Advertisement

Tag: ಲಿಂಗರಾಜ ಸೊಟ್ಟಪ್ಪನವರ್‌

ಗರತಿಯ ಹಾಡು ಮತ್ತು ಸ್ತ್ರೀ ದೃಷ್ಟಿಕೋನ: ಲಿಂಗರಾಜ ಸೊಟ್ಟಪ್ಪನವರ್‌ ಅಂಕಣ

ಜನಪದ ಎನ್ನುವದು ಸ್ತ್ರೀ ಕೇಂದ್ರಿತವಾದ ಭಾವುಕ ನೆಲೆ. ಅವಳ ಹಂಬಲ, ಹತಾಶೆ, ಸಡಗರ ಸಂಕಟಗಳು, ಹಾತೊರಿಕೆ, ಕನವರಿಕೆ ಹಾಗೂ ಪ್ರತಿರೋಧಗಳಿಗೆ ಒಂದು ಅಭಿವ್ಯಕ್ತಿ ಮಾಧ್ಯಮವಾಗಿ ಅದು ರೂಪಗೊಂಡಿರುವಂತದ್ದಾಗಿದೆ. ಜನಪದ ಧಾರೆಯುದ್ದಕ್ಕೂ ಹೆಣ್ಣನ್ನು ಉತ್ತಮರ ಮಗಳು ಆಗಿಸುವ ಅಭೀಪ್ಸೆ ಒಂದು ಪುರುಷ ಪ್ರಣೀತವಾದ ಅನುಕೂಲಸಿಂಧು ಗರತಿ ಧರ್ಮವನ್ನು ರೂಪಿಸಿದೆ ಮತ್ತೆ ಅದು ಒಂದು ಹೆಣ್ಣಿನ ಮೂಲಕವೆ ಇನ್ನೊಂದು ಹೆಣ್ಣಿಗೆ ಧಾರೆಯೆರೆಯುವಂತೆ ಸಂಯೋಜಿಸಲಾಗಿದೆ.
ಲಿಂಗರಾಜ ಸೊಟ್ಟಪ್ಪನವರ್‌ ಬರೆಯುವ “ಉತ್ತರದ ಕತೆಗಳು” ಅಂಕಣ

Read More

ಲೋಕದೃಷ್ಟಿಯೂ ಲೋಕಾ ರೂಢಿಗಳು: ಲಿಂಗರಾಜ ಸೊಟ್ಟಪ್ಪನವರ್‌ ಅಂಕಣ

ಸಿಕ್ಕೊಂಡು ಸೀರಿ ಉಟ್ಕಂಡಿಯವೂ ಹುಷಾರು..: ಮನೆಯ ಹಿರಿಯ ಹೆಂಗಸರು ಹಿರಿಯರಿಗೆ ಹೇಳಿ ಕಳಿಸುವ ಅತಿ ಎಚ್ಚರಿಕೆಯ ಮಾತು ಇದು. ಹಲವು ನೆರಿಗೆಗಳನ್ನು ಸೀರೆಗೆ ಆಧ್ಯಾರೋಪಿಸಿದಂತಹ ಕಟು ಎಚ್ಚರ ಇಲ್ಲಿ ಸಂಕೇತದಂತೆ ಇದೆ. ಎಡವದಿರುವ ಜಾರದಿರುವ ಎಚ್ಚರ ಹೆಜ್ಜೆ ಹೆಜ್ಜೆಗೂ ಗಂಟೆ ಹೊಡೆಯುತ್ತಿರುತ್ತದೆ. ಜನಪದ ಧಾರೆಯಲ್ಲಿ ಇಂಥದೊಂದು ಸ್ತ್ರೀ ಕೇಂದ್ರಿತ ಎಚ್ಚರದ ಮಾತುಗಳು ಉದ್ದಕ್ಕೂ ಸಿಗುತ್ತವೆ.
ಲಿಂಗರಾಜ ಸೊಟ್ಟಪ್ಪನವರ್‌ ಬರೆಯುವ “ಉತ್ತರದ ಕತೆಗಳು” ಅಂಕಣದ ಎರಡನೆಯ ಬರಹ

Read More

ಲಿಂಗರಾಜ ಸೊಟ್ಟಪ್ಪನವರ್‌ ಹೊಸ ಅಂಕಣ “ಉತ್ತರದ ಕತೆಗಳು” ಶುರು..

ನಿತ್ಯ ಬದುಕಿನ ಜಂಜಡಗಳನ್ನು ಹಗುರಗೊಳಿಸಿಕೊಳ್ಳುವ ಸಾಧನ ಮಾರ್ಗಗಳಾಗಿ ಇವು ಬಳಕೆಯಲ್ಲಿವೆ. ಇವುಗಳು ವೈಯಕ್ತಿಕ ಬದುಕನ್ನು ರಂಜಿನೀಯಗೊಳಿಸುವಲ್ಲಿ ಮತ್ತು ಸಾಮಾಜಿಕವಾದ ಪರಸ್ಪರವಾದ ಒಂದು ಬಂಧವನ್ನು ಮನುಷ್ಯ ಮನುಷ್ಯರ ನಡುವೆ ರೂಪಿಸುವಲ್ಲಿ ಮಹತ್ವವಾದವು. ಇದನ್ನು ಜಾನಪದ ದಾರಿ ಸಾಬೀತುಪಡಿಸಿದೆ.
ಲಿಂಗರಾಜ ಸೊಟ್ಟಪ್ಪನವರ್‌ ಬರೆಯುವ ಉತ್ತರ ಕರ್ನಾಟಕದ ಬದುಕು ಮತ್ತು ಸಂಸ್ಕೃತಿಯ ಕುರಿತ ಅಂಕಣ “ಉತ್ತರದ ಕತೆಗಳು”

Read More

ಚಿಗರಿ ಬಸ್ಸಿನ ಗಂಧರ್ವ: ಲಿಂಗರಾಜ ಸೊಟ್ಟಪನವರ್‌ ಪ್ರಬಂಧ

ನಾನು ಸರ್‌ಗೆ ಐದುನೂರು ಕೊಟ್ಟೆ.. ಅವರು ಮಡಚಿ ಇಟ್ಟುಕೊಂಡರು. ಆಯ್ತು ಎಂದರು.. ನಾನು ನಿಂತೇ ಇದ್ದೆ. ಯಾಕೋ ಅಂದರು.. ನಾನು ಮತ್ತೆ ಐದು ನೋಟು ಕೊಟ್ಟೆ. ಅವರು ಹೈರಾಣ. ಪ್ರಯೋಗ ಮಾಡಿದ್ದು ಅರ್ಥವಾಯಿತು. ಅವರು ಏನೊಂದು ಹೇಳದೆ ಮೌನವಾದರು. ಹೋಗಿ ಕುತ್ಕೋ ಅಂದರು ಡೆಸ್ಕ್‌ನಲಿ ಕೂತೆ. ಸ್ವಲ್ಪ ಹೊತ್ತು ಹಾಗೇ ನೋಡಿದರು. ಹೀಗೆಲ್ಲ ಮಾಡಬಾರದು.. ಎಂದರು ಅಷ್ಟೇ. ನಾನು ಹಾಗೆಲ್ಲ ಮಾಡಿಯೂ ಐದು ನೋಟುಗಳನ್ನು ಅವರಿಗೆ ಕೊಟ್ಟಿದ್ದೆ. ಅವರು ತಪ್ಪನ್ನು ಮಾತ್ರ ತಿದ್ದುವ ಪ್ರಯತ್ನ ಮಾಡಿದ್ದರು.
ಲಿಂಗರಾಜ ಸೊಟ್ಟಪ್ಪನವರ್‌ ಬರೆದ ಪ್ರಬಂಧ ನಿಮ್ಮ ಓದಿಗೆ

Read More

ನನ್ನ ಉಂಡೆ ಪಂಚಮಿ ಕತೆ!

ಪಾಕ ಹದಕ್ಕೆ ಬಂದಂತೆನಿಸಿತು. ಅಷ್ಟೂ ಸಾಮಾಗ್ರಿ ಸುರುವಿ ಗೊಟ.. ಗೊಟ.. ಗೊಟಾಯಿಸಿ ಪರಾತಕ್ಕೆ ಸುರುವಿದೆ. ಈಗಲೆ ಕಟ್ಟುವದೋ.. ಆರಿದ ನಂತರವೋ..? ಮತ್ತೆ ಓವರ್ ಟು ಅವ್ವಾ.. ತಲೆ ಇದ್ದಲ್ಲಿಂದಲೆ ಓಡಿತು. ಆರಿದ ಮೇಲೆ ಉಂಡೆಯಾಗುವದಿಲ್ಲವೋ ಮಂಕೆ. ಉಂಡೆ ಬಂಡೆಯಾಗುತ್ತದೆ.. ಅವ್ವ ತಿಳಿ ಹೇಳಿದಂತಾಯಿತು. ಅಂಗೈಗೆ ಎಣ್ಣೆ ನೀರು ಸವರಿಕೊಂಡು ಸುಡು ಸುಡುವದನ್ನೆ ಎಳೆದುಕೊಂಡೆ. ಬರೆ ಕೊಟ್ಟಂತಾಯಿತು. ಹಾ.. ಎಂದಿತು ಜೀವ. ಅದು ನೋವೋ ಸುಖವೋ ಅಂತೂ ಉಂಡೆಗಳೆಂಬ ಗುಂಡುಗಳು ತಯಾರಾದವು.
ಲಿಂಗರಾಜ ಸೊಟ್ಟಪ್ಪನವರ್ ಬರೆದ ಪ್ರಬಂಧ ನಿಮ್ಮ ಓದಿಗೆ

Read More
  • 1
  • 2

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ