ದ್ರಾವಿಡ್ ಮತ್ತು ಗಂಗೂಲಿ: ಒಂದು ಅಪೂರ್ವ ಜೋಡಿ
ಅವರ ಕ್ರಿಕೆಟ್ಟನ್ನು ಸದಾಕಾಲ ಸ್ಮರಿಸಲು ಕರ್ನಾಟಕದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ, ‘ದ ವಾಲ್ʼಗೆ ಒಂದು ಗೋಡೆ ಮೀಸಲಿಟ್ಟು ಅವರ ಚಿತ್ರವನ್ನು ಮಾಡಿಸಿದ್ದಾರೆ. ಇದು ಒಂದು ರೀತಿ ಜನಗಳು, ಕ್ರೀಡಾಭಿಮಾನಿಗಳು, ಮುಂದಿನ ಪೀಳಿಗೆಯವರು ರಾಹುಲ್ ದ್ರಾವಿಡ್‌ರ ಆಟವನ್ನು ಇಲ್ಲಿ ಬಂದು ನೋಡಿ ಅವರ ಆಟವನ್ನು ಸ್ಮರಿಸುವುದಕ್ಕೆ ಅವಕಾಶ. ಅದರ ಮೇಲೆ ಕನ್ಸಿಸ್ಟೆನ್ಸಿ, ಕಮಿಟ್ಮೆಂಟ್, ಕ್ಲಾಸ್ ಎಂದು ಬರೆಸಿದ್ದಾರೆ. ಅರ್ಥಾತ್ ಸ್ಥಿರತೆ, ಭದ್ಧತೆ ಮತ್ತು ಆಡುವ ಶಿಸ್ತು ಅನ್ನುವ ಅರ್ಥ ಕೊಡುತ್ತೆ. ಇದೆಲ್ಲವೂ ಅವರ ಆಟಗಾರಿಕೆಯಲ್ಲಿ ನೋಡಬಹುದು.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣ