ನೌಕರಿ ಬಿಟ್ಟ ಎಂ.ಟೆಕ್ ಪದವೀಧರ ಬಾವಿ ತೋಡಿದ: ಸಿದ್ದು ಸತ್ಯಣ್ಣನವರ ಬರಹ

ಸೂರ್ಯಕಾಂತ್ ಕೃಷಿಯೆಡೆಗಿನ ಸೆಳೆತ ಇತ್ತಲ್ಲ, ಅದೇನೂ ಸಣ್ಣದಲ್ಲ. ಆದರೆ ನೀರಿಲ್ಲದೆ ಕೃಷಿ ಕೆಲಸ ಮಾಡುವುದು ಹೇಗೆ? ಅದಕ್ಕಾಗಿ ಬೋರ್‍ವೆಲ್ ಉತ್ತರದಂತೆ ಕಾಣಿಸಿದರೂ ಅದು ಪರಿಹಾರವಾಗಿ ಕಾಣಲಿಲ್ಲ. ಅದಕ್ಕಾಗಿ ಬೋರ್‍ವೆಲ್ ಹಾಕಿಸಲು ಆತನ ಮನಸ್ಸು ಒಪ್ಪಲಿಲ್ಲ. ಸತತ ಐದು ತಿಂಗಳು ಒಬ್ಬರೇ ಬಾವಿ ತೋಡಿದರು. ಮೈಗೆ ಗಾಯ, ನೋವು ಎಲ್ಲಾ ಆದವು. ಆಗ ಜನರ ಪ್ರತಿಕ್ರಿಯೆ ಇತ್ತಲ್ಲ, ಅದು ಇರಿದದ್ದು ಮನಸ್ಸಿಗೆ; ಎಲ್ಲಾ ಗಾಯಕ್ಕಿಂತ ಹೆಚ್ಚು ಕಾಡಿದ್ದು ಅದೇ ಎನ್ನುವುದು ಸೂರ್ಯಕಾಂತ್ ಮನದಾಳ.
ಸಿದ್ದು ಸತ್ಯಣ್ಣವರ ಹೊಸ ಕೃತಿ “ಬೆಳಕಿನ ತೆನೆ”ಯ ಒಂದು ಬರಹ ನಿಮ್ಮ ಓದಿಗೆ

Read More