ನೀ ನನಗಿದ್ದರೆ ನಾ ನಿನಗೆ: ಚಂದ್ರಮತಿ ಸೋಂದಾ ಸರಣಿ

ನಮ್ಮ ಬದುಕಿಗೆ ಹತ್ತಿರವಾದ ಹಕ್ಕಿಗಳಲ್ಲಿ ಕಾಗೆ, ಕೋಳಿಗಳೂ ಸೇರುತ್ತವೆ. ಕಾಗೆ ಬಣ್ಣ ಕಪ್ಪು ಅಂತ ಅದನ್ನು ಹಳಿಯುವುದಿದೆ. ಯಾರಾದರೂ ತಮ್ಮ ಮಕ್ಕಳನ್ನು ಹೊಗಳುತ್ತಿದ್ದರೆ ʻಕಾಗೆ ತನ್ನ ಮರಿ ಹೊನ್ನಮರಿ ಅಂದಿತ್ತಂತೆʼ ಎಂದು ಮೂಗುಮುರಿಯುವವರೂ ಇದ್ದಾರೆ. ಕೆಲವು ಬಾರಿ ಮಕ್ಕಳನ್ನು ನಂಬಿಸಲು ಕಾಗೆಯ ಬಳಕೆ ಇದೆ. ಮಗುವಿಗೆ ಕೊಡಬಾರದು ಎಂದಿರುವ ತಿನಿಸನ್ನು ಅದು ಬೇಕೇಬೇಕು ಎಂದು ಹಟಮಾಡಿದರೆ ʻಕಾಕಪಾಯಿ ಕಚ್ಗೊಂಡು ಹೋಯ್ತʼ ಅಂತ ಹೇಳುವುದಿದೆ.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿ

Read More