ಸಂಗೀತ-ನೃತ್ಯ ರೂಪಕದೊಳಗೆ ಎಲ್ಲರಿಗೂ ಸಲ್ಲುವ ಅಮೆರಿಕೆಯ
ಹೊಸ ದೇಶವನ್ನು ರೂಪಿಸಲು ಹೆಣಗಾಡುತ್ತಿದ್ದ ತನ್ನ ನಾಯಕ ಜಾರ್ಜ್ ವಾಷಿಂಗ್ಟನ್ ಅವರಿಗೆ ತೋಳ್ಬಲ ಕೊಟ್ಟು ರಾಜಕೀಯದಲ್ಲಿನ ಭುಜಬಲನಾದ. ಹೊಸ ಅಮೆರಿಕಾದ ಮೊಟ್ಟಮೊದಲ ಅಧ್ಯಕ್ಷರಾದ ವಾಷಿಂಗ್ಟನ್ ಅವರ ಸರಕಾರದಲ್ಲಿ ಪ್ರಮುಖ ಪದವಿಗಳನ್ನು ನಿರ್ವಹಿಸುತ್ತಾ ತನ್ನನ್ನು ತಾನೇ ದೇಶೀಯ ಮಟ್ಟದಲ್ಲಿ ಒಬ್ಬ ನಂಬಿಕೆಯ ರಾಜಕಾರಣಿ, ರಾಜನೀತಿ ತಜ್ಞನಾಗಿ ರೂಪಿಸಿಕೊಂಡ ಹ್ಯಾಮಿಲ್ಟನ್ ತನ್ನ ಅಲ್ಪಾಯಸ್ಸಿನ ಕಾಲದಲ್ಲಿ ಅಮೆರಿಕಾವನ್ನು ಒಂದು ಸುಸಂಸ್ಥಿತ ದೇಶವನ್ನಾಗಿ ರೂಪಿಸಲು ಅನೇಕ ಮೈಲಿಗಲ್ಲುಗಳನ್ನು ನೆಟ್ಟಿದ್ದಾರೆ.
ಡಾ. ವಿನತೆ ಶರ್ಮ ಬರೆಯುವ ಆಸ್ಟ್ರೇಲಿಯಾ ಪತ್ರ