ಫ್ಯದೊರ್ ದಾಸ್ತಯೇವ್ಸ್ಕಿಬರೆದ ʼಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ನಾಲ್ಕನೆಯ ಅಧ್ಯಾಯ
“ಹೀಗೆ ಪ್ರಶ್ನೆ ಹಾಕಿಕೊಂಡು ಹಿಂಸೆಮಾಡಿಕೊಳ್ಳುತ್ತಾ ಇದ್ದ. ಆಗುವ ಹಿಂಸೆಯಲ್ಲಿ ಒಂದು ಥರ ಸಂತೋಷವನ್ನೂ ಪಡುತ್ತಿದ್ದ. ಈ ಯಾವ ಪ್ರಶ್ನೆಗಳೂ ಹೊಸವಲ್ಲ. ಆ ತಕ್ಷಣಕ್ಕೆ ಹುಟ್ಟಿದವೂ ಅಲ್ಲ. ಈ ಪ್ರಶ್ನೆಗಳೆಲ್ಲ ಹಳೆಯ ನೋವಿನ ಹಾಗೆ ಹಿಂಸೆ ಕೊಟ್ಟು ಕೊಟ್ಟು ಮನಸ್ಸನ್ನು ನವೆಸಿಬಿಟ್ಟಿದ್ದವು. ಈ ನೋವು ಬಹಳ ಬಹಳ ಹಿಂದೆಯೇ ಹುಟ್ಟಿತ್ತು, ಬೆಳೆದಿತ್ತು, ಇತ್ತಿಚೆಗಷ್ಟೇ ಮಾಗಿತ್ತು, ದಟ್ಟೈಸಿತ್ತು..”
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ