ಪ್ರೀತಿ ಎಂಬ ಸಿಹಿಗುಳಿಗೆ ಕೊಡುವ ಚೇತನ
ಅವರು ಯಾವತ್ತು ಎಲ್ಲಿಗೇ ಬಂದರೂ ಇದುವರೆಗೆ ಅವರ ಮ್ಲಾನವಾದ ಮುಖವನ್ನು ನಾನು ನೋಡೇ ಇಲ್ಲ. ಯಾವಾಗಲೂ ನಗ್ತಾ ನಗ್ತಾ ಇರ್ತಾರೆ. ಅವರು ಮತ್ತು ಅವರ ಗೆಳತಿ ಸಂಧ್ಯಾ ರಾಣಿ ಯಾವುದೇ ಸಮಾರಂಭಕ್ಕೆ ಬಂದರೂ ಅವರು ಮುಖ ಕಳೆಗುಂದಿದ್ದನ್ನು ನಾನು ನೋಡೇ ಇಲ್ಲ. ಅವರು ಬಂದರೆ ಆ ವಾತಾವರಣವೆಲ್ಲ ಲೈಟ್ ಹೊತ್ತಿಸಿದಂತೆ… ಒಂದು ನೂರು ಕ್ಯಾಂಡಲ್ ಬಲ್ಬ್ ಹೊತ್ತಿಸಿದ ಹಾಗೆ! ಅವರನ್ನು ನೋಡ್ತಿದ್ದರೆ ನಮಗೂ ಆ ಉಲ್ಲಾಸ ವರ್ಗವಾಗಿ ಬಿಡತ್ತೆ. ಅದೇ ರೀತಿಯ ಅನುಭವ ಅವರ ಸಾಸಿವೆ ತಂದವಳು ಪುಸ್ತಕ ಓದುವಾಗಲೂ ಆಗಿತ್ತು.
ಬಿ.ವಿ. ಭಾರತಿ ಅವರ ‘ಎಲ್ಲಿಂದಲೋ ಬಂದವರು’ ಕೃತಿಗೆ ಟಿ.ಎನ್. ಸೀತಾರಾಮ್ ಬರೆದ ಮುನ್ನುಡಿ