ಜಂಕ್ಷನ್ ಪಾಯಿಂಟಿನ ಕಥೆಗಾರನಿಗೆ ಕೆಂಡಸಂಪಿಗೆಯ ಅಭಿನಂದನೆಗಳು

ಕನ್ನಡದ ತರುಣ ಕತೆಗಾರ ಹಗರಿಬೊಮ್ಮನಹಳ್ಳಿಯ ದಾದಾಪೀರ್ ಜೈಮನ್ ತಮ್ಮನ್ನು ಕಲಾಭ್ಯಾಸಿ ಎಂದೇ ಗುರುತಿಸಿಕೊಳ್ಳಲು ಇಷ್ಟಪಡುತ್ತಾರೆ. ಅವರ ಮೊದಲ ಕಥಾಸಂಕಲನ ‘ನೀಲಕುರಿಂಜಿ’ ಕೇಂದ್ರ ಸಾಹಿತ್ಯ ಅಕಾಡೆಮಿಯ 2022ರ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಗಿದೆ. ಪ್ರಶಸ್ತಿಗಳು ಪ್ರಕಟವಾದಾಗ ಎದುರಾಗುವ ಸಂಭ್ರಮಗಳು, ಜೊತೆಗೇ ಬರುವ ಟೀಕೆಗಳು ಇತ್ಯಾದಿ  ಸಾಹಿತ್ಯ ಕೃತಿಗಳು ಎದುರಿಸಬೇಕಾದ ʻಮಂಥನʼ ಎಂದು ಹೇಳುತ್ತ ಈ ಕ್ಷಣವನ್ನು ಸ್ವೀಕರಿಸಿದ್ದೇನೆ ಎನ್ನುತ್ತಾರೆ ದಾದಾಪೀರ್ . ಕೆಂಡಸಂಪಿಗೆಯಲ್ಲಿ ‘ಜಂಕ್ಷನ್ ಪಾಯಿಂಟ್’ ಅಂಕಣ ಬರೆಯುತ್ತಿರುವ ದಾದಾಪೀರ್ ಪ್ರಶಸ್ತಿ ಪಡೆದ ಸಂಭ್ರಮವನ್ನು ಸಂಕೋಚದಿಂದಲೇ ಇಲ್ಲಿ ಹಂಚಿಕೊಂಡಿದ್ದಾರೆ.

Read More