ಮಗನಂತೆ ಮಗಳನ್ನೂ ಕಾಣೋಣ: ಅನುಸೂಯ ಯತೀಶ್ ಸರಣಿ

ಆ ಹುಡುಗನನ್ನ ಎಬ್ಬಿಸಿ ಯಾಕೋ ನಿನ್ನ ತಂಗಿ ಶಾಲೆಗೆ ಬಂದಿಲ್ಲ? ಎಂದಾಗ ಇಂದು ಮನೆಯಲ್ಲಿ ಬಟ್ಟೆ ಒಗೆಯುವ ಕೆಲಸ ಇತ್ತು. ಅದಕ್ಕೆ ಅಮ್ಮ ರಜೆ ಹಾಕಿಸಿದ್ದಾರೆ ಮಿಸ್ ಎಂದನು. ನೀನು ಮಾತ್ರ ಶಾಲೆಗೆ ಬಂದಿದ್ದೀಯಾ? ನೀನು ಬಟ್ಟೆ ಒಗೆಯಲು ಹೋಗಲಿಲ್ಲವೇನು? ಎಂದು ಕೇಳಿದ್ದಕ್ಕೆ “ನಾನು ಹುಡುಗ ಮಿಸ್, ಬಟ್ಟೆ ತೊಳೆಯಲು ಹೋದರೆ ಯಾರಾದರೂ ನಗುತ್ತಾರೆ ಅಷ್ಟೇ” ಎಂದವನು, ಈ ಮಿಸ್‌ಗೆ ಅಷ್ಟು ಗೊತ್ತಿಲ್ಲವಾ? ಎಂಬ ಭಾವದಲ್ಲಿ ಗೆಳೆಯರೊಂದಿಗೆ ಮುಸಿಮುಸಿ ನಗಲಾರಂಭಿಸಿದ್ದ. ನನ್ನ ಮನಸ್ಸು ಈ ಲಿಂಗ ತಾರತಮ್ಯದ ಭಾವವನ್ನು ಕಂಡು ಖೇದಗೊಂಡಿತು.
ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿ ನಿಮ್ಮ ಓದಿಗ

Read More