Advertisement

Tag: ಕೆಂಡಸಂಪಿಗೆ

ಕತ್ತಲಲಿ ಕಂಡ ಮಿನುಗುವ ಕಣ್ಣುಗಳು….

ಆ ಹಾಳು ಗುಡಿಯ ಮುಂದೆ ಹೋದೆವು. ಒಬ್ಬರೂ ಕಾಣಲಿಲ್ಲ. ಅಷ್ಟೊತ್ತಿಗೆ ಒಳಗಿನಿಂದ ಒಬ್ಬ ಯುವಕ ಬಂದ. ದೇವಾಲಯದೊಳಗೆ ಸಂಪೂರ್ಣ ಕತ್ತಲು ಕವಿದಿತ್ತು. ಇದೇನು ಹೀಗೆ ಎಂದಾಗ, ಆತ ‘ಇರುವುದೊಂದೇ ಮೋಂಬತ್ತಿ ನಿಮ್ಮ ಬರುವಿಗೆ ಕಾಯುತ್ತಿದ್ದೆವು’ ಎಂದ. ಒಳಗೆ ಕಾಲಿಟ್ಟಕೂಡಲೆ ಆತ ಮೋಂಬತ್ತಿ ಹಚ್ಚಿದ. ಅಲ್ಲಿ ಕುರ್ಚಿ ಟೇಬಲ್ ಏನೂ ಇರಲಿಲ್ಲ. ಆ ಮೋಂಬತ್ತಿಯ ಬೆಳಕಲ್ಲಿ ನೂರಾರು ಯುವಕರು ಕುಳಿತಿದ್ದು ಮಸುಕು ಮಸುಕಾಗಿ ಕಾಣುತ್ತಿತ್ತು. ಅವರ ಕಣ್ಣುಗಳು ಮಾತ್ರ ನಕ್ಷತ್ರಗಳ ಹಾಗೆ ಹೊಳೆಯುತ್ತಿದ್ದವು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 64ನೇ ಕಂತು ನಿಮ್ಮ ಓದಿಗೆ

Read More

ಅಬ್ದುಲ್‌ ರಶೀದ್‌ ಬರೆದ ಈ ಭಾನುವಾರದ ಕಥೆ

ಕಾಣೆಯಾಗಿದ್ದ ಟಿಬೆಟನ್ ಕ್ಯಾಂಪಿನ ಮೂವರು ಹಸುಳೆಗಳು ಇದೇ ಬಿಡಾರದ ಬಾಗಿಲು ತಟ್ಟಿ ಆಹಾರ ಕೋರಿದ್ದರು. ಕುಡಿದು ಬಿದ್ದಿದ್ದ ಈ ಆಸಾಮಿ ಕಣ್ಣೇ ಬಿಟ್ಟಿರಲಿಲ್ಲ. ಆತ ಕಣ್ಣು ಬಿಟ್ಟಾಗ ಆತನ ಮಡದಿ ಅದಾಗಲೇ ಲಾಮಾ ಮಕ್ಕಳ ಬಟ್ಟೆ ಬದಲಾಯಿಸಿ, ಬಿಸಿ ನೀರಲ್ಲಿ ಸ್ನಾನ ಮಾಡಿಸಿ, ಹೊಟ್ಟೆಗೆ ತಿನ್ನಲು ಕೊಟ್ಟು, ಅವರ ಕಾಷಾಯ ವಸ್ತ್ರಗಳನ್ನು ಒಗೆದು ಬಿಸಿಲಿಗೆ ಒಣಗಲು ಹಾಕಿ, ಅವರಿಗೆ ಕಂಬಳಿ ಹೊದೆಸಿ ಬೆಚ್ಚಗೆ ಮಲಗಿಸಿ ಅವರನ್ನು ಕಾದು ಕುಳಿತಿದ್ದಳು.
ಅಬ್ದುಲ್‌ ರಶೀದ್‌ ಬರೆದ ಕಥೆ “ಅಂತಾರಾಷ್ಟ್ರೀಯ ಕುಂಬಳಕಾಯಿ”

Read More

ಕ್ರಿಕೆಟ್‌ ಜಗತ್ತಿನ ಕೆಚ್ಚೆದೆಯ ಸರ್ದಾರರು

ಸ್ಟುವರ್ಟ್ ವಿರುದ್ಧ ಸಿಟ್ಟಿನಲ್ಲಿದ್ದ ಯುವ್‌ರಾಜ್‌ ಸ್ಟುವರ್ಟ್ ಬ್ರಾಡ್‌ನ ಬೋಲಿಂಗ್ ಎದುರಿಸಲು ಮುಂದಾದರು. ಅವರ ಸಿಟ್ಟು ಎಷ್ಟರಮಟ್ಟಿಗೆ ಇತ್ತು ಅಂದರೆ ಮುಂದೆ ಅವರು ಆಡಿದ ಪ್ರತಿ ಬಾಲನ್ನೂ ಸಿಕ್ಸರ್‌ಗೆ ಕಳಿಸಿದರು. ಒಂದೊಂದು ಸಿಕ್ಸರ್ ಹೊಡೆದಮೇಲೂ ಫ್ಲಿಂಟಾಫ್ ಕಡೆಗೆ ನೋಡಿ ಬ್ಯಾಟ್ ತಿರುಗಿಸುತ್ತಿದ್ದರು ಯುವ್‌ರಾಜ್‌! ಬ್ರಾಡ್ ಪಾಪ! ಅವರು ಬಹಳ ದೊಡ್ಡ ಬೆಲೆ ತೆರಬೇಕಾಯಿತು. 6 ಬಾಲುಗಳಲ್ಲಿ 36! ಇ ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣದಲ್ಲಿ ಯುವ್‌ರಾಜ್‌ ಸಿಂಘ್‌ ಹಾಗೂ ಹರ್ಭಜನ್‌ ಸಿಂಘ್‌ ಆಟದ ಕುರಿತ ಬರಹ ನಿಮ್ಮ ಓದಿಗೆ

Read More

ಹಲವು ಹೃದಯಗಳ ಮುಟ್ಟಿದ ಚಲನಚಿತ್ರೋತ್ಸವ..

ಮೂರನೇ ಅತ್ತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿರುವ ʻಫೋಟೋʼ ಚಿತ್ರದ್ದು ಬೇರೆಯದೇ ರೀತಿಯ ಛಾಪು. ಚಿತ್ರೋತ್ಸವದ ಎರಡನೇ ದಿನ 4ನೇ ಪರದೆಯಲ್ಲಿ ಮೊದಲ ಪ್ರದರ್ಶನ ಕಂಡ ಈ ಚಿತ್ರ ನೋಡಲು ಪ್ರೇಕ್ಷಕರು ಕಿಕ್ಕಿದು ತುಂಬಿದ್ದರು. ಆಸನಗಳು ಸಾಲದಕ್ಕೆ ಚಿತ್ರಮಂದಿರದ ನಿಯಮವನ್ನೂ ಮುರಿದು ಮೆಟ್ಟಿಲುಗಳ ಮೇಲೆ ಕುಳಿತು ಸಹ ಹಲವರು ಚಿತ್ತ ಬದಲಿಸದೇ ನೆಟ್ಟ ದೃಷ್ಟಿಯಲ್ಲೇ ಚಿತ್ರವನ್ನು ವೀಕ್ಷಿಸಿದರು.
‘ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ದಲ್ಲಿ ನೋಡಿದ ಸಿನಿಮಾಗಳ ಕುರಿತು ಕುಮಾರ ಬೇಂದ್ರೆ ಬರಹ

Read More

ಅಪ್ಪನ ಅಲ್ಸರ್ ಖಾಯಿಲೆ ಮತ್ತು ಅಂಕಗಳ ವ್ಯಾಮೋಹ

ಈಗಿನಂತೆ ಮೊಬೈಲ್ ಕಾಲವೂ ಅಲ್ಲ. ಊರಿಗೆ ಲ್ಯಾಂಡ್ ಫೋನ್‌ ಸಹ ಇರಲಿಲ್ಲ. ಅಪ್ಪನ ಜೊತೆಯಲ್ಲಿ ಹೋಗಿದ್ದ ಕೆಲವರು ಬೆಳಿಗ್ಗೆ ಬಂದು ಹೇಳಿದಾಗಲೆ ನಮಗೆ ತಿಳಿದಿದ್ದು. ಅಪ್ಪನಿಗೆ ‘ಅಲ್ಸರ್’ ಆಗಿದೆ ವಿಪರೀತ ಹಾಲ್ಕೋಹಾಲ್ ಸೇವನೆಯಿಂದ ಹೀಗಾಗಿದೆ ಎಂದು. ಬೆಳಗ್ಗೆಯಷ್ಟರಲ್ಲಿ ಶಸ್ತ್ರಚಿಕಿತ್ಸೆ ಮುಗಿದು, ಯಶಸ್ವಿಯಾಗಿತ್ತು. ಜೀವಕ್ಕೆ ಅಪಾಯವಿರಲಿಲ್ಲ. ಆದರೆ ಮೂರು ತಿಂಗಳು ಆಸ್ಪತ್ರೆಯಲ್ಲಿಯೇ ಇರಬೇಕು ಎಂಬ ವಿಷಯವನ್ನು ತಿಳಿಸಿದ್ದರು. ರಾತ್ರಿ ಇಡೀ ನಿದ್ದೆಯಿಲ್ಲದೆ ಆತಂಕದಿಂದಲೇ ಕಳೆದಿದ್ದ ನಾವೆಲ್ಲ ನಿಟ್ಟುಸಿರು ಬಿಟ್ಟಿದ್ದೆವು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಆರನೆಯ ಕಂತು ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ