ಸಹಜಪ್ರಕೃತಿ ದರ್ಶನದ ಕವಿತೆಗಳು: ಡಾ. ಬಿ. ಜನಾರ್ದನ ಭಟ್ ಬರಹ
ನಮ್ಮ ಕಾಲದ ದೊಡ್ಡ ದೊಡ್ಡ ಕವಿಗಳೆಲ್ಲ ಹೀಗೆ ನೇರವಾಗಿ ಧರ್ಮಬೋಧನೆ ಅಲ್ಲದಿದ್ದರೂ ಒಂದಲ್ಲ ಒಂದು ಜೀವನ ದರ್ಶನವನ್ನು – ಜೀವನ ಧರ್ಮವನ್ನು – ತಮ್ಮ ಕಾವ್ಯದ ಮೂಲಕ ಜನರಿಗೆ ನೀಡಿದವರೇ ಆಗಿದ್ದಾರೆ. ಮೊಗಸಾಲೆಯವರ ಕಾವ್ಯ ಯಾನವನ್ನೇ ಗಮನಿಸಿದರೆ ಅವರು ಪ್ರಾರಂಭದಲ್ಲಿ ನವ್ಯ ಸಾಹಿತ್ಯದ ಪ್ರೇರಣೆಯಿಂದ ಬರೆಯುತ್ತಿದ್ದರು. ನವ್ಯ ಸಾಹಿತ್ಯಕ್ಕೆ ಅಸ್ತಿತ್ವವಾದದ ಹಿನ್ನೆಲೆ ಇತ್ತು. ಆಮೇಲೆ ಮೊಗಸಾಲೆಯವರನ್ನು ಅಲ್ಲಮಪ್ರಭು ಪ್ರಭಾವಿಸಿದ. ಅಲ್ಲಮನ ಹೊಸ ರೂಪಕಗಳು, ಹೊಸತನವುಳ್ಳ ವಿಚಾರಗಳು ಅವರನ್ನು ಸೆಳೆದವು.
ಡಾ. ನಾ ಮೊಗಸಾಲೆಯವರ ಹೊಸ ಕವನ ಸಂಕಲನ “ಹೇ ರಾಮ್” ಕುರಿತು ಡಾ. ಜನಾರ್ಧನ ಭಟ್ ಬರಹ ನಿಮ್ಮ ಓದಿಗೆ
