Advertisement

Tag: ರೂಪಶ್ರೀ ಕಲ್ಲಿಗನೂರ್

ಕನ್ನಡದ ಹೆಣ್ಮನಗಳ ಕನ್ನಡಾಭಿಮಾನ: ರೂಪಶ್ರೀ ಕಲ್ಲಿಗನೂರ್ ಬರಹ

ಕನ್ನಡ ನಾಡಿನ ಮಕ್ಕಳು ಇಡೀ ಜಗತ್ತಿನ ತುಂಬಾ ಓಡಾಡಿದರೂ, ಮನೆಗೆ ಬಂದು ಅಮ್ಮನೊಟ್ಟಿಗೆ ಕನ್ನಡ ಮಾತನಾಡಿದಾಗಲೇ ಅವರಿಗೂ ಸಮಾಧಾನ. ಯಾಕೆಂದರೆ ಅವರೆಲ್ಲ ಮೊದಲು ಕಲಿತ ಪದವೇ “ಅಮ್ಮ” ಅಲ್ಲವೇ! ಜಗತ್ತಿನ, ಬೆಳವಣಿಗೆಯೆಂಬ ಸಂಕೀರ್ಣತೆಯ ಸಂದಿಗ್ಧತೆಯಲ್ಲಿ ಕನ್ನಡ ಭಾಷೆ ಚೂರು ನಲುಗುತ್ತಿದೆ ಎನ್ನಿಸುತ್ತಿದೆಯಾದರೂ ದೊಡ್ಡಮಟ್ಟದಲ್ಲಿಯಲ್ಲವಾದರೂ, ತಮಗೆ ಸಿಕ್ಕ ಅವಕಾಶಗಳಲ್ಲಿ ಕನ್ನಡದ ಬೆಳವಣಿಗೆಗೆ, ಉಳಿವಿಗೆ ಶ್ರಮಿಸುವ ಹಲವು ಶ್ರೀಸಾಮಾನ್ಯರಿದ್ದಾರೆ. ಕರ್ನಾಟಕದಲ್ಲಿ ಅಲ್ಲದೇ ಬೇರೆಡೆಗಳಲ್ಲಿ ನೆಲೆಸಿರುವ, ಕನ್ನಡದ ಅಸ್ಮಿತೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಹಲವು ಕನ್ನಡದ ಹೆಣ್ಮಗಳ ಮಾತುಗಳು…

Read More

ನಮ್ಮನೆಯ ದೀಪಾವಳಿ…: ರೂಪಶ್ರೀ ಕಲ್ಲಿಗನೂರ್‌ ಬರಹ

ಕನಿಷ್ಟ ಎರಡು ವಾರಗಳ ಹಿಂದಿನಿಂದ ಕೆಲಸ ಆರಂಭಿಸಿರುತ್ತಿದ್ದ ಅಮ್ಮ, ದೀಪಾವಳಿ ಬಟ್ಟೆ ಶಾಪಿಂಗಿಗೆ ಬಂದಿದ್ದು ಕಡಿಮೆಯೇ. ಅಕ್ಕ-ನಾನು ಆಯ್ದ ಬಟ್ಟೆಗಳು ಅವರಿಗೆ ಯಾವಾಗಲೂ ಖುಷಿಯೇ. ಹಾಗಾಗಿ ನೀವೇ ಆರಿಸಿತಂದುಬಿಡಿ ಅಂತ ನಮ್ಮೆಲ್ಲರನ್ನೂ ಕಳಿಸಿಬಿಡುತ್ತಿದ್ದರು. ಹಾಗಾಗಿ ನಮ್ಮದೆಲ್ಲ ಬಟ್ಟೆ ಕೊಂಡಾದ ಮೇಲೆ, ಅಮ್ಮನಿಗೆಂದು ಚಂದದ ಸೀರೆ ಆರಿಸುವ ಜವಾಬ್ದಾರಿ ನಮ್ಮಗಳ ಮೇಲಿರುತ್ತಿತ್ತು. ಅಪ್ಪನೂ, ನಾವೂ ಎಲ್ಲರೂ ಸೇರಿ ಅಮ್ಮನಿಗೆ ಒಪ್ಪಬಹುದಾದ ಸೀರೆಯನ್ನು ಬಹಳ ಕುತೂಹಲದಿಂದ ಆರಿಸುತ್ತಿದ್ದೆವು. ದೀಪಾವಳಿಯ ಆಚರಣೆಯ ಕುರಿತು ರೂಪಶ್ರೀ ಕಲ್ಲಿಗನೂರ್‌ ಬರಹ

Read More

ಎಲ್ಲ ಕಾಲದ ಮನುಷ್ಯರೂ ಒಂದೇ!: ರೂಪಶ್ರೀ ಕಲ್ಲಿಗನೂರ್‌ ಬರಹ

ಗಣಿತದಲ್ಲಿ ತಪ್ಪು ಲೆಕ್ಕ ಬರೆದ ಮಕ್ಕಳನ್ನು ಕರೆದು ಅಂಗೈ ಮುಂದೆ ಮಾಡಲು ಹೇಳಿ, ಗೆಣ್ಣಿಗೆ ಹೊಡೆಯುತ್ತಿದ್ದ ರೀತಿ ಇನ್ನೂ ಚೆನ್ನಾಗಿ ನೆನಪಿದೆ. ಒಮ್ಮೊಮ್ಮೆ ತೀರಾ ಸಿಟ್ಟಿನಲ್ಲಿ ರಪರಪ ಬಾರಿಸಿದ್ರೆ, ಇನ್ನೂ ಕೆಲವೊಮ್ಮೆ ಏನೋ ಮನಸ್ಸಿಲ್ಲದೇ, ತನ್ನ ಕರ್ತವ್ಯ ಪಾಲಿಸುವುದಕ್ಕಾಗಿ ಇಷ್ಟು ಜೋರಾಗಿ ಹೊಡಿತಿದ್ದೀನಿ ಅನ್ನುವಂತೆ ಮುಖ ಮಾಡಿಕೊಂಡು ಶಿಕ್ಷಿಸುತ್ತಿದ್ದರು. ಹಾಗವರು ಮೃಗೀಯವಾಗಿ ಹೊಡೆಯುವಾಗ, ಅವರ ಮಗು ಅಲ್ಲೇ ಪಕ್ಕದಲ್ಲಿ ತೊಟ್ಟಿಲಲ್ಲಿ ನೆಮ್ಮದಿಯಿಂದ ಮಲಗಿರುತ್ತಿತ್ತು. ಅಷ್ಟು ಚಿಕ್ಕ ಮಗುವಿನ ತಾಯಿಯೊಬ್ಬಳು, ಓದಿನಲ್ಲಿ ತಪ್ಪು ಮಾಡಿದ ಮಕ್ಕಳಿಗೆ ಹೇಗೆ ಅಷ್ಟು ಮನುಷ್ಯತ್ವವಿಲ್ಲದೇ ಶಿಕ್ಷಿಸಲು ಸಾಧ್ಯ?
ರೂಪಶ್ರೀ ಕಲ್ಲಿಗನೂರ್‌ ಬರಹ ನಿಮ್ಮ ಓದಿಗೆ

Read More

ಮನೆಯವರ ಮನಗಳಲ್ಲಿ ಸಾಯುವವರ ಕತೆ: ರೂಪಶ್ರೀ ಕಲ್ಲಿಗನೂರ್‌ ಬರಹ

ಜೊತೆಯಲ್ಲಿ ಯಾರೂ ಇಲ್ಲದ್ದರಿಂದ, ಅವರ ಜೋಬಿನಲ್ಲಿದ್ದ ಮೊಬೈಲ್‌ ತೆಗೆದುಕೊಂಡು ಅದಕ್ಕೆ ಬಂದ-ಹೋದ ಒಂದಷ್ಟು ನಂಬರ್‌ಗಳಿಗೆ ಕಾಲ್‌ ಮಾಡಿ ವಿಷಯ ತಿಳಿಸಿದ್ದರು. ನಂತರ ಮೃತದೇಹವನ್ನು ಊರಿಗೆ ತರಿಸಿಕೊಂಡು ಎಲ್ಲ ಕಾರ್ಯಗಳನ್ನು ಮಾಡಿ ಮನೆಗೆ ಹೋಗುವಾಗ ಯಾರ ಕಣ್ಣಲ್ಲೂ ಹನಿ ನೀರುಕಾಣಲಿಲ್ಲ… ಅವರರ್ಯಾರ ಮುಖದಲ್ಲಿ ಅಯ್ಯೋ ತಮ್ಮ ಮನೆಯ ಸದಸ್ಯನೊಬ್ಬನನ್ನು ಕಳೆದುಕೊಂಡೆವಲ್ಲ ಎನ್ನುವ ನೋವು ಕಾಣಿಸುತ್ತಿರಲಿಲ್ಲ.. ಬದಲಾಗಿ ಅಕ್ಕ-ತಂಗಿಯರಾಗಿ ಎಲ್ಲರೂ ತಮ್ಮ ಕಾರ್ಯಗಳನ್ನು ಸರಿಯಾಗಿ ಮಾಡಿ-ಮುಗಿಸಿದೆವಲ್ಲ… ದೇವರಿಗೆ ನಮ್ಮ ಮೇಲೆ ಸ್ವಲ್ಪವಾದರೂ ಕರುಣೆ ಇದೆಯಪ್ಪ.. ಎನ್ನಿಸಿತ್ತು. ಅಷ್ಟೇ.
ರೂಪಶ್ರೀ ಕಲ್ಲಿಗನೂರ್ ಬರಹ ನಿಮ್ಮ ಓದಿಗೆ

Read More

ಕನ್ನಡಿಗರ ಕೈಯಲ್ಲಿರಲಿ ಒಂದು ಕನ್ನಡ ಪುಸ್ತಕ….

ಕನ್ನಡ ಭಾಷೆಯನ್ನು ಬಳಸುವುದೂ ಹಾಗೂ ಕನ್ನಡ ಕೃತಿಗಳನ್ನು ಓದುವುದೂ ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ, ಕನ್ನಡ ಭಾಷೆಗೆ ಹಾಗೂ ಅದರ ಓದಿಗೆ ಕನ್ನಡಿಗರನ್ನು ಸೆಳೆಯಲು “ವೀರಲೋಕ”‌ ಪ್ರಕಾಶನದ ಸಂಸ್ಥೆ ಹಲವು ವಿಶಿಷ್ಠ ಪ್ರಯತ್ನಗಳನ್ನು ಮಾಡುತ್ತಿದ್ದು, ಅದರ ಭಾಗವಾಗಿ ನವೆಂಬರ್ ೧೫,೧೬, ಮತ್ತು ೧೭ರಂದು ಬೆಂಗಳೂರಿನಲ್ಲಿ “ಪುಸ್ತಕ ಸಂತೆ”ಯನ್ನು ಆಯೋಜಿಸಿದೆ. ಇದರ ಕುರಿತು ವೀರಲೋಕದ ಪ್ರಕಾಶಕರಾದ ವೀರಕಪುತ್ರ ಶ್ರೀನಿವಾಸ್‌ ಅವರೊಂದಿಗೆ ರೂಪಶ್ರೀ ಕಲ್ಲಿಗನೂರ್‌ ನಡೆಸಿದ ಸಂದರ್ಶನ ನಿಮ್ಮ ಓದಿಗೆ…

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ