ಮಳೆಬೆಳೆ, ಸಂತೋಷ, ನೆಮ್ಮದಿಗಳ ಕಣಜ
ಕಳೆದ ಇಡೀ ಬೇಸಿಗೆಯಲ್ಲಿ ನಮ್ಮ ರಾಣಿರಾಜ್ಯದಲ್ಲಿ ಮಳೆ ಎಂಬುದು ಮರೀಚಿಕೆಯಾಗಿತ್ತು. ಬೇಸಿಗೆ ಬರುವುದಕ್ಕೂ ಮುನ್ನ ಸರ್ಕಾರವು ಬರಲಿರುವ ಚಂಡಮಾರುತಗಳ ಬಗ್ಗೆ, ಮಳೆಪ್ರವಾಹಗಳ ಬಗ್ಗೆ ಅದೇನೆಲ್ಲಾ ಎಚ್ಚರಿಕೆ ಕೊಟ್ಟಿತ್ತು ಎಂದರೆ ದೂರಪ್ರವಾಸಕ್ಕೇನಾದರೂ ಹೋದರೆ ಮನೆಕಡೆ ಪರಿಸ್ಥಿತಿ ಏನಪ್ಪಾ ಎಂದೆಲ್ಲ ಚಿಂತೆಯಾಗಿತ್ತು. ಹಾಗೇನೂ ಆಗದೆ ಕಡೆಗೆ ನೆಟ್ಟಗೊಂದು ಸರಿಯಾದ ಮಳೆಯೂ ಬೀಳದೆ, ಬೇರೊಂದು ತರಹದ ಚಿಂತೆಯಾಗಿತ್ತು. ಬಿಸಿಲು ಹೆಚ್ಚಾಗಿ, ಮಳೆನೀರು ಕೊಯ್ಲಿನ ಟ್ಯಾಂಕ್ ಪೂರಾ ಖಾಲಿಯಾಗಿ, ಏನೊಂದೂ ತರಕಾರಿ ಬೆಳೆಯಲಿಲ್ಲ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ಅಂಕಣ