ಭಾವಗಳ ‘ತೇರ’ ಯಾತ್ರೆ….: ರಾಮ್ ಪ್ರಕಾಶ್ ರೈ ಕೆ ಬರಹ
ಜೈಲಿನ ಕೈದಿಯೊಬ್ಬರು “ನಾವು ಮನುಷ್ಯರಾಗಿ ಹುಟ್ಟಿಲ್ಲ, ಮನುಷ್ಯರಾಗಲು ಹುಟ್ಟಿದ್ದೇವೆ” ಎಂದರೆ, ಇನ್ನೊಮ್ಮೆ “ಜೈಲು ಹೆರಿಗೆ ಮನೆಯಂತೆ, ಇಲ್ಲಿಗೆ ಬಂದವರು ಹೊಸ ಹುಟ್ಟು ಪಡೆದೇ ಹೊರಹೋಗುವುದು” ಎನ್ನುತ್ತಾರೆ. ಸುಖದ ಬದುಕು ಸಾಗುತ್ತಿರಬೇಕಾದರೆ ಹಿರಿಯ ಮಹಿಳೆಗೆ ಬಸ್ಸಿನ ಸೀಟು ಬಿಟ್ಟುಕೊಡುವ ಪ್ರಿಯ, ಕಷ್ಟ ಕಾಲಿಟ್ಟಾಗ ಆ ಮಹಿಳೆಯ ಕಡೆಗೆ ನಿರ್ಭಾವುಕ ನೋಟವನ್ನು ಬೀರುವ ಪರಿ, ಆ ಬದಲಾವಣೆಯಂತೂ ಮಾನವ ಬದುಕಿನ ವಾಸ್ತವ ನಡುವಳಿಕೆಗೆ ಹಿಡಿದ ದರ್ಪಣದಂತೆ ಕಾಣುತ್ತದೆ.
ಹೇಮಂತ್ ರಾವ್ ನಿರ್ದೇಶನದ “ಸಪ್ತ ಸಾಗರದಾಚೆ ಎಲ್ಲೋ” ಸಿನಿಮಾದ ಕುರಿತು ರಾಮ್ ಪ್ರಕಾಶ್ ರೈ ಕೆ ಬರಹ