ಸೌದಿಯ ಹೊಸ ಮೆಗಾ ಪ್ರಾಜೆಕ್ಟ್!: ದರ್ಶನ್ ಜಯಣ್ಣ ಸರಣಿ
ಆತ “ದುಬೈ ನಲ್ಲಿ ಏನಿದೆ? ಒಂದು ಐದಾರು ಶಾಪಿಂಗ್ ಮಾಲ್ಗಳು, ಎರಡು ಮುಖ್ಯ ರಸ್ತೆ, ಎರಡು ಹೋಟೆಲ್ಲು ಮತ್ತು ಬಹು ಮಹಡಿ ಕಟ್ಟಡ ಅಷ್ಟೇ ತಾನೇ?! ನಮ್ಮದು ಅದಕ್ಕಿಂತ ದೊಡ್ಡ ಯೋಜನೆ ಮತ್ತು ಹತ್ತು ಪಟ್ಟು ಹಿರಿದಾದದ್ದು” ಎಂದುಬಿಟ್ಟ. ಪ್ರಶ್ನೆ ಕೇಳುತ್ತಿದ್ದವರು ಕಕ್ಕಾ ಬಿಕ್ಕಿ. ಈ ಉತ್ತರ ಕೆಲವು egoistic ಸೌದಿಗಳಿಗೆ ಅಪ್ಯಾಯವಾಗಬಹುದು; ಆದರೆ ಒಂದು ವಿಷಯ ಗಮನದಲ್ಲಿಟ್ಟುಕೊಳ್ಳಬೇಕು. ದುಬೈ ನಗರ ಅಥವಾ ಯುಎಇ ದೇಶ ಈ ಎಲ್ಲವನ್ನೂ 50 ವರ್ಷ ಮುಂಚಿತವಾಗಿ ಮಾಡಿ ಗೆದ್ದಿದೆ. ಆಗಲೇ ಅವರ ದೃಷ್ಟಿಕೋನ ಹಾಗಿತ್ತು ಎಂಬುದನ್ನು ಯಾರೂ ಮರೆಯಬಾರದು.
ದರ್ಶನ್ ಜಯಣ್ಣ ಬರೆಯುವ “ಸೌದಿ ಡೇಟ್ಸ್” ಸರಣಿಯ ಐದನೆಯ ಬರಹ
