Advertisement

Tag: ಡಾ. ಬಿ. ಜನಾರ್ದನ ಭಟ್

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಾ. ಬಿ. ಜನಾರ್ದನ ಭಟ್ ಕಥೆ

ಈ ದೃಶ್ಯಕ್ಕೆ ಅನತಿ ದೂರದಲ್ಲಿ ಮತ್ತೊಂದು ಹೃದಯವಿದ್ರಾವಕ ಘಟನೆ ನಡೆಯುತ್ತಿದೆ. ಲಚ್ಚಣ್ಣನಿಗೆ ಎರಡು ದಶಕಗಳ ಕಾಲ ಈ ಊರಿನಲ್ಲಿ ಅನ್ನದ ವ್ಯಾಪ್ತಿ ತೋರಿಸಿದ್ದ ದೇವಿ ಪ್ರಸಾದ ಹೋಟೆಲಿನ ವಸ್ತ್ರಾಪಹರಣ ಮಾಡುತ್ತಿರುವಂತೆ ನಾಲ್ವರು ಕೆಲಸಗಾರರು ಅದರ ಮಾಡಿನ ಹಂಚುಗಳನ್ನು ಕಳಚಿ ಇಳಿಸುತ್ತಿದ್ದಾರೆ. ಆ ಹೋಟೆಲನ್ನು ಮೂರು ದಶಕಗಳ ಕಾಲ ನಡೆಸಿದ್ದ ಗೋಪಾಲಕೃಷ್ಣ ಮಂಜಿತ್ತಾಯರು ಕೊನೆಯುಸಿರೆಳೆದ ತಾಯಿಯ ಶವದೆದುರು ಶತಪಥ ಹಾಕುವ ಆಘಾತಗೊಂಡ ಮಗನಂತೆ ಅತ್ತಿಂದಿತ್ತ ಹೋಗುತ್ತಿದ್ದಾರೆ.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಾ. ಬಿ. ಜನಾರ್ದನ ಭಟ್‌ ಬರೆದ ಕತೆ “ವಿದಾಯ” ನಿಮ್ಮ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಾ. ಬಿ. ಜನಾರ್ದನ ಭಟ್‌ ಬರೆದ ಕತೆ

ಮಕ್ಕಳೆಲ್ಲ ಬಾಕಿಮಾರು ಗದ್ದೆಯತ್ತ ನಡೆದುಕೊಂಡು ಹೋದಾಗ ಅವಿನಾಶನಿಗೆ ಅಯ್ಯಪ್ಪ ಎನಿಸಿತು. ಮಕ್ಕಳು ಅಂಗಳದಲ್ಲಿ ಕ್ರಿಕೆಟ್ ಆಡಲು ಶುರು ಮಾಡಿದರೆ ತಾನು ಅಲ್ಲಿಂದ ಏಳಬೇಕಾಗುತ್ತದೆಂಬ ಆತಂಕದಲ್ಲಿ ಅದುವರೆಗೂ ಅವನಿದ್ದ. ಮಕ್ಕಳು ಆಡಿದರೆ ಆಡಬಾರದೆಂದು ಹೇಳಲು ಚಂದ್ರಕ್ಕನಿಗೂ ಧೈರ್ಯವಿಲ್ಲ. ಅಂಗಳದಲ್ಲಿ ಕ್ರಿಕೆಟ್ ಆಡಿದರೆ ಹಟ್ಟಿ ಕೊಟ್ಟಿಗೆಯ ಹಂಚುಗಳು, ದಂಡೆಯಲ್ಲಿಟ್ಟ ಚೊಂಬು, ಕೊಡಪಾನಗಳು, ಪ್ಲಾಸ್ಟಿಕ್ ಬಾಲ್ದಿಗಳು ಚೆಂಡಿನ ಪೆಟ್ಟು ತಿಂದು ಅಲ್ಲೋಲಕಲ್ಲೋಲ ಆಗುತ್ತದೆ. ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಾ. ಬಿ. ಜನಾರ್ದನ ಭಟ್ ಬರೆದ ಕಥೆ

Read More

ನವ್ಯೋತ್ತರದ ಮುಖ್ಯ ಕವಿ ರಾಮಚಂದ್ರದೇವ

ರಾಮಚಂದ್ರ ದೇವರೂ ‘ಮೂಗೇಲ’ ಕತೆಯಲ್ಲಿ ಮೂಗೇಲನ ಅಪ್ಪನಂಥವರು ಮನುಷ್ಯ ಸಂಬಂಧಗಳಿಗಿಂತ ಆರ್ಥಿಕ ಲಾಭಕ್ಕೆ ಪ್ರಾಮುಖ್ಯ ನೀಡುವುದನ್ನು ತೋರಿಸಲು ಮೂಗೇಲನ ಮೂಗನ್ನು ಅಸಂಗತವಾಗಿ ಹನುಮಂತನ ಬಾಲದಂತೆ ಬೆಳೆಸಿದ್ದಾರೆ. ಈ ಕತೆ ಮೇಲ್ನೋಟಕ್ಕೆ ಭಾರತೀಯ ಅಥವಾ ಕನ್ನಡದ ವಿಶಿಷ್ಟ ಸನ್ನಿವೇಶವನ್ನು ಸೂಚಿಸುವಂಥದ್ದಲ್ಲ. – ‘ಕರಾವಳಿಯ ಕವಿರಾಜಮಾರ್ಗ’ ಸರಣಿಯಲ್ಲಿ ನವ್ಯೋತ್ತರದ ಮುಖ್ಯ ಕವಿ ರಾಮಚಂದ್ರದೇವ
ಅವರ ಕುರಿತು ಬರೆದಿದ್ದಾರೆ ಡಾ.ಬಿ. ಜನಾರ್ದನ ಭಟ್.

Read More

ವ್ಯಂಗ್ಯ ದರ್ಶನದ ಕವಿ ಪಾ.ವೆಂ. ಆಚಾರ್ಯ

ಪಾವೆಂ ಅವರ ನೆಚ್ಚಿನ ಸಾಹಿತ್ಯ ಪ್ರಕಾರ ಕಾವ್ಯ. ಪಾ. ವೆಂ. ಅವರು ನವೋದಯ ಪಂಥದಿಂದ ನವ್ಯಕ್ಕೆ ಬಂದ ಒಬ್ಬ ಪ್ರಮುಖ ಕವಿ. ಅವರ ಮೊದಲನೆಯ ಸಂಕಲನ `ನವನೀರವ’ ದಲ್ಲಿ ನವೋದಯ ಸಂವೇದನೆಯ ಕವಿತೆಗಳು ಮತ್ತು ಸಮಾಜದ ವಾಸ್ತವಗಳನ್ನು ಹೊಸ ಬಗೆಯಲ್ಲಿ ಹಾಸ್ಯ ದೃಷ್ಟಿಕೋನದಿಂದ ನೋಡಲಾರಂಭಿಸಿದ ಕವಿತೆಗಳಿವೆ. ಸಂಖ್ಯೆಯ ದೃಷ್ಟಿಯಿಂದ ಅವರು ಬರೆದ ಕವನಗಳು ಹೆಚ್ಚಿಲ್ಲ. ನವೋದಯ ಮತ್ತು ನವ್ಯ ಎರಡೂ ಬಗೆಯ ಕಾವ್ಯ ಪ್ರಕಾರಗಳಲ್ಲೂ ಅವರು ಕವನಗಳನ್ನು ರಚಿಸಿದ್ದಾರೆ.

Read More

ನವೋದಯ ದೀಪಕ್ಕೆ ಎಣ್ಣೆ ಹೊಯ್ದ ಕವಿ

ಸೇಡಿಯಾಪು ಕೃಷ್ಣಭಟ್ಟರಿಗೆ ಮಂಗಳೂರಿನಲ್ಲಿ ಪಂಡಿತ ಮುಳಿಯ ತಿಮ್ಮಪ್ಪಯ್ಯನವರ ಮಾರ್ಗದರ್ಶನ ಮತ್ತು ತರುಣ ಕವಿ ಕಡೆಂಗೊಂಡ್ಲು ಶಂಕರಭಟ್ಟರ ಗೆಳೆತನದ ಲಾಭವಾಯಿತು. ಅವರಿಬ್ಬರಿಂದ ಪ್ರೇರಣೆ ಪಡೆದು, ಮದ್ದಿನಂಗಡಿಯಲ್ಲಿ ಕುಳಿತೇ ಕನ್ನಡ – ಸಂಸ್ಕೃತ ಭಾಷೆಗಳನ್ನು ಖಾಸಗಿಯಾಗಿ ಅಧ್ಯಯನ ನಡೆಸಿ, ಮದರಾಸು ಸರ್ಕಾರ ನಡೆಸುತ್ತಿದ್ದ ‘ವಿದ್ವಾನ್’ ಪರೀಕ್ಷೆಯಲ್ಲಿ ಪಾಸಾದರು. ಆ ಪದವಿಯ ಬಲದಿಂದ 1929 ರಲ್ಲಿ ಸೈಂಟ್ ಅಲೋಷಿಯಸ್ ಹೈಸ್ಕೂಲಿನಲ್ಲಿ ಕನ್ನಡ ಪಂಡಿತರಾಗಿ ಸೇರಿಕೊಂಡು ಸುಮಾರು ಇಪ್ಪತ್ತು ವರ್ಷಗಳ ಕಾಲ ಕೆಲಸ ಮಾಡಿದರು.

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಅಂಪೈರ್‌ ಮೇಡಂ: ಕೆ. ಸತ್ಯನಾರಾಯಣ ಕಾದಂಬರಿಯ ಪುಟಗಳು…

ಹುಡುಗನ ತಮ್ಮನಿಗೆ ಪೋಲಿಯೋದಿಂದ ಕಾಲು ತಿರುಚಿಕೊಂಡು ಪೇಟೆ ಬೀದಿಯ ಒಳ ಓಣಿಯ ಬಲಗಡೆ ಕ್ರಾಸಿನಲ್ಲಿ ಒಂದು ಕಾಂಡಿಮೆಂಟ್‌ ಸ್ಟೋರ್ಸ್‌ ಹಾಕಿಕೊಟ್ಟಿದ್ದು ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಶ್ರೀದೇವಿಯ ಗಂಡನಾಗುವವನು…

Read More

ಬರಹ ಭಂಡಾರ