Advertisement

Tag: Akshatha Krishnamurthy

ಚಳಿಗಾಳಿ, ಸಿಹಿಗಾಳಿಯ ಕಂಪೆಲ್ಲ ಸೊಗಸಾಗಿ..

ಚಳಿಗಾಲಕ್ಕೆಂದೆ ಅರಳುವ ಕೆಲವು ಕಾಡ ಹೂಗಳಿಗೆ ಹೆಸರಿಲ್ಲದಿದ್ದರೂ ಬಣ್ಣಗಳಿವೆ. ಈ ಬಣ್ಣದ ಹೂಗಳಿಗೆ ಹೆಸರಿಡುವ ಕೆಲಸವೂ ಅಣಶಿ ಮಕ್ಕಳಿಂದ ಸದ್ದಿಲ್ಲದೆ ನಡೆಯುತ್ತದೆ. ಕೊರೆವ ಚಳಿಯಲ್ಲೂ ಮಕ್ಕಳೆಲ್ಲ ಹಳ್ಳದ ಅಂಚಿರುವ ಕಾಡ ಮರದ ತುದಿಯನ್ನೇರಿ ಹಳ್ಳದ ನೀರಿಗೆ ಧುಮುಕಿ ಈಜುವ ಸಾಹಸದ ಕ್ರೀಡೆಯಲ್ಲಿ ತಲ್ಲೀನರಾಗಿದ್ದಾರೆ. ಶಿಶಿರನ ಹೆಸರು ಕೇಳತ್ತಿದ್ದಂತೆಯೆ ನದಿಯೂ ಕೂಡ ನಲುಮೆಯ ಮಾತಾಡಿದೆ. ಪ್ರತಿ ಚಳಿಗಾಲಕ್ಕೆ ಕಾಂದಾಬಜ್ಜಿ ಬಿಸಿ ಬಿಸಿ ತಯಾರಿಸಿ ಮಾರುವ…

Read More

ಕಾಜುಗಾರ ಮನೆಯ ಇರುಳ ಬೆಳಕು

ಆ ದಿನ ನಾಗರಪಂಚಮಿ ಹಬ್ಬ. ಇದ್ದ ಸಾಮಾನಿನಲ್ಲಿಯೇ ಸೂಳಿರೊಟ್ಟಿ ಮಾಡಬೇಕೆಂಬುದು ಶಿಕ್ಷಕಿಯರ ಸಂಕಲ್ಪ. ಕರಾವಳಿ ಜನರ ಸಂಪ್ರದಾಯದಂತೆ ಹಬ್ಬಕ್ಕೆ ಮನೆ ಮಂದಿಯೆಲ್ಲ ಸೇರಿ ಮಾಡುವ ಸೂಳಿರೊಟ್ಟಿ ಆ ದಿನದ ವಿಶೇಷ ತಿಂಡಿ. ಇದನ್ನು ಮಾಡಲು ಇಡ್ಲಿ ಬೇಯಿಸುವ ಪಾತ್ರೆ ಬೇಕೆ ಬೇಕು. ಆದರೂ ಹೊಂದಿಸಿ ಗುಣಿಸಿ ಇದ್ದ ಅಡುಗೆ ಪಾತ್ರೆಯಲ್ಲಿಯೆ ಸೂಳಿರೊಟ್ಟಿ ಮಾಡಿ ತಿಂದಾಗ ಒಂದು ಸಾಹಸವೇ ಆಗಿತ್ತು. ಅಷ್ಟೊಂದು ನೀಟಾಗಿ ಬರದ ಸೂಳಿರೊಟ್ಟಿಗಳು ಸಿ.ಆರ್‌. ನಾಯ್ಕರ ಬಾಯಿಗೂ ಬಿತ್ತು.  ಅಣಶಿಯ ಚಳಿ ಮಳೆ ಗಾಳಿಯಲ್ಲಿ ಹಬೆಯಾಡುವ ಬೆಳಗ್ಗಿನ ಬಿಸಿ ಬಿಸಿ ಚಹಾದ ಜೊತೆಗೆ…

Read More

ಅಣಶಿ ಘಟ್ಟದ ಮೇಲಿನ ಹಾದಿ

ಈ ಘಟ್ಟದ ಮಾರ್ಗದಲ್ಲಿ ಸಾಗುತ್ತಿದ್ದರೆ ಯಾರೋ ಹಿಂಬದಿಯಿಂದ ನಮ್ಮನ್ನು ಗಮನಿಸುತ್ತ ಅನುಸರಿಸುತ್ತ ಬಂದ ಹಾಗೆ ಅನಿಸುತ್ತದೆ. ಪಡ್ಡೆ ಹುಡುಗರ ಹಾಗೆ ಸೀಟಿ ಹಾಕುತ್ತ ನಮ್ಮ ಬೆನ್ನ ಹಿಂದೆಯೇ ಯಾರೋ ಬಂದಂತೆ ಅನಿಸಿ, ತಿರುಗಿ ನೋಡಿದರೆ ಯಾರೂ ಕಾಣುವುದಿಲ್ಲ.  ಇದ್ದಕ್ಕಿದ್ದಂತೆ ಸೀಟಿಯ ಸದ್ದು ನಿಲ್ಲುತ್ತದೆ. ಹೀಗೆ ಕಾಡುವ ಪಡ್ಡೆ ಹುಡುಗನ ಹೆಸರು ‘ನೀಲಿ ಸಿಳ್ಳಾರ’.  ಈ ವಿಶಿಷ್ಟ ಹಕ್ಕಿರಾಯ ಕಾಡಿನ ಸೊಬಗು ಹೆಚ್ಚಿಸುವವ. -ಅಕ್ಷತಾ ಕೃಷ್ಣಮೂರ್ತಿ ಬರೆಯುವ ‘ಕಾಳಿಯಿಂದ ಕಡಲಿನವರೆಗೆ’ ಸರಣಿಯಲ್ಲಿ ಕಾಡಿನ ವಿಸ್ಮಯಗಳ ವಿವರ. 

Read More

ಅಣಶಿ ಎಂಬ ಮಳೆ ಹಾಡಿನ ಊರು

ಕಾಳೀ ನದಿ ಎಂದರೆ ಕಪ್ಪು ಸುಂದರಿ. ಆಕೆಯದು ಸುಲಲಿತ ಸಲಿಲ ಹರಿವಲ್ಲ. ಏಳುಬೀಳು, ತಿರುವು ಮುರುವುಗಳ ನಡಿಗೆ.  ಸೂಪಾ, ಬೊಮ್ಮನಳ್ಳಿ, ಕೊಡಸಳ್ಳಿ, ಕದ್ರಾ ಅಣೆಕಟ್ಟೆಗಳನ್ನು ಆಕೆ ದಾಟಬೇಕು. ಉತ್ತರ ಕನ್ನಡ ಜಿಲ್ಲೆಯ ಜನರ ಕೃಷಿಗೆ ಜೀವನಾಡಿಯಾದವಳು. ಆಕೆ ಕೊಟ್ಟ ಅಂತರ್ಜಲದಿಂದಲೇ ಜೋಯಿಡಾ ತಾಲ್ಲೂಕಿನ ದಟ್ಟಕಾಡುಗಳು ಹೆಮ್ಮೆಯಿಂದ ನಿಂತಿವೆ. “

Read More

ಹಸಿರಿನ ಮಡಿಲಲ್ಲಿ ಕುಣಬಿಯವರ ಹಾಡುಹಬ್ಬ

“ಒಂದು ನಿರ್ದಿಷ್ಟ ಮರದ ಬುಡದಿಂದ ತುದಿಯವರೆಗೂ ಹಣ್ಣುಗಳು ಇದ್ದರೆ ಬಹಳ ಮಳೆಯೆಂದು, ಕಡಿಮೆ ಹಣ್ಣು ಇದ್ದರೆ ಮಳೆ ಕಡಿಮೆ ಎಂದು, ನಡು ನಡುವೆ ಹಣ್ಣು ಇದ್ದರೆ ಮಳೆ ಒಮ್ಮೊಮ್ಮೆ ಹೆಚ್ಚು ಕಡಿಮೆ ಆಗಬಹುದೆಂದೂ ಖಚಿತವಾಗಿ ಹೇಳುತ್ತಾರೆ. ಕುಣಬಿ ಸಮುದಾಯಕ್ಕೆ ಯುಗಾದಿಯೆಂದರೆ ಪ್ರಕೃತಿಯ ಮಡಿಲಿನಲ್ಲಿ ಕುಳಿತೊಂದು ಹಾಡು ಹಾಡಿದಂತೆ.
ಈ ವರ್ಷದ ಯುಗಾದಿಯ ಸಂಭ್ರಮಕ್ಕೆ ಅಕ್ಷತಾ ಕೃಷ್ಣಮೂರ್ತಿ ಬರಹ ನಿಮ್ಮ ಓದಿಗೆ…”

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ನುಡಿ ರಂಗವಲ್ಲಿ: ಶ್ರುತಿ ಬಿ.ಆರ್.‌ ಕಥಾಸಂಕಲನಕ್ಕೆ ಡಾ. ರಾಜೇಂದ್ರ ಚೆನ್ನಿ ಮುನ್ನುಡಿ

‘ಎಲ್ಲೆಗಳ ದಾಟಿದವಳು’ ಯಶಸ್ವಿಯಾದ ಕತೆಯಾಗಿದೆ. ಕತೆಯ ಪ್ರವೇಶದ ಭಾಗವು ಅಜ್ಜಿ ಮತ್ತು ಮೊಮ್ಮಗಳ ಪ್ರೀತಿ ಹಾಗೂ ತುಂಟತನದ ಸಂಬಂಧವನ್ನು ಕತೆಯ ಅರ್ಥಪೂರ್ಣ ಭಾಗವನ್ನಾಗಿಸುತ್ತದೆ. ಏಕೆಂದರೆ ಕತೆಯ ಮುಖ್ಯ…

Read More

ಬರಹ ಭಂಡಾರ