Advertisement

Tag: asha Jagadeesh

ಲೋಕದ ಕಣ್ಣಿಗೆ ಇವಳಿನ್ನೂ ರಾಧೆಯೇ… : ಆಶಾ ಜಗದೀಶ್ ಅಂಕಣ

“ಅವಳಾದರೂ ಯಾಕೆ ಅಷ್ಟೊಂದು ಪ್ರೀತಿಸಬೇಕಿತ್ತು… ಅದೂ ತನ್ನನ್ನೇ ಕಳೆದುಕೊಳ್ಳುವಷ್ಟು, ಮರಳಿ ಪಡೆಯಲಾರದಷ್ಟು, ಅಳಿದು ಉಳಿಯುವಷ್ಟು, ಅಳಿಯದೆ ಇರಲಾರದಷ್ಟು… ಸ್ವಾರ್ಥವನ್ನು ತುಂಬಿಕೊಂಡು ಪ್ರೇಮದ ಲೇಪ ಹಚ್ಚಿ ಜಗತ್ತನ್ನು ಮೋಡಿಗೊಳಿಸಲು ಹೊರಡುವ ಮಹತ್ವಾಕಾಂಕ್ಷಿ ಸಮರ ಸಿಂಹರ ನಡುವೆ ಒಂದೇ ಒಂದು ಕೆಂಪು ಗುಲಾಬಿಯ ಸಸಿಯನ್ನು ಆ ಕಪ್ಪು ನೆಲದ ಮೇಲೆ ನೆಟ್ಟು ಹಿಂತಿರುಗುವ ಒಂದೇ ಒಂದು ಚಿಕ್ಕಾಸೆ ಹೊತ್ತು ನಡೆದವಳ ಹೆಜ್ಜೆ ಗುರುತುಗಳು…”

Read More

ಮೌನಕ್ಕೆ ಮೌನವೇ ಹೊರಬರುವ ಹಾದಿಯಾದಾಗ…: ಆಶಾಜಗದೀಶ್ ಅಂಕಣ

“ಒಬ್ಬ ಕವಿ ತಾನು ಪ್ರಪಂಚವನ್ನು ನೋಡಿ ಗ್ರಹಿಸಿದ್ದು ಒಂದು ಬಗೆಯ ಜ್ಞಾನವಾದರೆ ಪ್ರಪಂಚ ಅವನಿಗೆ ಅನಿವಾರ್ಯವಾಗಿ ಕಲಿಸಿದ ಅಥವಾ ನೀಡಿದ ಜ್ಞಾನ ಮತ್ತೊಂದೇ ಬಗೆಯದು. ಕವಿ ಇದೆರೆಡರ ಸಮಪಾಕದಲ್ಲಿ ಬೆಂದು ಬರೆದಾಗ ಕವಿತೆ ಯಾರನ್ನಾದರೂ ಮುಟ್ಟಿ ತಟ್ಟಬಲ್ಲದು. ಮತ್ತೆ ಗ್ರಹಿಕೆ ಯಾವ ಬಗೆಯದ್ದೇ ಇರಲಿ ನನ್ನ ಗ್ರಹಿಕೆ ಎನ್ನುವುದು ಬಹಳ ಸೀಮಿತ ಕ್ಷಿತಿಜ. ಅದನ್ನು ಸಾಮಾನ್ಯೀಕರಿಸುವ ಹೊತ್ತಿನಲ್ಲಿ ಒಂದು ಕಾಳಜಿ ಒಂದು ಜಾಗ್ರತೆ ಬೇಕೇಬೇಕಿರುತ್ತದೆ.”

Read More

ಕಪ್ಪೆಚಿಪ್ಪಿನೊಳಗೆ ಮುತ್ತಾದ ಸೋನೆಮಳೆ…: ಆಶಾ ಜಗದೀಶ್ ಅಂಕಣ

“ಇದ್ದಕ್ಕಿದ್ದಂತೆ ಅವನೆದುರು ಮತ್ತೊಂದು ಹುಡುಗ ಧುತ್ತೆಂದು ಪ್ರತ್ಯಕ್ಷನಾಗುತ್ತಾನೆ. ಅವನ ಕೈಲಿ ಅರಳಿದ ಛತ್ರಿಯಿದೆ. ಆದರವನು ಇವನ ಅಪ್ಪನಿಗೆ ಆಗದವರ ಮಗ. ಇವನು ಇನ್ನೇನು ಸುಮ್ಮನೇ ಅವನನ್ನು ಹಾದು ಹೋಗಬೇಕು… ಅಷ್ಟರೊಳಗೆ ಅವನು ಇವನ ಬಳಿ ಬರುತ್ತಾನೆ. ಇಬ್ಬರೂ ಒಂದೇ ಛತ್ರಿಯಡಿ ನಡೆಯತೊಡಗುತ್ತಾರೆ. ಇಬ್ಬರ ನಡುವೆಯೂ ಮಾತೊಂದಿಲ್ಲ. ಮಳೆ ಸುರಿಯುತ್ತಲೇ ಇದೆ. ನಾಯಿ ಮರಿಗೆ ಒರಗಿಸಿಕೊಳ್ಳುವ ಎದೆ ಸಿಕ್ಕ ಸಂಭ್ರಮ…”

Read More

ಕಥಾಲೋಕದ ‘ಹೊಸನೀರು…’. : ಆಶಾ ಜಗದೀಶ್ ಅಂಕಣ

“ಮನೆಯಲ್ಲಿ ಹಿಡಿ ಕೂದಲಿಲ್ಲ! ಸೌಕಾತಿ ಚವರಿ ಮಾಡಿ ಕೊಡಲು ಹೇಳಿದ್ದಾಳೆ ಬೇರೆ, ಅಂಥವಳಿಗೆ ಮಾಡಿಕೊಟ್ಟರೆ ನಾಲ್ಕು ಕಾಸು ಹೆಚ್ಚಿಗೆ ಸಿಕ್ಕಿತು ಎನ್ನುವ ಆಸೆ ಇವಳಿಗೆ. ಇಂತಹ ಸಂದಿಗ್ಧದಲ್ಲಿ ಅವಳಿಗೆ ಕಾಣಿಸುವ ಒಂದೇ ದಾರಿ ಎಂದರೆ ತನ್ನದೇ ಸೊಂಪು ಕೂದಲನ್ನು ಕತ್ತರಿಸಿ ಚವರಿ ಮಾಡಿಕೊಡುವುದು. ಹಸುವಿಗೆ ಹೆಸರುವಾಸಿ ದುಗ್ಗಿ ಕೊನೆಗೆ ಅದನ್ನೇ ಮಾಡುತ್ತಾಳೆ. ಇದು ತಿಳಿಯದ ಆ ಸೌಕಾತಿ ಚವರಿಯನ್ನು ಮೆಚ್ಚಿ ತಲೆಗೆ ಹಚ್ಚಿಕೊಂಡು…”

Read More

ರಾಧಾ ಮಾಧವನಿಗೊಲಿದ ಮುರಳಿಗಾನ…: ಆಶಾಜಗದೀಶ್ ಅಂಕಣ

“ಜಗತ್ತು ಅಪಾರ ಸತ್ಯಗಳನ್ನು ಒಳಗೊಂಡು ಮುಚ್ಚಿಟ್ಟುಕೊಂಡು ಹುಡುಕಿಕೊಳ್ಳಿ ಎಂದು ಮುಗುಮ್ಮಾಗಿ ಕೂತಿದೆ. ನಾವೇ ನಾವು ನಾವಾಗಿ ಬೊಗಸೆಯೊಡ್ಡಿಕೊಂಡು ಸತ್ಯವನ್ನು ಹುಡುಕಿ ಹೊರಡಬೇಕಿದೆ. ಇಲ್ಲಿನ ಒಂದೊಂದು ಜೀವ ಅಜೀವಗಳಿಗೂ ಅಂತರ್ ಸಂಬಂಧವಿದೆ. ಅದನ್ನು ಅರಿತು ಒಳಗೊಂಡು ಬದುಕಬೇಕಿದೆ. ಆದರೆ ಆ ಎಡೆಯಲ್ಲಿ ನಮ್ಮ ಪ್ರಯತ್ನವೆಷ್ಟಿದೆ?! ಕೆಲವೊಮ್ಮೆ ಶೂನ್ಯ! ಇದು ಕವಿಯನ್ನು ನೋಯಿಸಿದೆ.”

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಅಂಪೈರ್‌ ಮೇಡಂ: ಕೆ. ಸತ್ಯನಾರಾಯಣ ಕಾದಂಬರಿಯ ಪುಟಗಳು…

ಹುಡುಗನ ತಮ್ಮನಿಗೆ ಪೋಲಿಯೋದಿಂದ ಕಾಲು ತಿರುಚಿಕೊಂಡು ಪೇಟೆ ಬೀದಿಯ ಒಳ ಓಣಿಯ ಬಲಗಡೆ ಕ್ರಾಸಿನಲ್ಲಿ ಒಂದು ಕಾಂಡಿಮೆಂಟ್‌ ಸ್ಟೋರ್ಸ್‌ ಹಾಕಿಕೊಟ್ಟಿದ್ದು ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಶ್ರೀದೇವಿಯ ಗಂಡನಾಗುವವನು…

Read More

ಬರಹ ಭಂಡಾರ