ಸಮತೆಯ ಸಂತ, ಕಾಮ್ರೇಡ್ ವಿ.ಎನ್. ಪಾಟೀಲ: ರಂಜಾನ್ ದರ್ಗಾ ಸರಣಿ
ಪ್ರಾಮಾಣಿಕ ರಾಜಕಾರಣಿಗಳು ತಮ್ಮ ಇಳಿವಯಸ್ಸಿನಲ್ಲಿ ಎಷ್ಟೊಂದು ಕಷ್ಟಪಡುವರು ಎಂಬುದರ ಬಗ್ಗೆ ಅರಿವಿದ್ದ ನನಗೆ ಅಂದು ಬಹಳ ಹೊತ್ತಿನವರೆಗೆ ನಿದ್ರೆ ಬರಲಿಲ್ಲ. ಪ್ರಾಮಾಣಿಕ ರಾಜಕಾರಣಿಗಳಿಗೆ ಇಂಥ ಗತಿ ಬರದೆ ಬೇರೆ ದಾರಿಯಿಲ್ಲ ಎನಿಸಿತು. ಎಷ್ಟೋ ಮರಿಪುಢಾರಿಗಳು ವಿಧಾನ ಸೌಧ, ಮಂತ್ರಿಗಳ ಮನೆ ಮತ್ತು ಶಾಸಕರ ಭವನದ ಮುಂದೆ ಕಾರಲ್ಲಿ ಸುತ್ತಾಡುವುದನ್ನು ನೋಡಿದ ನನಗೆ, ನನ್ನ ನಾಯಕನೊಬ್ಬ ಈ ರೀತಿ ಯಾವ ಸೌಲಭ್ಯಗಳೂ ಇಲ್ಲದೆ ಬದುಕುವುದನ್ನು ನೋಡಿ ಅತೀವ ಖೇದವೆನಿಸಿತು.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 69ನೇ ಕಂತು ನಿಮ್ಮ ಓದಿಗೆ