Advertisement

Tag: ವಿನತೆ ಶರ್ಮಾ

ಶಾಂತಿ, ಕ್ರಾಂತಿ, ಸ್ವಾತಂತ್ರ್ಯದ ಹಗಲುಗನಸು

ಇಪ್ಪತ್ತೊಂದನೇ ಶತಮಾನದ ಈ ವರ್ಷದಲ್ಲೂ ಆಸ್ಟ್ರೇಲಿಯಾದ ಅಬೊರಿಜಿನಲ್ ಮತ್ತು ದ್ವೀಪವಾಸಿಗಳಿಗೆ ಹೇಳಿಕೊಳ್ಳುವಂತಹ ಸಾಮಾಜಿಕ ನ್ಯಾಯವಿನ್ನೂ ಸಿಕ್ಕಿಲ್ಲ. ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಕೇವಲ ಮೂರು ಶತಭಾಗ ಮಾತ್ರ ಅಬೊರಿಜಿನಲ್ ಮತ್ತು ದ್ವೀಪವಾಸಿಗಳು. ಕಾರಾಗೃಹಗಳಲ್ಲಿ ಅವರ ಸಂಖ್ಯೆ ಸುಮಾರು ಶೇ 29ರಷ್ಟು. ತಮ್ಮ ಹಕ್ಕುಗಳಿಗೆ ಹೋರಾಡುತ್ತಿರುವ ಅವರು, ಭಾರತದಲ್ಲಿ ಗಾಂಧೀಜಿಯ ಶಾಂತಿ ಮಂತ್ರದಿಂದ ಸ್ವಾತಂತ್ರ್ಯ ಸಿಕ್ಕಂತೆ, ತಮ್ಮಲ್ಲೂ ಪರಿವರ್ತನೆಯ ಬೆಳಕೊಂದು ಮೂಡಿಬರುವಂತಾಗಲಿ ಎಂದು ಹಾರೈಸುತ್ತಾರೆ. ಅಬೊರಿಜಿನಲ್ ಮತ್ತು ದ್ವೀಪವಾಸಿಗಳ ಕುರಿತು ಡಾ. ವಿನತೆ ಶರ್ಮ ಆಸ್ಟ್ರೇಲಿಯಾ ಪತ್ರದಲ್ಲಿ ಬರೆದಿದ್ದಾರೆ.

Read More

ಹಾಗಾದರೆ ರಾಜಕೀಯದಲ್ಲೂ ಅಡುಗೆ ಮನೆಯದ್ದೇ ಮೌಲ್ಯಮಾಪನವೆಂದಾದರೆ..

ಸ್ಟ್ರೇಲಿಯಾದಲ್ಲಿ  ಜೂಲಿಯಾ ಪ್ರಧಾನಮಂತ್ರಿಯಾದ ಹೊಸತರಲ್ಲೇ ಆಕೆಯ ಬಗ್ಗೆ ನಾನಾತರಹದ ಸುದ್ದಿಗಳು, ಅಪನಿಂದನೆಗಳು, ಅವಹೇಳನಕಾರಿ ಮಾತುಗಳು ಹುಟ್ಟಿದ್ದವು. ಉದಾಹರಣೆಗೆ, ಆಕೆಯ ಮನೆ ಅಡುಗೆಮನೆಯ ಫೋಟೋವನ್ನು ಪತ್ರಿಕೆಗಳಲ್ಲಿ ಪ್ರಕಟಿಸಿ, ‘ನೋಡಿ, ಅಡುಗೆಮನೆ ಎಷ್ಟು ಖಾಲಿಯಾಗಿ ಬರಡುಬರಡಾಗಿದೆ, ಆಕೆ ಅಡುಗೆ ಮಾಡುವುದಿಲ್ಲ, ಆಕೆಗೆ ತಾಯ್ತನವೂ ಇಲ್ಲ, ಇಂಥಾ ಹೆಣ್ಣು ನಮ್ಮ ಸಮಾಜಕ್ಕೆ ಮಾದರಿಯಾಗಬಲ್ಲರೇ ಎಂದು ವಿಡಂಬನೆ ಮಾಡಲಾಗಿತ್ತು’. 

Read More

ಇದು ಆಸ್ಟ್ರೇಲಿಯನ್ ಮಹಿಳಾ ಕ್ರೀಡಾಪಟುಗಳಿಗೆ ಸೇರಿದ ವರ್ಷ!

ಇಪ್ಪತ್ತೊಂದನೇ ಶತಮಾನದಲ್ಲಿ ಕೂಡ ಹೊರದೇಶದವರಿಗೆ ಆಸ್ಟ್ರೇಲಿಯ ಅಂದರೆ ಆಂಗ್ಲೋ-ಆಸ್ಟ್ರೇಲಿಯಾ ಎಂಬ ಏಕತ್ವ ಮಾತ್ರ ಕಾಣುವುದು. ಎಲ್ಲವೂ ಆಂಗ್ಲೋ-ಯೂರೋಪಿಯನ್-ಅಮೇರಿಕನ್ ಆಗಿರುವ ಈ ದೇಶದಲ್ಲಿ ಈ ಮಣ್ಣಿನ ಮಕ್ಕಳಾದ ಅಬೊರಿಜಿನಲ್ ಜನರ ಸಂಸ್ಕೃತಿ ಮತ್ತು ತಿಳಿವಳಿಕೆಯ ಮಹತ್ವ ಬೆಳಕಿಗೆ ಬರಲು ಸಾಕಷ್ಟು ಅವಕಾಶವಾಗಿಲ್ಲ. ಇಂಥಾ ಸನ್ನಿವೇಶದಲ್ಲಿ ಮಹಿಳಾ ಕ್ರೀಡಾಪಟುವೊಬ್ಬರು ರೂಪುಗೊಳ್ಳುವುದು ಸರಳ ಮಾತಲ್ಲ.
ವಿನತೆ ಶರ್ಮಾ ಬರೆದ ‘ಆಸ್ಟ್ರೇಲಿಯ ಪತ್ರ’ ಇಲ್ಲಿದೆ.

Read More

ನೀಲಿ ಕಡಲು, ಬೆಳ್ಳಿ ಚುಕ್ಕಿ ಮತ್ತು ಸಿಡ್ನಿ ಹಾಯಿದೋಣಿ ಸ್ಪರ್ಧೆ: ವಿನತೆ ಶರ್ಮಾ ಅಂಕಣ

“ಬೇರೆಲ್ಲಾ ಪಂದ್ಯಗಳಂತೆ ಈ ಸ್ಪರ್ಧೆಯ ಕುರಿತಾಗಿ ಅನೇಕ ರೋಚಕ ಕಥೆಗಳೂ, ಸಾವುನೋವುಗಳೂ, ಸಾಧನೆಗಳೂ ಅಡಗಿವೆ. ೧೯೯೮ರ ಪಂದ್ಯದ ಸಮಯದಲ್ಲಿ ಸಂಭವಿಸಿದ ಅಸಾಧಾರಣ ತೀವ್ರ ಗಾಳಿಯಿಂದಾಗಿ ಐದು ದೋಣಿಗಳು ಮುಳುಗಿ, ಆರು ಜನ ಸತ್ತರಂತೆ. ಈ ದುರಂತದ ಕಾರಣದಿಂದ ಸ್ಪರ್ಧೆಯ ನಿಯಮಾವಳಿಗಳನ್ನ ಮತ್ತಷ್ಟು ಕಠಿಣಗೊಳಿಸಿದರಂತೆ. ಈ ವಿಷಯವನ್ನು ನನ್ನ ಗೆಳತಿಯ ಗಂಡ…”

Read More

ಜಾನ್ ಮ್ಯೂರ್ ಮತ್ತು ಆತನ ಸಾಹಸ ಗಾಥೆಗಳು: ಡಾ.ವಿನತೆ ಶರ್ಮ ಅಂಕಣ

“ಜಾನ್ ಕೈಗೊಂಡ ಅತಿಸಾಹಸಗಳಲ್ಲಿ ಹಲವನ್ನು ಹೆಸರಿಸಬೇಕು ಎಂದು ಆಯ್ದುಕೊಂಡರೆ ಅವರು ಎರಡೂ ಧ್ರುವಗಳಿಗೆ ಕಾಲ್ನಡಿಗೆಯಲ್ಲಿ ಹೋಗಿ ತಲುಪಿದ್ದು, ಆಸ್ಟ್ರೇಲಿಯಾದ ಉಪ್ಪಿನ ಸರೋವರಗಳ ಮೇಲ್ಮೈ ಮೇಲೆ ನೂರಾರು, ಮರುಭೂಮಿ ಉದ್ದ ಮತ್ತು ಅಗಲಕ್ಕೂ ಹಲವಾರು ಬಾರಿ ಸಾವಿರಾರು ಕಿಲೋಮೀಟರ್ ನಡಿಗೆಯ ಪಯಣಗಳು, ಸಮುದ್ರ ದೋಣಿಯಲ್ಲಿ ತಿಂಗಳಾನುಗಟ್ಟಲೆ ಪಯಣಗಳು, ಜೊತೆಗೆ ಪರ್ವತಾರೋಹಣ. ಅವುಗಳಲ್ಲಿ ಅನೇಕವು ಬಹು ಅಪಾಯಕಾರಿಯಾದವು.”

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಅಂಪೈರ್‌ ಮೇಡಂ: ಕೆ. ಸತ್ಯನಾರಾಯಣ ಕಾದಂಬರಿಯ ಪುಟಗಳು…

ಹುಡುಗನ ತಮ್ಮನಿಗೆ ಪೋಲಿಯೋದಿಂದ ಕಾಲು ತಿರುಚಿಕೊಂಡು ಪೇಟೆ ಬೀದಿಯ ಒಳ ಓಣಿಯ ಬಲಗಡೆ ಕ್ರಾಸಿನಲ್ಲಿ ಒಂದು ಕಾಂಡಿಮೆಂಟ್‌ ಸ್ಟೋರ್ಸ್‌ ಹಾಕಿಕೊಟ್ಟಿದ್ದು ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಶ್ರೀದೇವಿಯ ಗಂಡನಾಗುವವನು…

Read More

ಬರಹ ಭಂಡಾರ