ಬೆಳೆದ ಅಕ್ಕಿಯ ಉಣ್ಣುವ ತವಕ…: ಗುರುಪ್ರಸಾದ ಕುರ್ತಕೋಟಿ ಅಂಕಣ
ಇದೊಂಥರ ವೈರುಧ್ಯ. ಚೆನ್ನಾಗಿದೆ ಆದರೂ ತಿನ್ನೋಲ್ಲ! ಯಾಕಿರಬಹುದು? ಬಹುಶಃ ಬೆಳ್ಳಗೆ ಪಾಲಿಶ್ ಮಾಡಿದ ರೇಷನ್ ಅಕ್ಕಿಯನ್ನು ತಿಂದು ತಿಂದು ಅವರಿಗೆ ರೂಡಿ ಆಗಿಬಿಟ್ಟಿದೆಯೋ ಏನೋ. ತವಡನ್ನು ತೆಗೆದು ಅದರಲ್ಲಿ ಏನೂ ಇರದಂತೆ ಮಾಡಿ ಪಾಲಿಶ್ ಮಾಡಿ ಕೊಡುವ ಅಕ್ಕಿಯೇ ಎಲ್ಲರಿಗೂ ಪ್ರಿಯ. ಶ್ರೀಮಂತರು ಅಷ್ಟೇ ಯಾಕೆ ತಿನ್ನಬೇಕು ಎಲ್ಲರೂ ತಿನ್ನೋಣ ಅಂತ ಇವರೂ ಪಾಲಿಶ್ ಅಕ್ಕಿಯ ಮೊರೆ ಹೋದರೆ? ಇದೆ ಕಾರಣಕ್ಕೆ ಶ್ರೀಮಂತರಿಗೆ ಬರುವ ಸಕ್ಕರೆ ಕಾಯಿಲೆ, ಹೃದಯ ರೋಗ ಈಗ ಎಲ್ಲರಿಗೂ ಬರುತ್ತಿದೆ.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಗ್ರಾಮ ಡ್ರಾಮಾಯಣ” ಅಂಕಣ ನಿಮ್ಮ ಓದಿಗೆ