Advertisement

Tag: ಮಿನಿಕಾಯ್

ಇಬ್ನ್ ಬತೂತನ ಸ್ತ್ರೀರಾಜ್ಯ

“ಸದಾ ಪ್ರವಾಸಿಗನಾಗಿ ಲೋಕ ಸುತ್ತುತ್ತಿದ್ದ ಇಬ್ನ್ ಬತೂತನಿಗೆ ಮಡದಿಯರ ಅವಶ್ಯಕತೆ ಇತ್ತು. ಆದರೆ ಅವರನ್ನು ಕಟ್ಟಿಕೊಂಡು ಓಡಾಡುವ ತಾಪತ್ರಯಗಳು ಬೇಕಾಗಿರಲಿಲ್ಲ. ಹಾಗಾಗಿ ಆತ ಈ ದ್ವೀಪದ ಇಬ್ಬರು ಸ್ತ್ರೀಯರನ್ನು ವರಿಸುತ್ತಾನೆ. ಇಬ್ಬರೂ ದ್ವೀಪದ ಎರಡು ಪತಿಷ್ಠಿತ ಕುಟುಂಬಗಳಿಗೆ ಸೇರಿದ ಸ್ತ್ರೀಯರು. ಹಾಗಾಗಿ ಆತನಿಗೆ ಈ ದ್ವೀಪದ ಎರಡೂ ಪತಿಷ್ಠಿತ ಕುಟುಂಬಗಳ ಬೆಂಬಲ ದೊರೆತು ಆ ದ್ವೀಪವನ್ನು ಆಳುತ್ತಿದ್ದ ದೊರೆಗಿಂತ ಬಲಶಾಲಿಯಾಗುತ್ತಾನೆ.”
ಅಬ್ದುಲ್ ರಶೀದ್ ಬರೆಯುವ ಮಿನಿಕಾಯ್ ಫೋಟೋ ಕಥಾನಕದ ಐದನೆಯ ಕಂತು

Read More

ವೃಂಗಿಲಿಯ ಹಿನ್ನೆಲೆಯಲ್ಲಿ ಛೆ..ಛೆ.. ಸೂರ್ಯಾಸ್ತ

“ಅವರ ಹತಾಶೆಯ ಮಾತುಗಳು ಅಲ್ಲೇ ಕುಳಿತಿರುವ ನನಗೆ ಅರಿವಾಗುವುದಿಲ್ಲ ಎಂಬುದು ಅವರ ನಂಬಿಕೆ. ಅವರ ನಂಬಿಕೆಗೆ ಇಂಬು ಕೊಡುವ ಹಾಗೆ ನಾನು ಅವರ ಜೊತೆ ಕನ್ನಡದ ಛಾಯೆ ಇರುವ ಇಂಗ್ಲಿಷಿನಲ್ಲೇ ಮಾತುಕತೆ ಮುಗಿಸಿ ಈಗ ಏನೂ ಮಾತಾಡದೆ ಫೋಟೋ ಕ್ಲಿಕ್ಕಿಸುವುದರಲ್ಲಿ ಮಗ್ನನಾಗಿರುವಂತೆ ನಟಿಸುತ್ತಿದ್ದೇನೆ. ಆದರೆ ನನ್ನ ಕಿವಿ ಅವರ ಮಾತುಗಳನ್ನು ಸಂಪೂರ್ಣವಾಗಿ ಕೇಳಿಸಿಕೊಳ್ಳುತ್ತಿದೆ.”
ಅಬ್ದುಲ್ ರಶೀದ್ ಬರೆಯುವ ಮಿನಿಕಾಯ್ ಫೋಟೋ ಕಥಾನಕದ ನಾಲ್ಕನೆಯ ಕಂತು

Read More

ಹಾಡುಗಾರ ಇಬ್ರಾಹೀಮನ ಅತಿಶಯ ಜೀವನ ಪ್ರಸಂಗಗಳು

“ಕಥೆಯೊಂದನ್ನು ನಡೆದ ಹಾಗೆ ಕಾಲಾನುಕ್ರಮಣದಲ್ಲಿ ಹೇಳುತ್ತಾ ಹೋಗುವುದು ಒಂದು ಬಗೆ. ಆದರೆ ಹೀಗೆ ಹೇಳುತ್ತಾ ಹೋಗುವುದರಿಂದ ಹೇಳುವವನಲ್ಲೂ ಕೇಳುವವನಲ್ಲೂ ಒಂದು ರೀತಿಯ ಅಸಹಜವಾದ ತಾಧ್ಯಾತ್ಮತೆಯೂ, ಬೋರು ಹೊಡೆಸುವ ಏಕತಾನತೆಯೂ ಉಂಟಾಗುತ್ತದೆ. ಆದರೆ ನನಗೆ ಗೊತ್ತಿರುವ ಹಾಗೆ ಲೋಕ ನಡೆಯುವುದೇ ಅನೀರೀಕ್ಷಿತ ಸಂಭವಗಳಿಂದಾಗಿ.”
ಅಬ್ದುಲ್ ರಶೀದ್ ಬರೆಯುವ ಮಿನಿಕಾಯ್ ಫೋಟೋ ಕಥಾನಕದ ಮೂರನೆಯ ಕಂತು.

Read More

ಪುಟ್ಟದೊಂದು ಹೂಹಕ್ಕಿಯ ಹುಡುಕುವುದು ಇಲ್ಲಿಗೆ ಹೊರಟ ಕಾರಣವಾಗಿತ್ತು

ಈ ಹಕ್ಕಿಯ ಹೆಸರು ‘ಫೂಕುಂಞಿ’ . ಅಂದರೆ ಹೂಮರಿ ಎಂದು ಅರ್ಥ. ಅಷ್ಟು ಹಗುರ.ಅಷ್ಟು ಸೂಕ್ಷ್ಮ, ಮತ್ತು ಅಷ್ಟೊಂದು ಸುಂದರ. ಒಂದು ಕಾಲದಲ್ಲಿ ಈ ದ್ವೀಪದ ಮನೆಮನೆಗಳ ಎದುರಿಗಿರುವ ಬುಗುರಿ ಮರದ ಎಲೆಗಳಿಗೆ ಜೋತಾಡುತ್ತ, ಎಲೆ ಯಾವುದು ಹಕ್ಕಿ ಯಾವುದು ಎಂದು ಗೊತ್ತಾಗದ ಹಾಗೆ ಉಲಿಯುತ್ತಿದ್ದ ಈ ಹೂ ಹಕ್ಕಿಗಳು ಇವರ ಹಾಡುಗಳಲ್ಲಿ ಮತ್ತು ಕತೆಗಳಲ್ಲಿ ದಂಡಿಯಾಗಿ ಸಿಗುತ್ತವೆ. ಅವುಗಳು ಈಗ ಇಲ್ಲದಿರುವುದಕ್ಕೆ…”

Read More

ಮಿನಿಕಾಯ್ ಎಂಬ ಮಾಯಾದ್ವೀಪ: ಅಬ್ದುಲ್ ರಶೀದ್ ಬರೆಯುವ ಫೋಟೋ ಕಥಾನಕ

ನಾನು ಹೊರಟಿದ್ದುದು ಒಬ್ಬ ನೆಂಟನಂತೆ. ಒಂದು ಔತಣಕೂಟಕ್ಕೆ. ಆ ಔತಣಕೂಟವೂ ವಿಶೇಷವಾಗಿತ್ತು. ಆ ಹಳ್ಳಿ ಈ ಸಲದ ದೋಣಿ ಸ್ಪರ್ದೆಯಲ್ಲಿ ಮೊದಲ ಬಹುಮಾನ ಪಡೆದಿತ್ತು. ನಾನಾದರೋ ಹದಿನೆಂಟು ಗಂಟೆಗಳ ಕಾಲ ಕಡಲಲ್ಲಿ ಚಲಿಸುವ ಹಡಗೊಂದನ್ನು ಹತ್ತಿ, ಸೈಕಲನ್ನೂ ಹತ್ತಿಸಿ ಹೊರಟು ನಿಂತಿದ್ದೆ. ಜೊತೆಗೆ ಕಳೆದ ಕಾಲು ಶತಮಾನದಿಂದ ನನ್ನ ಜೀವನದ ವ್ಯಸನಗಳಾಗಿ ಹೋಗಿರುವ ಕ್ಯಾಮರಾ ಮತ್ತು ಮಸೂರಗಳು.

Read More
  • 1
  • 2

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಅಂಪೈರ್‌ ಮೇಡಂ: ಕೆ. ಸತ್ಯನಾರಾಯಣ ಕಾದಂಬರಿಯ ಪುಟಗಳು…

ಹುಡುಗನ ತಮ್ಮನಿಗೆ ಪೋಲಿಯೋದಿಂದ ಕಾಲು ತಿರುಚಿಕೊಂಡು ಪೇಟೆ ಬೀದಿಯ ಒಳ ಓಣಿಯ ಬಲಗಡೆ ಕ್ರಾಸಿನಲ್ಲಿ ಒಂದು ಕಾಂಡಿಮೆಂಟ್‌ ಸ್ಟೋರ್ಸ್‌ ಹಾಕಿಕೊಟ್ಟಿದ್ದು ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಶ್ರೀದೇವಿಯ ಗಂಡನಾಗುವವನು…

Read More

ಬರಹ ಭಂಡಾರ