ಮೊಹರಂ ಎಂದರೆ ನಮ್ಮೂರಲ್ಲಿ “ಬಾಬಯ್ಯನ ಹಬ್ಬ”: ಸುಮಾ ಸತೀಶ್ ಬರಹ
ಜಾತಿ ಧರ್ಮಗಳ ಬೇಲಿ ಕಳಚಿ, ಅಪ್ಪಟ ಮನುಷ್ಯತ್ವ ತೋರುವ ಮುಗ್ಧ ಮನಗಳ ನಂಬಿಕೆಯಿದು. ಇದು ಮುಸಲ್ಮಾನರ ಹಬ್ಬ. ಆದರೆ ಇಲ್ಲಿ ಅದನ್ನು ಆಚರಿಸುವವರು ಹಿಂದೂಗಳು. ಇದು ಊರ ಮಂದಿಗೆ ಮನರಂಜನೆಯೂ ಹೌದು ಭಕ್ತಿ ಸಮರ್ಪಣೆಯೂ ಹೌದು. ಎರಡೂ ಮಿಳಿತಗೊಂಡ ವಿಶಿಷ್ಟ ಪದ್ಧತಿಯಿದು. ಊರ ಜನರೆಲ್ಲಾ ಒಂದು ವಾರ ಒಂದೆಡೆ ಸೇರಿ ನಲಿಯಲು ಅವಕಾಶ ಕಲ್ಪಿಸುತ್ತದೆ ಬಾಬಯ್ಯನ ಹಬ್ಬ. ಪರಿಷೆಯ ಪರಿಸರವೊಂದು ಪಸರಿಸುತ್ತದೆ.
ಮೊಹರಂ ಹಬ್ಬದ ಆಚರಣೆಯ ಕುರಿತು ಸುಮಾ ಸತೀಶ್ ಬರಹ