Advertisement

Tag: ಸರಣಿ

ಬಾಯಿಗೆ ಸಿಗದ ಗೆಣಸು ಮತ್ತು ಮೇಷ್ಟ್ರು ಎಸೆದ ನೋಟ್ಬುಕ್

ಎಲ್ಲರಿಗಿಂತ ಚೆನ್ನಾಗಿಯೇ ಬರೆದಿದ್ದ ನನಗೆ, ಹಾಗೆ ಮೇಷ್ಟ್ರು ಹೊಡೆದದ್ದರಿಂದ ದಿಗ್ಬ್ರಾಂತನಾಗಿ ನೋಡುತ್ತಿದ್ದೆ. ನಾನು ಸಾವರಿಸಿಕೊಳ್ಳಲು ಬಹಳ ಸಮಯ ಬೇಕಾಯಿತು. ಕಣ್ಣಿನಿಂದ ನೀರು ಸುರಿಯುತ್ತಿತ್ತು. ನೋಟ್ ಬುಕ್ ನನ್ನಿಂದ ಇಪ್ಪತ್ತೈದು ಮೀಟರ್‌ನಷ್ಟು ದೂರ ಬಿದ್ದಿತ್ತು. ಹಾಳೆಗಳು ಗಾಳಿಗೆ ಹಾರುತ್ತಿದ್ದವು. ಅವರ ತರಗತಿ ಮುಗಿದ ಮೇಲೆ ಈ ಹಿಂದೆ ನಮಗೂ ಹೀಗೆ ಮಾಡಿದ್ದರು ಎಂದು ನನ್ನ ಗೆಳೆಯರು ನನ್ನನ್ನು ಸಮಾಧಾನ ಮಾಡಿದರು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿ

Read More

“ರಾಜಾಜಿನಗರ” ಹೆಸರಿನ ಚರಿತ್ರೆ ಗೊತ್ತಾ?

ಒಂದು ಭಾನುವಾರ ಬೆಳಿಗ್ಗೆ ಇಡೀ ರಾಜಾಜಿನಗರ ಬೆಚ್ಚಿ ಬೀಳುವ ಹಾಗೇ ದೊಡ್ಡ ಶಬ್ದ ಕೇಳಿಸಿತು. ಎಲ್ಲರೂ ಧಾವಂತದಿಂದ ಅವರವರ ಮನೆಗಳಿಂದ ಆಚೆ ಬಂದರು. ಏನು ಏನು ಅಂದುಕೊಂಡು ಅವರವರಲ್ಲೇ ಮಾತಾಡಿ ಕೊಂಡರು. ಸ್ವಲ್ಪ ಹೊತ್ತಿಗೆ ಮೊದಲು ವಿಮಾನ ಹೋಯಿತು, ಅದೇ ಸಿಡಿದು ಹೋಗಿರಬೇಕು ಎಂದು ತರ್ಕಿಸಿದರು. ಮನೆಗೆ ಬೀಗ ಜಡಿದು ಬಿದ್ದಿರುವ ವಿಮಾನದ ಅವಶೇಷ ನೋಡಲು ಸಾಲು ಸಾಲಾಗಿ ಇಡೀ ಸಂಸಾರ ಹೊರಟಿತು. ನಾನೂ ಈ ಗುಂಪಿನಲ್ಲಿದ್ದೆ. ಸುಮಾರು ದೂರ ಎರಡು ಮೂರು ಗಂಟೆ ನಡೆದೆವು ಅಂತ ಕಾಣುತ್ತೆ. ಎಲ್ಲೂ ವಿಮಾನದ ಅವಶೇಷ ಕಾಣಿಸಲಿಲ್ಲ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಎರಡನೇ ಕಂತು ನಿಮ್ಮ ಓದಿಗೆ

Read More

ಹಸಿವು ಇಂಗಿಸುವ ಬಿಸ್ಕಿಟ್‌ ವಾಸನೆ….

ಆ ಸಭೆಯಲ್ಲಿ ಭಾಗವಹಿಸಿದ್ದ ಉಗ್ರಗಾಮಿಗಳ ನಾಯಕ 35 ವರ್ಷದವನಿರಬಹುದು. ಆತ ತನ್ನ ಹೆಂಡತಿ ಮತ್ತು ಮಗುವಿನ ಜೊತೆ ಬಂದಿದ್ದ. ಸಭಿಕರ ಮಧ್ಯದಿಂದ ಆತ ಉಗ್ರಗಾಮಿಗಳ ಪ್ರತಿನಿಧಿಯಾಗಿ ಕಾಶ್ಮೀರ ಸಮಸ್ಯೆ ಕುರಿತು ಮಾತನಾಡಿದ. ಕಾಶ್ಮೀರದಲ್ಲಿ ಎನ್‌ಕೌಂಟರಲ್ಲಿ ಸತ್ತ ಸುಮಾರು 60 ಸಾವಿರ ಯುವಕರ ಹೆಸರು, ವಯಸ್ಸು ಮುಂತಾದ ವಿವರಗಳುಳ್ಳ ಕಂಪ್ಯೂಟರ್ ಲಿಸ್ಟ್ ತಂದಿದ್ದ. ಅದರ ಜೊತೆಗಿದ್ದ ಇನ್ನೊಂದು ಲಿಸ್ಟಲ್ಲಿ ಅತ್ಯಾಚಾರಕ್ಕೊಳಗಾದ 65 ಸಾವಿರ ಕಾಶ್ಮೀರ ಯುವತಿಯರ ಹೆಸರು ಮುಂತಾದ ವಿವರಗಳಿರುವುದಾಗಿ ತಿಳಿಸಿದ.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ

Read More

ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ ಆರಂಭ

ಮುಂದೆ ಈ ಕುದುರೆ ಗಾಡಿ ಯಾ ಜಟಕಾ ಗಾಡಿ ಪ್ರಸಂಗ ಸಾವಿರಾರು ಸಲ ರಿಪೀಟ್ ಆದವು. ಆಗ ರಾಮಚಂದ್ರಪುರದ ಬಳಿ ಬರುತ್ತಿದ್ದಂತೆ ದೊಡ್ಡ ಇಳಿಜಾರು ಶುರು ಆಗಿ ಸುಮಾರು ನೂರಾ ಐವತ್ತು ಅಡಿ ಆಳಕ್ಕೆ ರಸ್ತೆ ಸರಿದು ನಂತರ ಏರು ಗತಿಯಲ್ಲಿ ಇದು ಮುನ್ನೂರು ಗಜ ದಾಟಿ ರಾಜಾಜಿನಗರ ಎಂಟ್ರೆನ್ಸ್ ತಲುಪುತಿತ್ತು.
ಎಚ್. ಗೋಪಾಲಕೃಷ್ಣ ಬರೆಯುವ ಹೊಸ ಸರಣಿ “ಹಳೆ ಬೆಂಗಳೂರ ಕಥೆಗಳು” ಇನ್ನು ಹದಿನೈದು ದಿನಗಳಿಗೊಮ್ಮೆ, ಶುಕ್ರವಾರಗಳಂದು ನಿಮ್ಮ ಕೆಂಡಸಂಪಿಗೆಯಲ್ಲಿ ಪ್ರಕಟವಾಗಲಿದೆ.

Read More

ವಿದೇಶಗಳಲ್ಲಿ ಹಿಂದೂ ಸಂಸ್ಕೃತಿಯ ಪ್ರಸಾರ

ಕ್ರಿ.ಶ. ಒಂದನೇ ಶತಮಾನದ ಮೊದಲ್ಗೊಂಡು ಬರ್ಮಾದಲ್ಲಿ ಭಾರತೀಯ ಸಂಸ್ಕೃತಿಯ ಪ್ರಚಾರವು ಪ್ರಾರಂಭವಾಯಿತು. ಉತ್ತರ ಹಿಂದುಸ್ತಾನದಿಂದ ನೆಲಮಾರ್ಗವಾಗಿಯೂ, ದಕ್ಷಿಣದಿಂದ ಸಮುದ್ರ ಮಾರ್ಗವಾಗಿಯೂ ಪ್ರಚಾರವು ನಡೆದು, ವೈಷ್ಣವ, ಶೈವ, ಮಹಾಯಾನ, ಹೀನಯಾನ ಬೌದ್ಧಮತಗಳು ಹಬ್ಬಿದುವು. ಹೀನಯಾನ ಮತವು ಹೆಚ್ಚು ಪ್ರಾಬಲ್ಯವನ್ನು ಪಡೆಯಿತು.
ಕೆ.ವಿ. ತಿರುಮಲೇಶ್ ಸರಣಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ