸುರಂಗಗಳಿಂದ ತೆಗೆದ ಕಲ್ಲುಗಳ ಅದಿರನ್ನು ಪುಡಿಮಾಡಿ ಚಿನ್ನ ತೆಗೆದುಕೊಂಡು ಬಿಸಾಕಿರುವ ಗಣಿ ತ್ಯಾಜ್ಯದ ಗುಡ್ಡ ಅದು. ನೆಲದ ಮೇಲೆ ಇಷ್ಟು ದೊಡ್ಡ ಗುಡ್ಡ ಬಿದ್ದಿದೆ ಎಂದರೆ ಎಷ್ಟು ಜನರು ಗಣಿ ಸುರಂಗಗಳಲ್ಲಿ ಕೆಲಸ ಮಾಡಿರಬೇಕು? ಎಷ್ಟು ಬೆವರು ಸುರಿದಿರಬೇಕು? ಎಷ್ಟು ಜನರು ಸತ್ತಿರಬೇಕು? ಈ ಗುಡ್ಡಗಳು ಬೀಳಲು ನಮ್ಮ ಪೂರ್ವಜರೆ ಕಾರಣ ಎಂದುಕೊಂಡ. ಮಣಿ ತಂದೆ ಸೆಲ್ವಮ್. ಸೆಲ್ವಮ್ ತಂದೆ ಕುಪ್ಪ ಹೇಳುತ್ತಿದ್ದ ಅನೇಕ ಗಣಿ ದುರಂತಗಳ ಕರಾಳ ಕಥೆಗಳು ಮಣಿ ತಲೆಯಲ್ಲಿ ಹಾವುಗಳಂತೆ ಹರಿದಾಡತೊಡಗಿದವು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಎರಡನೆಯ ಕಂತು ನಿಮ್ಮ ಓದಿಗೆ

Read More

ಡಾ. ಎಂ. ವೆಂಕಟಸ್ವಾಮಿ ಕಾದಂಬರಿ “ಒಂದು ಎಳೆ ಬಂಗಾರದ ಕಥೆ” ಶುರು…

ಕೆ.ಜಿ.ಎಫ್‌ ಎಂಬ ನೆಲದಲ್ಲಿ, ಚಿನ್ನದ ಅದಿರಿನ ಶೋಧನೆಯ ಸಮಯದಲ್ಲಿ ಅಲ್ಲಿನ ಜನರು ಹಾಗೂ ಕಾರ್ಮಿಕರು ಅನುಭವಿಸಿದ ತಲ್ಲಣಗಳ ಕುರಿತು ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” (ಕೆಜಿಎಫ್ ಗಣಿಗಳ ತವಕ ತಲ್ಲಣಗಳು) ಕಾದಂಬರಿ ಪ್ರತಿ ಶನಿವಾರಗಳಂದು‌ ನಿಮ್ಮ ಕೆಂಡಸಂಪಿಗೆಯಲ್ಲಿ ಪ್ರಕಟವಾಗಲಿದೆ.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ