Advertisement

Tag: Dasara

ನವರಾತ್ರಿಯಲ್ಲಿ ನನಗೆ ಅಮ್ಮ ಸಿಕ್ಕಳು…: ಗಾಯತ್ರಿ ರಾಜ್ ಬರಹ

ಕಣ್ಣು ತೇವಗೊಂಡು, ಭಾವ ಗಂಟಲುಬ್ಬಿ ಬಂದು, ಆ ನವದುರ್ಗೆಯರಲ್ಲೂ, ನನ್ನಲ್ಲೂ, ನನ್ನ ಮಗಳಲ್ಲೂ ಅಮ್ಮನನ್ನೇ ಗುರುತಿಸುತ್ತಾ ಅವಳು ಕಲಿಸಿದ ದೇವರ ನಾಮ ಗುನುಗುತ್ತೇನೆ. ಅವಳನ್ನೇ ಮೈವೆತ್ತಂತೆ ಮತ್ತೆ ಮತ್ತೆ ಮೈದುಂಬಿ ಹಾಡುವಾಗ, ನನ್ನ ಮಗಳು ಕೂಡ ನನ್ನ ಜೊತೆ ಗುನುಗುತ್ತಾ ಮುಗುಳ್ನಗುತ್ತಾಳೆ. ತಲೆಮಾರುಗಳ ಸಂಯೋಜನೆಯೊಂದು ಸಜೀವವಾಗಿ ಕಣ್ಣೆದುರು ನಿಂತಂತಾಗುತ್ತದೆ. ನನ್ನೊಳಗಿನ ಅಮ್ಮ ಈಗ ಅವಳ ತುಟಿಯಲ್ಲಿ ಮೂಡುತ್ತಿದ್ದಳೆ. ಅವಳೂ ಕೂಡ ನಾಳೆ ನಾ ಅಮ್ಮನಿಂದ ಕಲಿತು, ಕಲಿಸಿದ ಹಾಡನ್ನೇ ತನ್ನದೇ ದನಿಯಲ್ಲಿ, ತನ್ನದೇ ಭಾವದಲ್ಲಿ ಪುನರ್ಜೀವಗೊಳಿಸುತ್ತಾಳೆ.
ನವರಾತ್ರಿ ಆಚರಣೆಯಲ್ಲಿ ಅಮ್ಮನ ನೆನಪುಗಳ ಕುರಿತು ಗಾಯತ್ರಿ ರಾಜ್ ಬರಹ

Read More

ಅವರವರ ಭಾವಕ್ಕೆ……: ಚಂದ್ರಮತಿ ಸೋಂದಾ ಸರಣಿ

ಹಬ್ಬಗಳಲ್ಲಿ, ಅದರಲ್ಲಿಯೂ ನವರಾತ್ರಿಯಲ್ಲಿ ಕೊಡುವ ದಕ್ಷಿಣೆ ನಮಗೆ ಪಾಕೆಟ್‌ಮನಿ ತರಹ. ಆಗ ನಮಗೆ ಕೊಡುತ್ತಿದ್ದುದು ಹತ್ತು ನಯಾಪೈಸೆ. ಎಲ್ಲ ಹಬ್ಬಗಳಲ್ಲಿ ಕೊಡುತ್ತಿದ್ದ ದಕ್ಷಿಣೆಯನ್ನು ಜೋಪಾನವಾಗಿ ಕಾಪಿಟ್ಟು ಅದರಿಂದ ಬಣ್ಣದ ದಾರ, ಮಣಿಗಳನ್ನು ತರಿಸಿಕೊಂಡು ಲೇಸು, ಬಾಗಿಲತೋರಣ, ಕಸೂತಿ, ಮಣಿಗಳಿಂದ ಆರತಿ ಕಟ್ಟು ತಯಾರಿಸಿ ನಮ್ಮ ನಮ್ಮ ಕೌಶಲಗಳನ್ನು ಮೆರೆಯಲು ಈ ಹಣ ಸಹಕಾರಿಯಾಗಿತ್ತು.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಒಂಭತ್ತನೆಯ ಕಂತು

Read More

ಅರಸೊತ್ತಿಗೆಯ ಸೌಂದರ್ಯವೂ ಹಿಂಸೆಯೂ:ಸುಜಾತಾ ತಿರುಗಾಟ ಕಥನ

“ವಿನ್ಯಾಸಗಾರರ ಕೈಲಿ ಅರಳಿದ ಬೆಳಕಿನ ಹೂವಂತೆ, ಚೆಂಡಂತೆ, ಉರಿವ ಸಾಲುಗಳಂತೆ, ಅಕ್ಷರದ ಸಾಲುಗಳಂತೆ, ಪದಕಟ್ಟಿನಂತೆ ಕರಾರುವಕ್ಕಾಗಿ ರೂಪು ಪಡೆಯುವ ಅವುಗಳ ಚಲನೆ ಅತ್ಯಂತ ಪುರಾತನ ಕಾಲವೊಂದನ್ನು ನೆನಪಿಸುವುದರೊಂದಿಗೆ ವರ್ತಮಾನದ ಇಂದಿನ ಇಸವಿಯನ್ನು ಕೂಡಾ ತೋರುತ್ತವೆ.”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ