ಸ್ನೇಹದ ದೋಣಿಯಲಿ ಆನೆಗಳ ನೆನಪಿನ ಪಯಣ

ಜೆನ್ನಿ ಮತ್ತು ಷರ್ಲಿ ಒಂದೇ ಲಾಯದಲ್ಲಿದ್ದರೂ, ಅಕ್ಕ-ಪಕ್ಕದ ಸ್ಟಾಲ್‌ಗಳಲ್ಲಿ ಇರಲಿಲ್ಲ. ಮಧ್ಯದಲ್ಲಿ ಕಬ್ಬಿಣದ ಗೇಟುಗಳು ಇದ್ದವು. ಜೆನ್ನಿಯ ಚಡಪಡಿಕೆಯನ್ನು ಕೇಳಿದ ಷರ್ಲಿ ತಾನೂ ಚಡಪಡಿಸತೊಡಗಿದಳು. ತಮ್ಮ ಸ್ಟಾಲ್‌ಗಳ ನಡುವೆ ಇದ್ದ ಗೇಟುಗಳ ಸಂದಿಗಳ ಮೂಲಕ ತಮ್ಮ ಸೊಂಡಿಲುಗಳನ್ನು ಚಾಚಿ ಹೇಗಾದರೂ ಮಾಡಿ ಒಂದನ್ನೊಂದು ಮುಟ್ಟಲು ಎರಡೂ ಆನೆಗಳು ಪ್ರಯತ್ನ ಪಡಲಾರಂಭಿಸಿದವು. ಗೇಟುಗಳ ತಳ್ಳುವಿಕೆ, ಜೋರಾದ ಘರ್ಜನೆ-ಘೀಳಿಡುವಿಕೆಗಳೂ ಪ್ರಾರಂಭವಾದವು.

Read More