ಮೊದಲ ಮಹಿಳಾ ಭಾಗವತರ ಆತ್ಮಕಥೆಯ ಒಂದೆರಡು ಪುಟಗಳು
ಪುರುಷರ ಪ್ರಾಬಲ್ಯವೇ ಇರುವ ಯಕ್ಷಗಾನ ಕ್ಷೇತ್ರದಲ್ಲಿ ಇತ್ತೀಚೆಗೆ ಮಹಿಳೆಯರು ಮುಮ್ಮೇಳ ಮತ್ತು ಹಿಮ್ಮೇಳ ಕಲಾವಿದರಾಗಿ ಪ್ರದರ್ಶನಗಳನ್ನು ನೀಡುತ್ತಿದ್ದಾರೆ. ಆದರೆ ಸುಮಾರು ಐದು ದಶಕಗಳ ಹಿಂದೆಯೇ ಲೀಲಾವತಿ ಬೈಪಡಿತ್ತಾಯರು ಮಹಿಳಾ ಭಾಗವತರಾಗಿ ರಂಗಸ್ಥಳದಲ್ಲಿ ಪಡಿಯೇರಿದ್ದಷ್ಟೇ ಅಲ್ಲದೆ, ಮೇಳದ ತಿರುಗಾಟಕ್ಕೂ ಸೈ ಎಂದವರು. ಯಕ್ಷಗಾನ ಕ್ಷೇತ್ರದ ಮೊದಲ ಮಹಿಳಾ ಭಾಗವತರಾದ ಲೀಲಾವತಿ ಬೈಪಡಿತ್ತಾಯರ ಜೀವನ ಕಥನವನ್ನು ಲೇಖಕಿ ವಿದ್ಯಾರಶ್ಮಿ ಪೆಲತ್ತಡ್ಕ ನಿರೂಪಿಸಿದ್ದಾರೆ. ‘ಯಕ್ಷಗಾನ ಲೀಲಾವಳಿ’ ಎಂಬ ಆ ಕೃತಿಯು ಕೇವಲ ಆತ್ಮಕಥೆಯಷ್ಟೇ ಆಗಿರದೆ, ಯಕ್ಷಗಾನದ ಇತರ ಆಯಾಮಗಳನ್ನೂ ತೆರೆದಿಡುವ ಕೃತಿ. ಈ ಕೃತಿಯ ಒಂದು ಅಧ್ಯಾಯ ಇಲ್ಲಿದೆ.
Read More