ಸಮಾಧಾನದ ನಾಲ್ಕು ಮಾತು ಬಯಸುವ ರೋಗಿಗಳು
ರೋಗಿ ಹೇಳುವುದನ್ನು ಗಮನವಿಟ್ಟು ಕೇಳಿದಾಗ ಅವರ ಕಾಯಿಲೆಯ ಜೊತೆಗೆ ಮನಸ್ಸಿನ ತೊಂದರೆಗಳು ಇದ್ದರೆ ಅದು ನಮಗೆ ಗೋಚರಿಸುತ್ತದೆ. ಹಾಗಾಗಿ ನಾನಂತೂ ಹೆಚ್ಚಿನ ಸಮಯ ನನ್ನಲ್ಲಿಗೆ ಬರುವ ವ್ಯಕ್ತಿಗಳ ರೋಗ ಲಕ್ಷಣದ ಜೊತೆಯಲ್ಲಿ ಅವರು ಹೇಳುವ ಇನ್ನಿತರ ವಿಷಯದ ಬಗ್ಗೆ ಕೂಡಾ ಕಿವಿ ಕೊಡುತ್ತೇನೆ. ಕೆಲವೊಮ್ಮೆ ಇದು ತೊಂದರೆಯೂ ಕೂಡಾ ಆಗಬಹುದು. ಯಾಕೆಂದರೆ
ಬೇರೆ ರೋಗಿಗಳು ಕಾಯುತ್ತಾ ಇದ್ದಾಗಲೂ ಹಲವರು ಅವರ ಕಷ್ಟ-ಸುಖಗಳನ್ನು ಹೇಳುತ್ತಾ ಹೋಗುತ್ತಿರುತ್ತಾರೆ. ನನ್ನ ಊಟದ ಸಮಯ ಆಗಿ, ಹೊಟ್ಟೆ ಹಸಿಯುತ್ತಾ ಇದ್ದರೂ ಅವರಿಗೆ ಪರಿವೆ ಇರುವುದಿಲ್ಲ. ಡಾ.ಕೆ.ಬಿ. ಸೂರ್ಯಕುಮಾರ್ ಬರಹ