ಗೋಹರ್‌ಬಾಯಿ ಕತೆ ಹೇಳಿದ ‘ಪ್ರತಿಗಂಧರ್ವʼ: ಚಿತ್ರಾ ವೆಂಕಟರಾಜು ಸರಣಿ
‘ಪ್ರತಿಗಂಧರ್ವʼ ದಂತಹ ನಾಟಕದ ಅಭಿನಯ ಬಹಳ ಸವಾಲಿನದು. ಏಕೆಂದರೆ ಹೆಚ್ಚಿನ ಪಾತ್ರಗಳು ಕಲಾವಿದರದ್ದು. ಗೋಹರ್ ಬಾಯಿ ಪಾತ್ರ ಮಾಡುವ ಕಲಾವಿದೆ, ನಾಟಕದ ಪಾತ್ರ ಮಾಡುವುದರ ಜತೆಗೆ ನಾಟಕದೊಳಗಿರುವ ರಂಗಸ್ಥಳದಲ್ಲಿ ಅಭಿನಯ ಮಾಡಬೇಕಾಗುತ್ತದೆ. ಅಂದರೆ ನಾವು ನೋಡುತ್ತಿರುವ ಪಾತ್ರ ಗೋಹರ್ ಬಾಯಿ. ಗೋಹರ್ ಬಾಯಿ ನಾಟಕದೊಳಗೆ ಮಾಡಿದ ಪಾತ್ರ ಗೂಢಾಚಾರಿಣಿಯದು. ಗೂಢಾಚಾರಿಣಿಯ ಪಾತ್ರ ಮಾಡಿದ ಗೋಹರ್ ಬಾಯಿ ಪಾತ್ರಧಾರಿ, ಅದು ಮುಗಿದ ಮೇಲೆ ಮತ್ತೆ ಗೋಹರ್ ಆಗಬೇಕು. ಆಗ ಅಲ್ಲಿನ ಅಭಿನಯಗಳೆರಡೂ ಬೇರೆಯಾಗಬೇಕಾಗುತ್ತದೆ.
ಚಿತ್ರಾ ವೆಂಕಟರಾಜು ಬರೆಯುವ “ಚಿತ್ತು-ಕಾಟು” ಸರಣಿ
