ಹೆಸರು ಧರಿಸಲೊಲ್ಲದ ಅನಾಮಧೇಯರು
ಈ ಮಿಡಲ್ ಸಿಸ್ಟರ್, ಹದಿನೆಂಟು ವರ್ಷದ ಯುವತಿ. ಅವಳಿಗೆ ಪಕ್ಕದೂರಿನಲ್ಲಿ ತನ್ನ ಮತಕ್ಕೆ ಸೇರದ ಒಬ್ಬ ‘ಮೇ ಬಿ’ ಬಾಯ್‍ಫ್ರೆಂಡ್ ಕೂಡ ಇದ್ದಾನೆ. “ನಾನು ಯಾವತ್ತೂ ಹತ್ತೊಂಬತ್ತನೆಯ ಶತಮಾನದ ಕಾದಂಬರಿಗಳನ್ನೇ ಓದುತ್ತೇನೆ, ಇಪ್ಪತ್ತನೆಯ ಶತಮಾನದ ರಾಜಕೀಯದಿಂದ ತಪ್ಪಿಸಿಕೊಳ್ಳಲು ನಾನೇ ಕಂಡುಕೊಂಡ ಶಾಂತಿಮಾರ್ಗವಿದು” ಎನ್ನುವ ಮಿಡಲ್ ಸಿಸ್ಟರ್ ಮನೆಯಿಂದ ಕೆಲಸಕ್ಕೆ, ಕೆಲಸದಿಂದ ಮನೆಗೆ ಸಾಗುವ ರಸ್ತೆಯಲ್ಲಿ ಪುಸ್ತಕ ಓದುತ್ತ ನಡೆಯುತ್ತಾಳೆ. ಓದುವ ಸಂಸ್ಕೃತಿ ಇರದ, ಅಷ್ಟೇನೂ ವಿದ್ಯಾವಂತರಿಲ್ಲದ ಈ ಪ್ರಾಂತ್ಯದಲ್ಲಿ ಅವಳ ಈ ವಿಚಿತ್ರ ಹವ್ಯಾಸಕ್ಕೆ ಮೂಗು ಮುರಿಯುವವರೇ ಎಲ್ಲ.
ಕಾವ್ಯಾ ಓದಿದ ಹೊತ್ತಿಗೆ ಅಂಕಣ.