ಎಗ್ ರೈಸ್ ತಿಂತೀರಿ ಸರ್ರ…?
ಮನೆ ಸೇರಿದಾಗ ಹಲವು ಯೋಚನೆಗಳು ಮುತ್ತಿಕೊಂಡವು. ಪಟ್ಟಣದಲ್ಲಿ ಇದ್ದ ನಾವುಗಳು ಅಲ್ಲಿನ ಒತ್ತಡದ ಬದುಕು ಸಾಕಾಗಿ, ಒಂದಿಷ್ಟು ಶುದ್ಧ ಹವೆ, ಹಸಿವಾದಾಗ ವಿಷರಹಿತ ಆಹಾರ ಸಿಕ್ಕರೆ ಅದೇ ಸ್ವರ್ಗ ಅಂತ ಅಲ್ಲಿಂದ ಇಲ್ಲಿಗೆ ನೆಮ್ಮದಿಯನ್ನು ಅರಸಿ ಬರುತ್ತೇವೆ. ಆದರೆ ಶ್ಯಾಮನಂತಹ ಗ್ರಾಮವಾಸಿ ಯುವಕರು ಕೈತುಂಬಾ ದುಡ್ಡು ಮಾಡಿದರೆ ಮಾತ್ರ ಸುಖ ಅಂತ ಅಂದುಕೊಳ್ಳುತ್ತಾರೆ. ಹೌದು ದುಡ್ಡು ಬೇಕು.. ಆದರೆ ಬೆಂಝ್ ಕಾರೆ ಆಗಬೇಕೇ? ಇದ್ದುದರಲ್ಲೇ ಸುಖ ನೆಮ್ಮದಿ ಕಾಣಲು ಸಾಧ್ಯವಿಲ್ಲವೇ?
ಗುರುಪ್ರಸಾದ ಕುರ್ತಕೋಟಿ ಬರೆಯುವ “ಗ್ರಾಮ ಡ್ರಾಮಾಯಣ” ಅಂಕಣ ನಿಮ್ಮ ಓದಿಗೆ