ಕಥನಗಾರಿಕೆಯ ಬೈನಾಕ್ಯುಲರ್ ನಲ್ಲಿ ಕಂಡ ಗತ ಮತ್ತು ವರ್ತಮಾನಗಳು:ವಿಕ್ರಮ್ ಕಥೆಗಳ ಕುರಿತು ಗೀತಾ ವಸಂತ
ಹಮಾರಾ ಬಜಾಜ್ ನ ಕತೆಗಳಲ್ಲಿ ಅಸ್ತಿತ್ವ ಶೋಧದ ಆಯಾಮವು ಅಂತರಗಂಗೆಯಂತೆ ಒಳಗೊಳಗೇ ಹರಿಯುತ್ತ ಎಲ್ಲ ಕತೆಗಳನ್ನು ಒಂದು ಹರಿವಿನಲ್ಲಿ ಬೆಸೆಯುತ್ತದೆ. ದೇಹ, ಪ್ರಜ್ಞೆಗಳಲ್ಲಿ ಯಾವುದು ನಿಜ ಎಂಬ ತೊಡಕುಗಳನ್ನು ಅನುಭವಿಸುತ್ತಲೇ ಅದನ್ನು ನಿಧಾನವಾಗಿ ಬಿಡಿಸುವ ತರ್ಕದ ನಾಜೂಕು ಹೆಣಿಗೆಯನ್ನು ಕತೆಗಳು ನಿರ್ಮಿಸುತ್ತವೆ. ದೇಹದ ಐಂದ್ರಿಕ ಅನುಭವಗಳನ್ನು ಕಾಮದ ಮೂಲಕ ಶೋಧಿಸುವ ಕತೆಗಳು ಪ್ರಜ್ಞೆಯ ಅನುಭವವನ್ನು ವಿಶ್ಲೇಷಿಸಲು ತರ್ಕದ ಮೊರೆ ಹೋಗುತ್ತವೆ.
Read More