Advertisement

Tag: ಡಾ.ವಿನತೆ ಶರ್ಮ

ಮುಖ್ಯಮಂತ್ರಿಯ ಹೆಜ್ಜೆಯಲ್ಲಿ ತಂದೆಯಿರಲಿ: ಡಾ. ವಿನತೆ ಶರ್ಮಾ ಅಂಕಣ

ಆಸ್ಟ್ರೇಲಿಯಾದಲ್ಲಿ ಬಿಳಿ ಆಸ್ಟ್ರೇಲಿಯನ್ನರು ರಾಜಕಾರಣಿಗಳನ್ನು ಕರೆದು ಕುರ್ಚಿ ಹಾಕುವುದಿಲ್ಲ. ‘ನಮ್ಮಂತೆಯೇ ನೀವು,’ ಎನ್ನುವ ಮನೋಭಾವ. ಅದಕ್ಕೂ ಮಿಗಿಲಾಗಿ, ಯಾವುದೇ ಹಿಂಜರಿಕೆಯಿಲ್ಲದೆ, ‘ನಾವು ಆರಿಸಿದ್ದರಿಂದ ನೀನು ಆ ಸ್ಥಾನಲ್ಲಿದ್ದೀಯ, ಕೊಟ್ಟಿರುವ ಕೆಲಸ ಸರಿಯಾಗಿ ಮಾಡು,’ ಅನ್ನುವುದನ್ನು ಮನದಟ್ಟು ಮಾಡಿಸುತ್ತಾರೆ. ಏನಾದರೂ ದೋಷಾರೋಪಗಳಿದ್ದರೆ ಜನರು ಪ್ರಧಾನಮಂತ್ರಿಯಿಂದ ಹಿಡಿದು ಸಣ್ಣಪುಟ್ಟ ಮಂತ್ರಿಗಳವರೆಗೂ ಅವರನ್ನ ನೇರವಾಗಿ ಪ್ರಶ್ನಿಸುತ್ತಾರೆ. ಅವಶ್ಯವಿದ್ದರೆ ಖಂಡಿಸುತ್ತಾರೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಯೋಣ: ಡಾ. ವಿನತೆ ಶರ್ಮಾ ಅಂಕಣ

ಹೋದ ವಾರ ಕ್ವೀನ್ಸ್‌ಲ್ಯಾಂಡ್ ರಾಜ್ಯದಲ್ಲಿ ಚುನಾವಣೆ ನಡೆದು ಆಗ ಆಡಳಿತ ನಡೆಸುತ್ತಿದ್ದ ಲೇಬರ್ ಪಕ್ಷ ಸೋತು, ಬಹುಮತ ಪಡೆದ ಲಿಬೆರಲ್ ಪಕ್ಷ ಅಧಿಕಾರಕ್ಕೆ ಬಂತು. ಹೊಸದಾಗಿ ತಮ್ಮ ಸರಕಾರವನ್ನು ರಚಿಸುತ್ತಾ, ಸಂಪುಟ ಸಚಿವರನ್ನು ಆಯ್ಕೆ ಮಾಡಿದ್ದ ಹೊಸ ಮುಖ್ಯಮಂತ್ರಿ ಡೇವಿಡ್ ಕ್ರಿಸ್ಟಫಲಿ ನಿನ್ನೆ ನಡೆದ ಸಮಾರಂಭದಲ್ಲಿ ಹಾಜರಿದ್ದರು. ಜೊತೆಗೆ ಒಂದಿಬ್ಬರು ಮಂತ್ರಿಗಳು, ಕೇಂದ್ರ ವಿರೋಧಪಕ್ಷದ ನಾಯಕರು, ನಗರಪಾಲಿಕೆ ಮೇಯರ್, ಎಂಪಿಗಳು ಎಂಬಂತೆ ರಾಜಕಾರಣಿಗಳ ದೊಡ್ಡ ತಂಡವೇ ಬಂದಿತ್ತು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಅನಿವಾಸಿಗಳಿಗೆ “ಇಳೆಯ” ಸಂಗೀತದ ಹಿತ: ಡಾ. ವಿನತೆ ಶರ್ಮಾ ಅಂಕಣ

ಬ್ಯಾಂಡ್ ಹೊಂದಿರುವ ಸಂಗೀತ ವಾದ್ಯಗಳ ವೈವಿಧ್ಯತೆ, ತಬಲಾ ಬಾರಿಸುವ ನಿಪುಣತೆ, ಕೊಳಲು ಊದುವ ಮಾಧುರ್ಯ, ವಯಲಿನ್ ನುಡಿಸುವ ತನ್ಮಯತೆ, ಕೀಬೋರ್ಡ್ ಮೇಲೆ ನಲಿದಾಡುವ ಬೆರಳುಗಳ ಚಾಕಚಕ್ಯತೆ, ಎಲ್ಲವೂ ಚೊಕ್ಕವಾಗಿ ಚೆಂದೆನಿಸಿತ್ತು. ನಾನು ಇದೆ ಮೊದಲ ಬಾರಿ ಎಲೆಕ್ಟ್ರಿಕ್ ತಬಲಾ ನೋಡಿದ್ದು, ಬೆರಗಾಗಿದ್ದು. ಅದನ್ನು ಬಾರಿಸುತ್ತಿದ್ದ ಯುವಕ ಕಾರ್ಯಕ್ರಮವನ್ನು ನಿರ್ದೇಶಿಸುತ್ತಿದ್ದ ಕೂಡ. ಅವಲ್ಲದೆ, ಇನ್ನಿಬ್ಬರು ಎರಡು ಶಾಸ್ತ್ರೀಯ ತಬಲಾಗಳನ್ನೂ ಬಾರಿಸುತ್ತಿದ್ದರು. ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ನವರಾತ್ರಿಗೆ ಒಂದಿಷ್ಟು ಆಸ್ಟ್ರೇಲಿಯಾ ಕಥೆಗಳು: ಡಾ. ವಿನತೆ ಶರ್ಮಾ ಅಂಕಣ

ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರಿದ್ದು ಅವರು ಹಿಂದೂ ಧರ್ಮವನ್ನು ಆಚರಿಸುವುದಾಗಿ ಜನಗಣತಿಯಲ್ಲಿ ಹೇಳಿದ್ದರೆ, ಅವರ ಹಕ್ಕುಮಾನ್ಯತೆಯನ್ನು ಪರಿಗಣಿಸಿ ದೇವಸ್ಥಾನಕ್ಕೆ ಒಪ್ಪಿಗೆ ಕೊಡಬಹುದು. ಇದಾದ ಮೇಲೆ ದೇವಾಲಯ ಕಟ್ಟಡದ ನಿರ್ಮಾಣಕ್ಕೆ ಹಣ ಹೊಂದಿಸಬೇಕು. ದೇವಸ್ಥಾನ ಸ್ಥಾಪನೆಯ ಕನಸು ಕಂಡವರು ಹಗಲುರಾತ್ರಿ ಶ್ರಮವಹಿಸಿ ನಿಧಿಸಂಗ್ರಹಣೆ ಮಾಡಬೇಕು. ಕೆಲವರಿಗಂತೂ ಇದೇ ಅವರ ನಿತ್ಯಜೀವನವಾಗುತ್ತದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಗಣೇಶ ತರುವ ಸುಖ, ಸಂತೋಷ…: ವಿನತೆ ಶರ್ಮಾ ಅಂಕಣ

ಈ ಪ್ರಪಂಚದ ಒಂದಷ್ಟು ದೇಶಗಳನ್ನು ಸುತ್ತುವಾಗ ಗಣೇಶನ ಖ್ಯಾತಿ ಅಚ್ಚರಿ ತಂದಿತ್ತು. ಯೂರೋಪ್, ಯುನೈಟೆಡ್ ಕಿಂಗ್ಡಮ್ ಅಲ್ಲಂತೂ ಗಣೇಶನ ಪರಿಚಯ ಸುಮಾರು ಜನರಿಗಿದೆ. ಅಂದಚೆಂದಕ್ಕೆಂದು ಅವನ ಮೂರ್ತಿಗಳನ್ನು ಇಟ್ಟಿರುವುದು ದಿಟ. ನಮ್ಮ ಆಸ್ಟ್ರೇಲಿಯದಲ್ಲೇಕೋ ಗಣಪನ ಹೆಸರು ಜನರಿಗೆ ಅಷ್ಟೊಂದು ಗೊತ್ತಿಲ್ಲ. ‘ಯು.ಕೆ. ಮತ್ತು ಅಮೇರಿಕಕ್ಕೆ ಹೋಲಿಸಿದರೆ ಆಸ್ಟ್ರೇಲಿಯಾ ಇಪ್ಪತ್ತು ವರ್ಷಗಳಷ್ಟು ಹಿಂದಿದೆ’ ಎನ್ನುವ ಜಾಣ್ಣುಡಿ ನಿಜವೇನೂ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ