ಬದುಕೇ ಒಂದು ಓಟದ ಸ್ಪರ್ಧೆ…
ಚಿತ್ರಕ್ಕೆ ನಮ್ಮ ಪ್ರವೇಶ, ಗಡಿಯಾರವನ್ನು ತಲೆಯ ಮೇಲಿಟ್ಟುಕೊಂಡಿದ್ದ ಮರದ ಮುಖದ ಅಷ್ಟಾವಕ್ರ ಪ್ರಾಣಿ ಬಾಯಿ ತೆರೆದು ಉಂಟಾದ ಕತ್ತಲೆಯಲ್ಲಿ ಕ್ಯಾಮೆರಾ ಜೂ಼ಮ್-ಇನ್ ಮಾಡುವ ಮೂಲಕ. ಆಗ ಎದುರಾಗುತ್ತದೆ ಒಂದಕ್ಕೊಂದು ಸಂಬಂಧ ಮತ್ತು ಸಾತತ್ಯವಿರದ ಪ್ರಶ್ನೆ ಮತ್ತು ಉತ್ತರಗಳನ್ನು ಹುಡುಕಾಡುವುದೇ ಮನುಷ್ಯನ ಬದುಕು ಎನ್ನುವುದನ್ನು ಟಿ. ಎಸ್. ಎಲಿಯಟ್ ಮತ್ತು ಹೆರ್‌ಬರ್ಗರ್ ಅವರಿಂದ ಉದ್ಧರಿಸಿದ ಸಾಲುಗಳು ಮೂಡಿ, ಅಡ್ಡಾದಿಡ್ಡಿ ಓಡೋಡುತ್ತಲಿರುವ ಜನಜಂಗುಳಿ ಮರೆಯಾಗುತ್ತಿದ್ದಂತೆ ಒಂದು ಕ್ಷಣವನ್ನೂ ವ್ಯರ್ಥ ಮಾಡದೆ, ಟೆಲಿಫೋನ್ ಬೂತಿನಲ್ಲಿ ಮಾನಿ ಲೋಲಾಗೆ ಮಾತಾಡುವ ದೃಶ್ಯದಲ್ಲಿ ಘಟನೆಯ ಮೂಲಕ್ಕೆ ಪರಿಚಿತಗೊಳ್ಳುತ್ತೇವೆ.
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್’ ಸರಣಿ