‘ಕಂಡವರಿಗಷ್ಟೇ’ ಪುಸ್ತಕಕ್ಕೆ ಡಾ. ಗೀತಾ ವಸಂತ ಬರೆದ ಸಂಪಾದಕೀಯ ನುಡಿ
“ಮನುಷ್ಯನ ತರ್ಕದಾಚೆಗೆ ಸೃಷ್ಟಿಯ ಮಿಡಿತವಿರುತ್ತದೆ. “ಅನುಭವವು ಜಗತ್ತಿನ ಕಾರಣಗಳನ್ನು ಹುಡುಕುತ್ತಿದೆ. ಅನುಭಾವವು ಜಗತ್ತಿನ ಕರ್ತೃವನ್ನೇ ಹುಡುಕುತ್ತಿದೆ. ಅನುಭವಕ್ಕೆ ತಿಳಿಯಾದ, ಹದವಾದ, ಸ್ಥಿರವಾದ ಎಚ್ಚರವೇ ಬೇಕು; ಅದಷ್ಟೇ ಸಾಕು. ಅನುಭಾವಕ್ಕೆ ಇದೇ ಜಾತಿಯ ಎಚ್ಚರವೇ ಬೇಕು. ಆದರೆ ಅದು ಕನಸಿನಾಚೆಯ ನಿದ್ದೆಯಲ್ಲ. ನಿದ್ದೆಯಾಚೆಗಿನೆಚ್ಚರ. ನಿದ್ದೆಯಾಚೆಗೊಂದು ಎಚ್ಚರದ ಹಿಮಾಲಯವಿದೆ. ಅದರ ಎತ್ತರದಿಂದ ಬಹಳ ವಿಸ್ತಾರವಾದ ದೃಶ್ಯವು ಗೋಚರವಾಗುವುದು. ಈ ಎತ್ತರದ ಮೇಲಿನ ಎಚ್ಚರಕ್ಕೆ ‘ಸಮಾಧಿ’ ಎಂದು ಹೇಳುವರು.”
Read More